​ಉಡುಪಿ: ​ಸಂಗೊಳ್ಳಿರಾಯಣ್ಣನಿಗೆ ನುಡಿ ನಮನ

ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ನಡೆದ 73 ನೇಯ ಗಣರಾಜ್ಯೋತ್ಸವ ಮತ್ತು ಸಂಗೊಳ್ಳಿ ರಾಯಣ್ಣನ  191ನೆಯ ಸ್ಮರಣೋತ್ಸವದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಮತ್ತು ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷರು ಸರ್ವ ಸದಸ್ಯರು ಉಪಸ್ಥಿತರಿದ್ದರು.​​
 
ನಂತರ ಉಡುಪಿ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ರಾಯಣ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ 2​ನೇ  ವರ್ಷದ ಹುತಾತ್ಮ ಮಾಲಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ರಾಯಣ್ಣನ ಆರಾಧನೆ ಜನವರಿ 26 ಆಗಸ್ಟ್​ ಹಾಗು ಅಗೋಸ್ತು 15ಕ್ಕಷ್ಟೆ ಸೀಮಿತವಾಗದೆ ನಾವು ಮಾಡುವ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರತಿದಿನ ಅಂತಹ ಮಹಾತ್ಮರನ್ನು ಸ್ಮರಿಸುವಂತಾಗಬೇಕು ಎಂದರು.
ನಮ್ಮ ರಾಜ್ಯ ಸಂಸ್ಥಾಪಕ ಅಧ್ಯಕ್ಷರು ಕಳೆದ ವರ್ಷ ಚಾಲನೆ ನೀಡಿದ ಹುತಾತ್ಮ ಮಾಲಾ ಅಭಿಯಾನ ಮುಂದೊಂದು ದಿನ ರಾಜ್ಯ ಮತ್ತು ರಾಷ್ಟ್ರ ವ್ಯಾಪಿಯಾಗಲಿ ಅದಕ್ಕೆ ನಾವೆಲ್ಲ ಜೊತೆ​ಯಾಗಿ  ನಿಲ್ಲೋಣ ಎಂದು ರಾಜ್ಯದ ಎಲ್ಲಾ ರಾಯಣ್ಣ ಅಭಿಮಾನಿ ಬಳಗದವರಿಗೆ ಮನವಿ ಮಾಡಿದರು.
 
ಈ ಸಂದರ್ಭದಲ್ಲಿ ನಿವೃತ್ತ ಯೋಧ ಕೃಷ್ಣ ಶೆಟ್ಟಿಬೆಟ್ಟು​,​ ಉಪಾಧ್ಯಕ್ಷ ಲಕ್ಷ್ಮಣ್ ಕೊಲ್ಕಾರ್, ಈರಪ್ಪ ಗೌಂಡಿ, ಮಹಿಳಾ ಬಳಗದ ಸವಿತಾ ನೋಟಗಾರ್, ಬಸವರಾಜ್ ಐಹೊಳೆ, ಮಹೇಶ್ ಗುಂಡಿಬೈಲ್, ಸಿದ್ದಣ್ಣ ಪೂಜಾರಿ, ಶರಣಪ್ಪ ಬಾರಕೇರ,​ ​ಹನುಮಂತರಾಯ ಪೂಜಾರಿ​ ​ಮುಂತಾದವರು ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply