ಎಸ್.ಕೆ.ಪಿ.ಎ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಉಡುಪಿ : ಸೌತ್ ಕೆನರಾ ಫೋಟೋಗ್ರಾಫರ್ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಉಡುಪಿ ವಲಯದ ವತಿಯಿಂದ ಬ್ರಹ್ಮಗಿರಿಯ ಸುರಭಿ ಸ್ಟುಡಿಯೋದಲ್ಲಿ ಶುಕ್ರವಾರ (ಮಾ.8) ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಕಲರ್ ಲ್ಯಾಬ್ ಗಳಲ್ಲಿ ಕಳೆದ 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಹಿರಿಯ ಮಹಿಳಾ ಸಿಬ್ಬಂದಿಗಳನ್ನು ಗೌರವಿಸಲಾಯಿತು. ಫೋಟೋ ಪ್ಯಾಲೇಸ್ ಕಲರ್ ಲ್ಯಾಬ್ ನಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಶುಭ ಪೂಜಾರಿ ಹಾಗೂ ವರ್ಣ ಕಲರ್ ಲ್ಯಾಬ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಲಕ್ಷ್ಮೀ ಶೆಟ್ಟಿ ಇವರನ್ನ ಸಂಘದ ಅಧ್ಯಕ್ಷ ಸುಧೀರ್ ಎಂ ಶೆಟ್ಟಿಯವರು ಶಾಲು ಹೊದಿಸಿ , ಫಲ ಪುಷ್ಪ , ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ದಿವಾಕರ್ ಹಿರಿಯಡ್ಕ , ಕೋಶಾಧಿಕಾರಿ ರಮೇಶ್ ಭಟ್ ಎಲ್ಲೂರು , ದೇವದಾಸ್ ಕಾಮತ , ಸುರಭಿ ರತನ್ , ಮುಖೇಶ್ ಅಮೀನ್ , ಪ್ರಕಾಶ್ ಆಲ್ಫೋನ್ಸ್ , ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply