​​ಎಸ್ ಕೆಪಿಎ ​ಉಡುಪಿ ವಲಯಕ್ಕೊಂದು ರಾಜ್ಯೋತ್ಸವ ಪುರಸ್ಕಾರದ ಗರಿ ~ ರಾಘವೇಂದ್ರ ಶೇರಿಗಾರ

ಸರ್ವ ಸದಸ್ಯರು ತಮ್ಮ ಕುಟುಂಬವನ್ನು ಪ್ರೀತಿಸಿದಷ್ಟೇ ಸಮನಾಗಿ ​ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಷಿಯೇಶನ್ ​ಸಂಘಟನೆಯನ್ನು ಪ್ರೀತಿಸಿ ಸಂಘಟನೆಗಾಗಿ ಮಾಡಿದ ತ್ಯಾಗ ದುಡಿದ ಫಲ ಇಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ರೂಪದಲ್ಲಿ ನಮಗೆ ದೊರೆತಿದೆ.​​​ ​ಸದಸ್ಯ​ರೆಲ್ಲರೂ ಒಟ್ಟಾಗಿ ಸಂಭ್ರಮಿ ಸುವ ಭಾಗ್ಯ ನಮಗೆ ಒದಗಿ ಬಂದಿದೆ.

ಈ ಸಂತೋಷದ ಜೊತೆಗೆ ಪ್ರಶಸ್ತಿಯ ಹಿಂದೆ ಅಡಕವಾಗಿರುವ ಕೆಲವೊಂದು ವಿಚಾರಗಳನ್ನು ನೆನಪಿಸಿಕೊಳ್ಳಲೇಬೇಕಾಗಿದೆ.​ ​ನಮ್ಮ ಎಸ್ ಕೆಪಿಎ ಉಡುಪಿ ವಲಯದ ಆರಂಭದಿಂದ ಇಂದಿನವರೆಗೂ ನಮ್ಮ ಸಂಘಟನೆಯನ್ನು ಮುನ್ನಡೆಸಿದ ಅಧ್ಯಕ್ಷರು,​ ​ಪದಾಧಿಕಾರಿಗಳು,​ ​ಕಾರ್ಯಕಾರಿ ಸಮಿತಿಯ ಸದಸ್ಯರು,​ಸಲಹಾ ಸಮಿತಿಯ ಸದಸ್ಯರು ಹಾಗೂ ಸಾರ್ವಕಾಲಿಕ ವಾಗಿ ಸಂಘಟನೆಗೆ ಭೀಮಬಲ ತುಂಬಿದ ಸದಸ್ಯರು ಇವರೆಲ್ಲರ ಜೊತೆಗೆ ನಮ್ಮ ವಲಯದ ಹಂಬಲಕ್ಕೆ ಬೆಂಬಲ ನೀಡಿದ ಸರ್ವಧರ್ಮದ ದಾನಿಗಳನ್ನು ಮರೆಯದೇ ನೆನಪಿಸಿಕೊಳ್ಳ ಬೇಕಾದದ್ದು ನಮ್ಮ ಧರ್ಮ.

ಮರವೊಂದರ ಫಲವನ್ನು ಸವಿಯುವಾಗ ನೆಲ ದೊಳಗಿನ ಜಲ,​ ​ಸಾರವನ್ನು ಹೀರಿಕೊಂಡು ತುತ್ತ ತುದಿಯಲ್ಲಿರುವ ಹಣ್ಣಿಗೆ ರುಚಿ ಸತ್ವವನ್ನು ಕೊಟ್ಟ ಬೇರನ್ನು ಮರೆಯಲಾದೀತೇ?.​

​ಯಾವನೇ ಒಬ್ಬ ವ್ಯಕ್ತಿ ಅಥವಾ ಸಂಘಟನೆಗೆ ಪ್ರಶಸ್ತಿ ಸಲ್ಲಬೆಕಾದರೆ ಹಲವಾರು ವರುಷಗಳ ಸಾಧನೆ,​ ​ತ್ಯಾಗ,​ ​ಸೇವೆ ಎಲ್ಲವೂ ಮಾನದಂಡ ಗಳಾಗುತ್ತವೆ.​ ​

ನಮ್ಮ ಸಂಘಟನೆಯ ತ್ಯಾಗ, ಸಮಾಜಸೇವೆ ಎಲ್ಲವೂ ಸರಕಾರದ ಗಮನಸೆಳೆದಿದೆ ಎಂಬುದು ಸಂತೋಷದ ಸಂಗತಿ. ಈ ಪ್ರಶಸ್ತಿ ನಮ್ಮ ಸಂಘಟನೆಗೊಂದು ಗೌರವದ ಗರಿ.​ ​

ಮತ್ತೊಮ್ಮೆ ಇತರ ಸಂಘ ಸಂಸ್ಥೆಗಳು ನಮ್ಮತ್ತ ಕತ್ತು ತಿರುಗಿಸಿ ನೋಡುವಂತಾಗಿದೆ.​ ಛಾಯಾ ಗ್ರಾಹಕರ ಕಾರ್ಯ ಶೈಲಿಯನ್ನು ಅನುಕರಿಸು ವಂತಾಗಿದೆ.​ ​

ಪ್ರಶಸ್ತಿ ದೊರಕಿದ ಸಂದರ್ಭದಲ್ಲಿ ಉಡುಪಿ ವಲಯದ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿರುವ ಜನಾರ್ದನ್ ಕೊಡವೂರು ಮತ್ತು ಅವರ ತಂಡ ಹಾಗೂ ಸರ್ವ ಸದಸ್ಯರು ಅಭಿನಂದನೆಗೆ ಪಾತ್ರರು. ‌ಜೈ S.K.P.A.

 
 
 
 
 
 
 
 
 
 
 

Leave a Reply