ಜೇಸಿಐ ವತಿಯಿಂದ ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆ

ಸಾಲಿಗ್ರಾಮ: ಜೇಸಿಐ ಸಾಲಿಗ್ರಾಮ ವಡ್ಡರ್ಸೆ ಸಿಟಿಯ ವತಿಯಿಂದ ವಿವೇಕ ವಿದ್ಯಾಸಂಸ್ಥೆಯಲ್ಲಿ ಮಕ್ಕಳಿಗೆ ಹಾಗೂ ಸಂಸ್ಥೆಯ ಸಿಬ್ಬಂದಿಗಳೆಲ್ಲರಿಗೂ ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆ ಅಂಗವಾಗಿ ಭಾವೈಕ್ಯತಾ ಪ್ರಮಾಣವಚನವನ್ನು ಜೇಸಿಐನ ಅಧ್ಯಕ್ಷ ಜೇಸಿ ಸತೀಶ್ ವಡ್ಡರ್ಸೆ  ನೀಡಿದರು.

 ಉದ್ಯಮಿ ಸುಬ್ರಾಯ ಆಚಾರ್ , ಮುಜರಾಯಿ ಸಚಿವರ ಆಪ್ತ ಸಹಾಯಕ ಪಿಡಿಓ ಹರೀಶ್ ಕುಮಾರ್ ಶೆಟ್ಟಿ, ಸಂಸ್ಥೆಯ ಪ್ರಾಂಶುಪಾಲ ಜಗದೀಶ್ ನಾವಡ ಹಾಗೂ ಸಿಬ್ಬಂದಿ ವರ್ಗದವರು, ಜೇಸಿಐ ವಡ್ಡರ್ಸೆ ಯ ಸ್ಥಾಪಕಾಧ್ಯಕ್ಷ ಹಾಗೂ ವಲಯಾಧಿಕಾರಿ ಜೇಸಿ ಸಚ್ಚಿದಾನಂದ ಅಡಿಗ , ಕಾರ್ಯದರ್ಶಿ ಜೇಸಿ ಪದ್ಮನಾಭ ಆಚಾರ್ , ಕಾರ್ಯಕ್ರಮ ನಿರ್ದೇಶಕ ಜೇಸಿ ಪ್ರವೀಣ್ ಕುಮಾರ ಉಪಸ್ಥಿತಿತರಿದ್ದರು.

Leave a Reply