ರೋಟರಿ ಜಿಲ್ಲೆಯಲ್ಲಿ ವಲಯ 5ರ ಸಾಧನೆ ಅವಿಸ್ಮರಣೀಯ – ರಾಜಾರಾಮ್ ಭಟ್

 ಶಿರ್ವ:-ಕೊರೋನಾದ ಸಂಕಷ್ಟಕಾಲದಲ್ಲಿಯೂ ಸಮಸ್ಯೆಗಳನ್ನು ಅವಕಾಶವನ್ನಾಗಿ ಬಳಸಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವಾ ಕಾರ್ಯಗಳು ನಡೆದಿವೆ. ಸಹಾಯಕ ಗವರ್ನರ್ ನವೀನ್ ಅಮೀನ್‌ರ ಸಂಘಟನಾ ಚಾತುರ್ಯದಲ್ಲಿ 13 ವಲಯಸಭೆಗಳು, ರೋಟರಿ ಪ್ರತಿಷ್ಠಾನಕ್ಕೆ ಅಧಿಕ ದೇಣಿಗೆ, ಕಾರ್ಕಳ ರೋಟರಿಯ ವಿಶೇಷ ಸಾಧನೆಗಳು, ಸಮ್ಮೇಳನದ ಯಶಸ್ವಿಗೆ ನೀಡಿದ ಸಹಕಾರ ಅವಿಸ್ಮರಣೀಯ. ರೋಟರಿ ಜಿಲ್ಲೆಯಲ್ಲಿ ವಲಯ 5ರ ಸರ್ವಾಂಗೀಣ ಸೇವಾ ಸಾಧನೆಗಳು ತೃಪ್ತಿ ತಂದಿವೆ ಎಂದು ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3182ಯ ನಿಕಟಪೂರ್ವ ಗವರ್ನರ್ ರಾಜಾರಾಮ್ ಭಟ್ ಹೇಳಿದರು.

ಗುರುವಾರ ಸಂಜೆ ಶಂಕರಪುರ ಬಿಎಮ್‌ಜೆ ಇವೆಂಟ್ ಹಾಲ್‌ನಲ್ಲಿ ಜರುಗಿದ ವಲಯ 5ರ “ಸೊಲ್ಮೆ ಸಂದೈತೊ” ಕೃತಜ್ಞತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಿಯೋಜಿತ ಜಿಲ್ಲಾ ಗವರ್ನರ್ ಡಾ.ಗೌರೀ ವಲಯದ ವಿಶೇಷ ಸಂಚಿಕೆ “ಭರವಸೆ” ಬಿಡುಗಡೆಗೊಳಿಸಿ ನವೀನ್ ಅಮೀನ್ ರವರ ಸಾಧನೆಗಾಗಿ ಅಭಿನಂದಿಸಿದರು. ಮುಖ್ಯ ಅತಿಥಿಗಳಾಗಿ ರೋಟರಿ ಜಿಲ್ಲಾ ಮಾಜಿ ಗವರ್ನರ್‌ಗಳಾದ ಡಾ.ಎ.ಭರತೇಶ್ ಕಾರ್ಕಳ, ಅಭಿನಂದನ್ ಶೆಟ್ಟಿ ಕುಂದಾಪುರ, ಮಾಜಿ ಜಿಲ್ಲಾ ಕಾರ್ಯದರ್ಶಿ ಆಲನ್ ವಿನಯ್ ಲೂವಿಸ್ ಕಲ್ಯಾಣಪುರ, ವಲಯ ಸಹಾಯಕ ಗವರ್ನರ್ ಡಾ.ಅರುಣ್ ಹೆಗ್ಡೆ ಶಿರ್ವ, ವಲಯ ತರಬೇತುದಾರ ಬಿ.ಪುಂಡಲೀಕ ಮರಾಠೆ, ವಲಯ ಸೇನಾನಿ ಸುರೇಶ್ ರಾವ್ ಶುಭ ಹಾರೈಸಿದರು. 

ವಲಯದಲ್ಲಿ ಅತ್ಯುತ್ತಮ ಸೇವಾ ಸಾಧನೆಗೈದ ಕ್ಲಬ್‌ಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಲಾಯಿತು. ವಲಯದ ಕಾರ್ಕಳ, ರೋಕ್‌ಸಿಟಿ, ನಿಟ್ಟೆ, ಬೆಳ್ಮಣ್, ಪಡುಬಿದ್ರಿ, ಉಚ್ಚಿಲ, ಕಾಪು, ಮಣಿಪುರ, ಶಂಕರಪುರ. ಶಿರ್ವ ರೋಟರಿ ಅಧ್ಯಕ್ಷರುಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ವಲಯದ ವತಿಯಿಂದ ಗವರ್ನರ್ ರಾಜಾರಾಮ್ ಭಟ್, ವರದಾಂಬಾ ದಂಪತಿಗಳಿಗೆ ಸನ್ಮಾನಿಸಲಾಯಿತು. ಶ್ರೀನಿವಾಸ ರಾವ್ ಕಾಪು ಸನ್ಮಾನಪತ್ರ ವಾಚಿಸಿದರು. ವಯಲದ ಸರ್ವ ಕ್ಲಬ್‌ಗಳ ವತಿಯಿಂದ ಸಹಾಯಕ ಗವರ್ನರ್ ನವೀನ್ ಅಮೀನ್, ಪತ್ನಿ,ಜಯಶ್ರೀ , ಮಾತೃಶ್ರೀ ಜಲಜಾ ಅಮೀನ್‌ರನ್ನು ಅಭಿನಂದಿಸಲಾಯಿತು. ಸಂತೋಷ್ ಕುಮಾರ್ ನಿರೂಪಿಸಿದರು. ವಲಯ ಕಾರ್ಯದರ್ಶಿ ಚಂದ್ರ ಪೂಜಾರಿ ಧನ್ಯವಾದವಿತ್ತರು.

 
 
 
 
 
 
 
 
 
 
 

Leave a Reply