ಕೊಡವೂರು : ಫೂಟ್ ಪಲ್ಸ್ ತೆರಪಿ

ಹಳೆವಿದ್ಯಾರ್ಥಿ ಸಂಘ, ಯುವಕ ಸಂಘ ಕೊಡವೂರು ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮತ್ತು ಕಂಪಾನಿಯೋ ಕುಂದಾಪುರ ಇವರ ಸಂಯುಕ್ತಾಶ್ರಯದಲ್ಲಿ ಯುವಕ ಸಂಘದ ಕಾರ್ಯಾಲಯದಲ್ಲಿ ನಡೆಯುತ್ತಿರುವ ಫೂಟ್ ಪಲ್ಸ್ ತೆರಪಿ ನಿರೀಕ್ಷೆಗೂ ಮೀರಿ ಜನಸ್ಪಂದನೆಯನ್ನು ಪಡೆದುಕೊಂಡಿದ್ದು ಹದಿನೈದು ದಿನಗಳ ಈ ಶಿಬಿರದಲ್ಲಿ ಹತ್ತು ದಿನಗಳು ಈಗಾಗಲೇ ಮುಗಿದಿದ್ದು 225 ಕ್ಕೂ ಹೆಚ್ಚು ಶಿಬಿರಾರ್ಥಿಗಳು ಪ್ರತಿದಿನ ಈ ತೆರಪಿಯ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ.

ಕೊರೊನೋತ್ತರ ಈ ಕಾಲಘಟ್ಟದಲ್ಲಿ ಆರೋಗ್ಯದ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡುತ್ತಿದ್ದು, ಅದರಲ್ಲೂ ಯಾವುದೇ ಔಷದಗಳಿಲ್ಲದೆ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಗಮನಹರಿಸುತ್ತಿರುವ ನಿಟ್ಟಿನಲ್ಲಿ ರಕ್ತಸಂಚಾರ ಮತ್ತು ನರ ಸಂಬಂಧಿತ ಕಾಯಿಲೆಗಳಿಗೆ ಉತ್ತಮ ಪರಿಹಾರ ನೀಡುವ ಈ ತೆರಪಿಯನ್ನು ಪಡೆದುಕೊಳ್ಳುವಲ್ಲಿ ಸ್ಥಳೀಯ ಜನರು ಉತ್ಸುಕರಾಗಿದ್ದಾರೆ.

ಹಾಗೆಯೇ ಈ ಆರೋಗ್ಯ ಶಿಬಿರದ ಸಮಾರೋಪ ಸಮಾರಂಭವು ಡಿ.4 ರಂದು ಬೆಳಿಗ್ಗೆ 10.30ಕ್ಕೆ ಕೊಡವೂರು ಯುವಕ ಸಂಘದ ಕಾರ್ಯಾಲಯದ ಮುಂಭಾಗದಲ್ಲಿ ಸ್ಥಳೀಯ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದ್ದು,ಎಲ್ಲಾ ಶಿಬಿರಾರ್ಥಿಗಳಿಗೆ ಅಂದು ಮಧ್ಯಾಹ್ನ ಭೋಜನದ ವ್ಯವಸ್ಥೆಯನ್ನು ಮಾಡಲಾಗುವುದೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ

 
 
 
 
 
 
 
 
 
 
 

Leave a Reply