ಮೇಸ್ತ್ರಿಗಳೇ ದೇವರಾಗೋಣ ಈ ಬಡವನ ಪಾಲಿಗೆ

ಕಾನ್ಸೆಪ್ಟ್ ಅದ್ಭುತ ಯಶಸ್ಸಾಗಿದೆ. ಕೊನೆಯ ಕ್ಷಣದಲ್ಲಿ ಕೈಕೊಟ್ಟ ಬರುತ್ತೇವೆoದು ಒಪ್ಪಿದ ಒಟ್ಟು 5 ಜನ ಮೇಸ್ತ್ರಿಗಳು ಒಂದು ಸ್ವಲ್ಪ ಹೊಡೆತದ ನಡುವೇಯೂ ಬಂದ ಒಟ್ಟು 8 ಮೇಸ್ತ್ರಿ+1 ಕಾರ್ಪೆಂಟರ್ +23 ಜನ ಹೆಲ್ಪರ್ ಗಳಲ್ಲಿ ಅದ್ಭುತವಾಗಿ 8 ಗಂಟೆಯ ತನಕ ಜೊತೆಗಿದ್ದು 85% ಕೆಲಸ ಮುಗಿಸಿ ದೇವರಾಗಿದ್ದಾರೆ.

7ಜನ ಮೇಸ್ತ್ರಿ ಹಾಗು 5 ಜನ ಹೆಲ್ಪರ್ ಗಳು. ಒಟ್ಟಲ್ಲಿ ಯಶಸ್ವೀ ಕಾರ್ಯಕ್ರಮದಲ್ಲಿ ಬಡವನಿಗೆ ಸುಂದರ ಅರಮನೆಯೊಂದು ನಿರ್ಮಾಣ ಗೊಂಡಿದೆ. 10 ವರ್ಷದಲ್ಲಿ ಕನಸೇ ಆಗಿ ಉಳಿದಿದ್ದ ಕುಷ್ಠ ಅವರ ಮನೆಯನ್ನು ಒಂದೇ ದಿನದಲ್ಲಿ ಪೂರ್ತಿ ಗೊಳಿಸಿದ್ದು ನಿಜಕ್ಕೂ ಹೆಮ್ಮೆ ಯ ಸಂಗತಿ. ಮುಂದಿನ 2,3 ದಿನಗಳಲ್ಲಿ ಮನೆಪೂರೈಸಿ ಅತೀ ಶೀಘ್ರದಲ್ಲಿ ನಾವು ಪೂರ್ತಿಗೊಳಿಸಿದ 9 ನೆಯ ಮನೆಯ ಉದ್ಘಾಟನೆ ಶೀಘ್ರದಲ್ಲಿ ನಡೆಯಲಿದೆ. ನೆರವಾಗಿ ಹಾಗು ದಾನಿಗಳಾಗಿ ಹಾಗು ಶುಭ ಚಿಂತಕರಾಗಿ ಭಾಗವಹಿಸಿದ ಎಲ್ಲಾ ಸದಸ್ಯರುಗಳಿಗೆ ಮಗದೊಮ್ಮೆ ಸ್ಮರಿಸಿ ಕೊಳ್ಳುತ್ತಿದ್ದೇನೆ.
7 ಮೇಸ್ತ್ರಿ +1 ಆಚಾರ್ +5 ಮಂದಿ ಹೆಲ್ಪರ್  ಒಟ್ಟು 13 ಮಂದಿಗೆ  ಸರ್ಪ್ರೈಸ್ ಗಿಫ್ಟ್ ಫ್ರಮ್ ಹೋಂ ಡಾಕ್ಟರ್ ಫೌಂಡೇಶನ್… ಸ್ಟಾರ್ ಹೆಲ್ತ್ ಹೆಲ್ತ್ ಇನ್ಶೂರೆನ್ಸ್… ಬಾಂಡ್ ಮಾಡಿ ಈ ವರ್ಷದ ಪ್ರೀಮಿಯಂ ನಾವೇ ಕಟ್ಟಿ ಇವರಿಗೆ ತುರ್ತು ಅಪಘಾತ ಗಳಾದಾಗ 1 ಲಕ್ಷ ರೂಪಾಯಿ ಯ ಕ್ಯಾಶ್ ಲೆಸ್ ಸೌಲಭ್ಯ ಉಡುಪಿಯ ಹಾಸ್ಪಿಟಲ್ ಗಳಲ್ಲಿ ಜೊತೆಗೆ 1 ಲಕ್ಷ ಅಂಗ ವೈಕಲ್ಯ ಹಾಗೇ ಮರಣಿಸಿದಲ್ಲಿ ಕುಟುಂಬ ಕ್ಕೆ 1 ಲಕ್ಷ ವಿಮಾ ಸೌಲಭ್ಯ.
ಹಾಗೇ ವರ್ಷವೂ ನಾವು ನಡೆಸುವ ಕಾರ್ಯಕ್ರಮ ಗಳಲ್ಲಿ ಭಾಗಿಯಾದರೆ ಮತ್ತೆ ಪ್ರೀಮಿಯಂ ಮುಂದಿನ ವರ್ಷವೂ ಕಟ್ಟುವ ಭರವಸೆ ಇದು.  ನಮ್ಮ ಸರ್ಪ್ರೈಸ್ ಗಿಫ್ಟ್ ದೇವರಾದ ಮೇಸ್ತ್ರಿ ಹೆಲ್ಪರ್ ಗಳಿಗೆ.
 
 
 
 
 
 
 
 
 
 
 

Leave a Reply