ವಿಷ್ಣುಮೂರ್ತಿ ಫ್ರೆಂಡ್ಸ್ ಹಾಗೂ ವಿಷ್ಣುಮೂರ್ತಿ ಮಹಿಳಾ ಸಂಘದ ವತಿಯಿಂದ ರಕ್ತದಾನ ಶಿಬಿರ

ಮಣಿಪಾಲ ಎ.15: ವಿಷ್ಣುಮೂರ್ತಿ ಫ್ರೆಂಡ್ಸ್ ಹಾಗೂ ವಿಷ್ಣುಮೂರ್ತಿ ಮಹಿಳಾ ಸಂಘದ 17 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಇಂದು ಬೆಳಿಗ್ಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.

ಉಡುಪಿಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಸ್ವಾಮಿಜಿ ಅವರು ಶಿಬಿರವನ್ನು ಉದ್ಘಾಟಿಸಿದರು. ಬಳಿಕ ಆಶೀರ್ವಚನ ನೀಡಿ ಮಾತನಾಡಿದ ಅವರು, ಮನುಷ್ಯ ಆತುರ ಮಾಡದೆ ಸಮಾಧಾನದಿಂದ ಇದ್ದಾಗ ಅವಘಡಗಳು ನಡೆಯದೆ ತೃಪ್ತಿಕರ ಜೀವನ ನಡೆಸಬಹುದು. ಹಾಗೂ ಯಾವುದೇ ಅಪಘಾತಗಳು ನಡೆಯದೇ ಇದ್ದಾಗ ರಕ್ತದಾನ ಮಾಡುವ ಅಗತ್ಯವಿರುವುದಿಲ್ಲ ಎಂದರು. ಹಾಗೂ ಅಪತ್ತಿನ ಕಾಲದಲ್ಲಿ ಸಹಾಯವಾಗುವ ರಕ್ತದಾನ ಶಿಬಿರ ಶ್ಲಾಘನೀಯವಾದದ್ದು, ಒಂದಷ್ಟು ಜನರಿಗೆ ಉಪಯೋಗವಾಗಲೆಂದು ರಕ್ತದಾನ ಕಾರ್ಯಕ್ರಮ ಆಯೋಜಿಸಿರುವುದು ಪ್ರಶಂಸನೀಯ. ಇದರ ಜೊತೆಗೆ ರಕ್ತದಾನದ ಅಗತ್ಯ,ಅನಿವಾರ್ಯತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯ ಕೂಡಾ ಆಗಬೇಕು ಎಂದರು.

ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೆ ನಡೆದ ಈ ಶಿಬಿರದಲ್ಲಿ ವಿಷ್ಣುಮೂರ್ತಿ ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ದೊಡ್ಡಣಗುಡ್ಡೆ, ಹಿರಿಯ ಸದಸ್ಯ ಸತೀಶ್ ಪುತ್ರನ್, ಕೆಎಂಸಿ ರಕ್ತನಿಧಿ ವಿಭಾಗದ ನಿರ್ದೇಶಕ ಡಾ.ಶಮಿ ಶಾಸ್ತ್ರಿ, ಭಜರಂಗ ದಳದ ಜಿಲ್ಲಾಧ್ಯಕ್ಷ ದಿನೇಶ್ ಮೆಂಡನ್, ಭಜರಂಗದಳ ಉಡುಪಿ ನಗದ ಅಧ್ಯಕ್ಷ ಉದಯ ಪೂಜಾರಿ ಮಠದಬೆಟ್ಟು, ಜೆಸಿಐ ದೊಡ್ಡಣಗುಡ್ಡೆ ಪ್ರಕೃತಿ ಘಟಕದ ಗಣೇಶ್ ನಾಯಕ್, ಜೆಸಿಐ ಉಡುಪಿ ಇಂದ್ರಾಳಿ ರೀಟಾ ಪಿರೇರಾ, ಉದ್ಯಮಿ ಕೀರ್ತೇಶ್ ಕಡಿಯಾಳಿ, ಶ್ರೀಕೃಷ್ಣ ಮುಖ್ಯಪ್ರಾಣ ಗ್ರಾಮೀಣಾಭಿವೃದ್ಧಿ ಸಾಂಸ್ಕೃತಿಕ ಕ್ರೀಡಾ ಸಂಘದ ಕುಣಿಬೆಂಚಿ ಅಧ್ಯಕ್ಷ ಶೇಖರ್ ಮಂಗ್ಲಗುಡ್ಡೆ, ಅಭಯ ಹಸ್ತ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸತೀಶ್ ಸಾಲ್ಯಾನ್, ಉದ್ಯಮಿ ಭಾಸ್ಕರ್ ಶೇರಿಗಾರ್ ಕರಂಬಳ್ಳಿ, ಅದಮಾರು ಮಠದ ವ್ಯವಸ್ಥಾಪಕ ಗೋವಿಂದ ರಾಜ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply