ಮಂದಾರ್ತಿ ಸೇವಾ ಸಹಕಾರಿ ಸಂಘ ಶತಮಾನೋತ್ಸವ ಆಚರಣೆ; ಶತಸಾರ್ಥಕ್ಯಕ್ಕೆ ಚಾಲನೆ

ಮಂದಾರ್ತಿ ಸೇವಾ ಸಹಕಾರಿ ಸಂಘವು ೧೯೨೫ರಲ್ಲಿ ಪ್ರಾರಂಭಗೊಂಡಿದ್ದು, ೨೦೨೫ರಲ್ಲಿ ಶತಮಾನೋತ್ಸವ ಆಚರಿಸಲಿದೆ. ಈ ಪ್ರಯುಕ್ತ ಸಂಘದ ಚಾಮುಂಡೇಶ್ವರೀ ಸಭಾ ಭವನದಲ್ಲಿ ಶತಸಾರ್ಥಕ್ಯ ಎಂಬ ಕಾರ್ಯಕ್ರಮದೊಂದಿಗೆ ಶತಮಾನೋತ್ಸವ ಆಚರಣೆಗೆ ಭಾನುವಾರ ಚಾಲನೆ ದೊರೆಯಿತು. ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಸಂಘದ ನೂತನ ಭೋಜನಾಲಯವನ್ನು ಉದ್ಘಾಟಿಸಿ ಮಾತನಾಡಿ, ಸಹಕಾರಿ ಸಂಘಗಳಲ್ಲಿ ಸ್ಥಳೀಯ ಸಿಬಂದಿಗಳ ಉತ್ತಮ ಸೇವೆಯಿಂದ ಗ್ರಾಹಕರು ಸಹಕಾರಿ ಸಂಘಗಳನ್ನು ಹೆಚ್ಚು ಅವಲಂಬಿಸಿದ್ದಾರೆ ಎಂದರು.

೧೦೦ ವರ್ಷಗಳಲ್ಲಿ ಸಂಘದ ಸಾಧನೆ ಬಗ್ಗೆ ಶ್ಲಾಘಿಸಿದರು.

ಮಂದಾರ್ತಿ ಸೇವಾ ಸಹಕಾರಿ ಮಂದಾರ್ತಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಚ್.ಗಂಗಾಧರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ತಮ್ಮ ವ್ಯಾಪ್ತಿಯ ೫ಗ್ರಾಮಗಳಲ್ಲಿ ಕೂಡ ಶಾಖೆಗಳನ್ನು ತೆರೆದು ಆಯಾ ಗ್ರಾಮದ ಸದಸ್ಯರಿಗೆ ಅನುಕೂಲವಾಗುವಂತೆ ಮಾಡುವ ಇರಾದೆ ಇದೆ. ಈ ಶತಮಾನೋತ್ಸವ ಸಂದರ್ಭದಲ್ಲಿ ೧೦೦ಕೋಟಿ ಠೇವಣಿ ೧೦೦ಕೋಟಿ ಸಾಲ ಸೇರಿದಂತೆ ಒಂದು ಸಾವಿರ ಕೋಟಿ ವ್ಯವಹಾರ ಮಾಡಿ ಇತರರಿಗೆ ಮಾದರಿಯಾಗಬೇಕು ಎನ್ನುವ ಆಶಯ ಅದಕ್ಕೆ ಸರ್ವ ಗ್ರಾಹಕರ ಸಹಕಾರ ಅಗತ್ಯ ಎಂದರು.

 ಈ ಸಂದರ್ಭದಲ್ಲಿ ಮಂದಾರ್ತಿ ದೇವಳದ ಆಡಳಿತ ಮೊಕ್ತೇಸರ ಎಚ್.ಧನಂಜಯ ಶೆಟ್ಟಿ,  

ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಲಿ. ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸಹಕಾರ ನೀಡುವುದು ಸಹಕಾರಿ ಸಂಘ ಮಾತ್ರ ಎಂದರು. 

ಕಾರ್ಯಕ್ರಮದಲ್ಲಿ ಉಡುಪಿ ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘ ನಿ. ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಮೈ ಕರ್ಜೆ, ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ, ಮಂದಾರ್ತಿ ದೇವಳದ ಅನುವಂಶಿಕ ಮೊಕ್ತೇಸರ ಶಂಭು ಶೆಟ್ಟಿ, ಹೆಗ್ಗುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಕೃಷ್ಣ, ಕಾಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ಜಲಂಧರ ಶೆಟ್ಟಿ, ಬಿಲ್ಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರದಾ ಉಪಸ್ಥಿತರಿದ್ದರು. 

ಈ ಸಂದರ್ಭದಲ್ಲಿ ಶತಾಯುಷಿಗಳಾದ ಪಾರ್ವತಿ ವೀರಣ್ಣ ಶೆಟ್ಟಿ ಬಿಲ್ಲಾಡಿ, ಕಾಡೂರು ಕೂಸಿ ಪೂಜಾರಿ ಅವರನ್ನು ಅಭಿನಂದಿಸಿ ಗೌರವಿಸಲಾಯಿತು. ನಿವೃತ್ತ ಯೋಧ ಮಂದಾರ್ತಿ ಪಿ.ರಘುರಾಮ ಶೆಟ್ಟಿ, ಮಂದಾರ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಅನಿಲ್ ಕುಮಾರ್ ಎಸ್., ಹೆಬ್ಬಾಡಿ ಮಹೇಶ್ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾಡೂರು ಗ್ರಾಮ ಪಂಚಾಯತ್ಗೆ ಕಂಪ್ಯೂಟರ್ ವಿತರಿಸಲಾಯಿತು. ಸಂಘದ ನಿರ್ದೇಶಕರುಗಳಾದ ಎಚ್.ವಿಠ್ಠಲ್ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಚಂದ್ರಶೇಖರ್ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಗುರುಪ್ರಸಾದ್, ಬಸವ ಮರಾಠಿ, ಪ್ರವೀಣ್ ಕುಮಾರ್ ಶೆಟ್ಟಿ, ಬೇಬಿ ಪೂಜಾರ್ತಿ,ಪ್ರೇಮಾ, ರಾಧಾ, ಕೆ.ರಾಜಾರಾಮ ಶೆಟ್ಟಿ, ಸಂಘದ ಮುಖ್ಯಕಾರ್ಯನಿರ್ವಹಣಾ ಧಿಕಾರಿ ರಾಮಕೃಷ್ಣ ಶೆಟ್ಟಿ, ಉಪಸ್ಥಿತರಿದ್ದರು. 

ಶೇಡಿಕೊಡ್ಲು ವಿಠ್ಠಲ್ ಶೆಟ್ಟಿ ಸ್ವಾಗತಿಸಿ, ಸುಪ್ರೀತಾ ಡಿ.ಶೆಟ್ಟಿ ಪ್ರಾರ್ಥಿಸಿದರು. ಶಿಕ್ಷಕ ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮಕೃಷ್ಣ ಶೆಟ್ಟಿ ವಂದಿಸಿದರು.

ಸಂಜೆ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಮೇಳದಿಂದ ಯಕ್ಷಗಾನ ಬಯಲಾಟ ನಡೆಯಿತು.

 
 
 
 
 
 
 
 
 
 
 

Leave a Reply