ಸಂಕಷ್ಟದಲ್ಲಿದ್ದವರಿಗೆ ನೇರವಾದ ನಮ್ಮೂರು ಬಾರ್ಕುರು ಫೇಸ್ ಬುಕ್ ಸ್ನೇಹಿತರು

ಸಾಮಾಜಿಕ ಜಾಲತಾಣ  ಫೇಸ್ಬುಕ್ ಮೂಲಕ  ಕಳೆದ ಬಾರಿ ಕೋವಿಡ್ ಲಾಕ್ ಡೌನ್ ಸಂದರ್ಭ ದಲ್ಲಿ  ಸುಮಾರು 650 ಕ್ಕೂ ಹೆಚ್ಚು ಮನೆಗಳಿಗೆ  ಆಹಾರ ಸಾಮಗ್ರಿಗಳ ಕಿಟ್ ಗಳನ್ನು   ನಮ್ಮೂರು ಬಾರ್ಕುರು ಫೇಸ್ಬುಕ್ ಸ್ನೇಹಿತರ ನೆರವಿನಿಂದ ವಿತರಿಸಲಾಗಿತ್ತು.
ಈ ಫೇಸ್ಬುಕ್ ಗ್ರೂಪಿನಲ್ಲಿ ಇರುವ ದಾನಿಗಳ ನೆರವಿನಿಂದ  ಯಾವುದೇ ಅಬ್ಬರದ ಚಾರಗಳಿಲ್ಲದೇ ನೇರವಾಗಿ ಸಂಕಷ್ಟದಲ್ಲಿದ್ದವರ  ಮನೆಗೆ ಕಿಟ್ ಗಳನ್ನು ತಲುಪಿಸಿ ಸುದ್ದಿಯಾಗಿದ್ದ ನಮ್ಮೂರು ಬಾರ್ಕುರು ಫೇಸ್ಬುಕ್ ಗ್ರೂಪ್ ನ ಗೆಳೆಯರು ಈ ಬಾರಿ ಮತ್ತೊಮ್ಮೆ ಸಂಕಷ್ಟದಲ್ಲಿದ್ದವರ ನೆರವಿಗೆ  ಧಾವಿಸಿ ಸುದ್ಧಿಯಲ್ಲಿದ್ದಾರೆ.
ಈ ಬಾರಿ ಗ್ರೂಪಿನಲ್ಲಿ ಇರುವ  ದಾನಿಗಳ ನೆರವಿನಿಂದ ಸುಮಾರು ಎರಡು ಲಕ್ಷ ರೂಪಾಯಿ ಗಳನ್ನು  ಬಾರಕೂರು  ಪರಿಸರದಲ್ಲಿ ಸಂಕಷ್ಟದಲ್ಲಿರುವ ಸುಮಾರು  50 ಕುಟುಂಬಗಳಿಗೆ   ತಲಾ ರೂ 4000/- ದಂತೆ ವಿತರಿಸಲಾಗಿದೆ.
ಈ ಸಹಾಯವನ್ನು ಕೂಡ ಯಾವುದೇ  ಪ್ರಚಾರವಿಲ್ಲದೇ ಫೋಟೋ ವಿಡಿಯೋಗಳ  ಅಬ್ಬರ ಇಲ್ಲದೇ ನೇರವಾಗಿ  ಸಂಕಷ್ಟದಲ್ಲಿರುವವರ  ಮನೆಗಳಿಗೆ  ಗ್ರೂಪಿನ ಸದಸ್ಯರು ಹೋಗಿ ವಿತರಣೆ ಮಾಡಿ  ಬಂದಿರುತ್ತಾರೆ. ಈ ಒಂದು ಕಾರ್ಯಕ್ರಮ ಯಶಸ್ವಿಯಾಗಿ  ನಡೆಯಲು  ನಮ್ಮೂರು ಬಾರಕೂರು ಫೇಸ್ಬುಕ್ ಗ್ರೂಪಿನ ದಾನಿಗಳೇ ಕಾರಣ ಯಾವಾಗಲೂ ನೊಂದವರ ಸಹಾಯಕ್ಕೆ  ಯಾವುದೇ ಪ್ರಚಾರ  ಬಯಸದ ಮಾನವೀಯ ಗುಣದ ದಾನಿಗಳ ಸಹಕಾರ  ಈ ಒಂದು ಕಾರ್ಯಕ್ರಮ ನಡೆಸಲು ಪ್ರೇರಣೆಯಾಗಿದೆ ಎಂದು ಕಾರ್ಯಕ್ರಮದ  ಸಂಯೋಜಕರು ತಿಳಿಸಿದ್ದಾರೆ.
ಆಲ್ವಿನ್ ಅಂದ್ರಾದೆ, ಗಣೇಶ್ ಶೆಟ್ಟಿ, ಆನಂದ್ ಕುಮಾರ್ , ಹರೀಶ್  ಆಚಾರ್ಯ , ಸವಿತಾ ಫುಟಾರ್ದೋ, ಹೇಮಂತ್ ಶ್ರೀಯಾನ್ , ಉದಯ್ ಪೂಜಾರಿ ಬಾರಕೂರು ಇವರೆಲ್ಲರೂ ಸೇರಿ ಈ ಒಂದು ಕಾರ್ಯಕ್ರಮ ಸಂಘಟಿಸುವುದರೊಂದಿಗೆ  ಮನೆಗಳಿಗೆ ತೆರಳಿ ಧನಸಹಾಯ ವಿತರಿಸಿದ್ದಾರೆ. ಪ್ರಪಂಚದಾದ್ಯಂತ ಹರಡಿರುವ  ಸುಮಾರು 10 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ನಮ್ಮೂರು ಬಾರ್ಕುರು ಫೇಸ್ಬುಕ್ ಸ್ನೇಹಿತರ ಈ ಕೆಲಸ ತುಂಬಾ ಮೆಚ್ಚುಗೆಗೆ ಪಾತ್ರವಾಗಿದೆ.
ಅಲ್ಲದೇ ಸಾಮಾಜಿಕ ಜಾಲ ತಾಣಗಳು  ತನ್ಮೂಲಕ  ಸಮಾಜದ ಸಂಕಷ್ಟಗಳಿಗೆ  ಹೇಗೆ ನೇರವಾಗಬಹುದು  ಅನ್ನುವುದಕ್ಕೆ ಮಾದರಿಯಾಗಿದೆ.
 
 
 
 
 
 
 
 
 
 
 

Leave a Reply