ಸೌಂದರ್ಯ ಪ್ರಜ್ಞೆ ಇಂದಿನ ಮಹಿಳೆಯರಲ್ಲಿ ಮೂಡಬೇಕು: ಕೃಷ್ಣ ಭಟ್

ಅಂಕೋಲ : ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಕನ್ನಡ ವೈಶ್ಯ ವೇಲ್ಫೇರ್ ಟ್ರಸ್ಟ್ ಬೆಳಗಾವಿ ಇವರ ಸಹಯೋಗದಲ್ಲಿ ಮತ್ತು ಸಂಗಮ ಸೇವಾ ಸಂಸ್ಥೆ ಹೊನ್ನಾವರ, ಶಾರದಾಂಬ ಮಹಿಳಾ ಮಂಡಲ ಅಂಕೋಲ ಇವರ ಸಹಕಾರದಲ್ಲಿ ನಡೆಯುವ 6 ದಿನಗಳ ಬ್ಯುಟಿಶೀಯನ್ -ಬ್ರೈಡಲ್ ಮತ್ತು ಮೆಹೆಂದಿ ತರಬೇತಿಯ ಉದ್ಘಾಟನ ಕಾರ್ಯಕ್ರಮವು ಅಂಕೋಲ ಕಾಕ್ಕರಮಠದ ವಿಠಲ ಸದಾಶಿವ ದೇವಾಲಯ ಸಭಾಗೃಹ ಇಲ್ಲಿ ಜರುಗಿತು. 

ಉದ್ಘಾಟನೆ ನೆರವೇರಿಸಿದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಪ್ರಾದೇಶಿಕ ಕಛೇರಿ ಕುಮುಟಾದ ಪ್ರಾದೇಶಿಕ ವ್ಯವಸ್ಥಾಪಕ ಕೆ.ಎಸ್ ಭಟ್ ಈಗೀನ ಕಾಲದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿದ್ದಾರೆ ಪುರುಷರಿಗಿಂತ ಮಹಿಳೆ ಯಾವುದರಲ್ಲೂ ಕಡಿಮೆ ಇಲ್ಲ ಮತ್ತು ಬಂದ ಅವಕಾಶಗಳನ್ನು ಕೈಚೆಲ್ಲದೇ ಸದುಪಯೋಗ ಮಾಡಿಕೊಳ್ಳಬೇಕೆಂದು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲದ ಹಿರಿಯ ಸಲಹೆಗಾರ ಶ್ರೀಕಾಂತ್ ಹೊಳ್ಳ ಇವರು ಮಾತನಾಡಿ ತರಬೇತಿಯ ನಂತರ ಮಹಿಳೆಯರು ಸ್ವಉದ್ಯೋಗ ಕೈಗೊಳ್ಳಬೇಕೆಂದು ಕರೆಯಿತ್ತರು. 

ಬೆಳಗಾವಿ ಕನ್ನಡ ವೈಶ್ಯ ವೇಲ್ಫೇರ್ ಟ್ರಸ್ಟ್‍ನ ಅಧ್ಯಕ್ಷ ಕೃಷ್ಣಾನಂದ ಶೆಟ್ಟಿ, ಸಂಪನ್ಮೂಲ ವ್ಯಕ್ತಿ ಮಾಯಾ ಕೆ ಶೆಟ್ಟಿ ಮತ್ತು ಅಂಕೋಲ ಶಾರದಾಂಬ ಮಹಿಳಾ ಮಂಡಳಿಯ ಅಧ್ಯಕ್ಷೆ ಸುಧಾ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಮೊದಲಿಗೆ ಮಣಿಪಾಲ ಭಾರತೀಯ ವಿಕಾಸ ಟ್ರಸ್ಟಿನ (ಬಿವಿಟಿ) ಕಾರ್ಯಕ್ರಮ ಅಧಿಕಾರಿ ಪ್ರತಿಮಾ ಅತಿಥಿಗಳನ್ನು ಸ್ವಾಗತಿಸಿ, ಬಿವಿಟಿಯ ಮಾನವ ಸಂಪನ್ಮೂಲ ಅಧಿಕಾರಿ ಗೀತಾ ಆರ್ ರಾವ್ ವಂದಿಸಿದರು. ಹೊನ್ನಾವರ ಸಂಗಮ ಸೇವಾ ಸಂಸ್ಥೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

 
 
 
 
 
 
 
 
 
 
 

Leave a Reply