ಆಶಾವಾಣಿ ಟ್ರಸ್ಟ್ ಮೂಲಕ ಮಾದರಿ ಸಮಾಜ ಕಾರ್ಯ

ಕೋಟ : ಉಡುಪಿ ಜಿಲ್ಲೆಯ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ ನಿರ್ಮೂಲನೆ ಮಾಡಲು ಒಬ್ಬರು ವೈದ್ಯೆ ಇನ್ನೊಬ್ಬರು ಲ್ಯಾಬೋರೇಟರಿ ತಜ್ಞೆ ಆಶಾವಾಣಿ ಟ್ರಸ್ಟ್ ಮೂಲಕ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿದ್ದಾರೆ.

ತಮ್ಮ ಜೀವದ ಹಂಗು ತೊರೆದು ಅನಾರೋಗ್ಯಕ್ಕೆ ತುತ್ತಾದವರಿಗೆ ಆಸರೆಯಾಗುವ ಕಾರ್ಯ ಮಾಡುತ್ತಿದ್ದಾರೆ.ತಮ್ಮ ದುಡಿಮೆಯಲ್ಲಿ ಸಮಾಜಕ್ಕೆ ಏನಾದರೂ ನೀಡಬೇಕೆಂಬ ತುಡಿತದೊಂದಿಗೆ ಕಳೆದೊಂದು ವರ್ಷದಿಂದ ಈ ಕಾರ್ಯದಲ್ಲಿ ತೊಡಗಿಕೊಂಡ ಆಶಾವಾಣಿ ಟ್ರಸ್ಟ್ ನ ಮುಖ್ಯಸ್ಥೆ ಸಾಲಿಗ್ರಾಮ ಆಂಜನೇಯ ದೇವಳದ ಸನಿಹದಲ್ಲಿ ಕ್ಲಿನಿಕ್ ನಡೆಸುತ್ತಿದ್ದ ಡಾ.ವಾಣಿ ಶ್ರೀ, ಹಾಗೂ ಅದೇ ಪರಿಸರದಲ್ಲಿ ಲ್ಯಾಬೋರೇಟರಿ  ಮೂಲಕ ಕಾರ್ಯ ನಿರ್ವಹಿಸುತ್ತಿದ್ದ ಆಶಾ ಎ. ಹೆಗ್ಡೆ ಆಶಾವಾಣಿ ಟ್ರಸ್ಟ್ ಸಾಲಿಗ್ರಾಮ ತಂಡದೊಂದಿಗೆ, ತನ್ನ ಸಂಗಡಿಗರಾದ ವಿನಯ್ ಕಬ್ಯಾಡಿ, ಪ್ರವೀಣ್ ಯಕ್ಷಿಮಠ ಜೊತೆಗೂಡಿ ಪಟ್ಟಣ ಪಂಚಾಯಿತ್ ಜೊತೆ ಆಶಾವಾಣಿ ಟ್ರಸ್ಟ್ ಮೂಲಕ ಮಾದರಿ ಸಮಾಜ ಮುಖಿ ಕಾರ್ಯಯತ್ ವ್ಯಾಪ್ತಿಯ ಎಲ್ಲಾ ವಾಡ್೯ಗಳಲ್ಲಿ ಲಾಕ್ ಡೌನ್ ನಿಂದ ಸಮಸ್ಯೆಗಿಡಾದ ಕುಟುಂಬಗಳಿಗೆ ಹಾಗೂ ಕೊರೋನ  ಪಾಸಿಟಿವ್ ಬಂದ ಮನೆಗಳಿಗೆ  ಹಾಗೂ ಕಡು ಬಡವರಿಗೆ 2  ತಿಂಗಳಿಗಾಗುವ  ಆಹಾರಕಿಟ್ಟನ್ನು  50 ಮನೆಗಳಿಗೆ ನೀಡಿದ್ದರು.  

ಅಲ್ಲದೆ ಕೋವಿಡ್ ಬಂದ ಮನೆಗೆ ಮೆಡಿಸಿನ್ ನನ್ನು ನೀಡಿ ಸಮಸ್ಯೆಗಿಡಾದವರಿಗೆ ದೈರ್ಯತುಂಬಿ ಆಸ್ಪತ್ರೆಗೆ ರವಾನಿಸುವ  ಕೆಲಸ ಮಾಡುತ್ತಿದ್ದಾರೆ.ಆಶಾವಾಣಿ ಟ್ರಸ್ಟ್ ಹೆಸರಿಗೆ ತಕ್ಕಂತೆ ವಾಟ್ಸಪ್ ಗ್ರೂಪ್ ರಚಿಸಿಕೊಂಡು ಕಾರ್ಯಾಚರಣೆಯಲ್ಲಿ  ತೊಡಗಿಸಿಕೊಂಡು ಕಳೆದೊಂದು ವರ್ಷದಿಂದ ಜನಸೇವೆ ಮಾಡುತ್ತಿರುವ ಸಂಸ್ಥೆಯಾಗಿದೆ.ತನ್ನ ಸಾಮಾಜಮುಖಿ ಸೇವೆ ನಿರಂತರವಾಗಿ ಸಮಾಜಕ್ಕೆ ನೀಡುವ ಹೊಣೆಗಾರಿಕೆ ಆಶಾವಾಣಿ ಟ್ರಸ್ಟ್ ನದ್ದು. 

ಕೋವಿಡ್ ಸೊಂಕು ವ್ಯಾಪಕವಾಗಿ ಹರಡುವುದನ್ನು ಮನಗಂಡ ಟ್ರಸ್ಟ್ ತನ್ನ ಸಹೋದ್ಯೋಗಿ ವಿನಯ್  ಕಬ್ಯಾಡಿ ಹಾಗೂ ಪ್ರವೀಣ್ ಯಕ್ಷಿಮಠರನ್ನ ಸಂಪರ್ಕಿಸಿ ಸ್ಥಳೀಯಾಡಳಿತದ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆದು ವಾಟ್ಸಪ್ ಗ್ರೂಪ್ ರಚಿಸಿಕೊಂಡು ಆಯಾ ವ್ಯಾಪ್ತಿಯಲ್ಲಿ ಕೋವಿಡ್ ಸೊಂಕು ಇರುವ ವ್ಯಕ್ತಿಗಳ ಮಾಹಿತಿ ಪಡೆಯುತ್ತಾರೆ.ಅವರ ಆರೋಗ್ಯ ವಿಚಾರಿಸಿ ತೀವ್ರತರಹದ ಸಮಸ್ಯೆಗಿಡಾದವರನ್ನು ಕೋವಿಡ್ ಆಸ್ಪತ್ರೆಗೆ ಸಾಗಿಸಲು ತೆಕ್ಕಟ್ಟೆ ಫ್ರೆಂಡ್ಸ್ ಆಂಬ್ಯುಲೇನ್ಸ್ ಸೇವೆ ಪಡೆದು ಸ್ಥಳಾಂತರಿಸುವ ಕೈಗೊಂಡಿದ್ದಾರೆ.

ಸ್ಥಳೀಯ ಪ್ರಾಥಮಿಕ ಆಸ್ಪತ್ರೆ‌ ಮತ್ತು ಪಟ್ಟಣಪಂಚಾಯತ್ ಮುಖ್ಯಾಧಿಕಾರಿಯ ಮೂಲಕ ಸೊಂಕಿತರ ಬಗ್ಗೆ ಮಾಹಿತಿ ಪಡೆದು ಅವರ ಗೃಹಕ್ಕೆ ತೆರಳಿ ಕೋವಿಡ್ ಜಾಗೃತಿ ಮೂಡಿಸುವ ಜೊತೆಗೆ ಪಡಿತರ ಕಿಟ್ ವಿತರಿಸಿ ಮಾದರಿ ಕಾರ್ಯ ಮಾಡಿದ್ದಾರೆ.

 
 
 
 
 
 
 
 
 
 
 

Leave a Reply