ಭಾರತೀಯನಿಗೆ ವಿಶ್ವ ಬ್ಯಾಂಕ್ ಅಧ್ಯಕ್ಷ ಪಟ್ಟ!

ವಿಶ್ವ ಬ್ಯಾಂಕ್ ಅಧ್ಯಕ್ಷರಾಗಿ (World Bank) ಭಾರತೀಯ ಮೂಲದ ಅಜಯ್ ಬಂಗಾ (Ajay Banga) ಆಯ್ಕೆಯಾಗಿದ್ದಾರೆ.

ಈ ಕುರಿತು ಸ್ವತಃ ವಿಶ್ವಬ್ಯಾಂಕ್‌ ದೃಢಪಡಿಸಿದೆ. ಮುಂದಿನ 5 ವರ್ಷಗಳ ಅವಧಿಗೆ ಬಂಗಾ ವಿಶ್ವ ಬ್ಯಾಂಕ್‌ ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

*187 ಸದಸ್ಯ ರಾಷ್ಟ್ರಗಳನ್ನು ಒಳ ಗೊಂಡಿರುವ ವಿಶ್ವ ಬ್ಯಾಂಕ್ ಅಧ್ಯಕ್ಷ ಹುದ್ದೆಗೆ ಬಂಗಾ ಆಯ್ಕೆಯಾಗಿದ್ದು, ಈ ಹುದ್ದೆ ಅಲಂಕರಿಸಿದ ಪ್ರಥಮ ಅನಿವಾಸಿ ಭಾರತೀಯ (NRI) ಎನಿಸಿಕೊಂಡಿದ್ದಾರೆ.

ಟ್ರಂಪ್ ಆಡಳಿತದಲ್ಲಿ ನೇಮಕಗೊಂಡ ಹಾಲಿ ವಿಶ್ವಬ್ಯಾಂಕ್‌ ಅಧ್ಯಕ್ಷ ಡೇವಿಡ್ ಮಲ್ಪಾಸ್ (David Malpass) ಅವರ ಅವಧಿ ಜೂನ್‌ 2ಕ್ಕೆ ಮುಕ್ತಾಯವಾಗಲಿದೆ.

 
 
 
 
 
 
 
 
 
 
 

Leave a Reply