ಸಾನ್ವಿ ಎಸ್ ಅಂಚನ್ ಕರ್ನಾಟಕ ರಾಜ್ಯೋತ್ಸವ ಬಾಲ ಪ್ರಶಸ್ತಿಗೆ ಆಯ್ಕೆ

ಕರ್ನಾಟಕ ರಾಜ್ಯೋತ್ಸವ ಬಾಲ ಪ್ರಶಸ್ತಿಗೆ ಕಟಪಾಡಿ ಏಣಗುಡ್ಡೆಯ ಸಾನ್ವಿ ಎಸ್‌ ಅಂಚನ್ ಆಯ್ಕೆ ಆಗಿದ್ದಾಳೆ.

 ಬ್ರಹ್ಮಾವರದ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್‌ನ 8ನೇ ತರಗತಿಯ ವಿದ್ಯಾರ್ಥಿ.ಇವಳ ಕರಾಟೆ,ನೃತ್ಯದ ಸಾಧನೆಗಾಗಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಇವಳು ಸ್ಕೂಲ್ ಲೀಡರ್ ಎಂಬ ಚಲನಚಿತ್ರದಲ್ಲಿ ಅಭಿನಯಿಸಿದ್ದಾಳೆ ಅದೇ‌ ರೀತಿ ಎಂಕಲ್ನ ಕಲಾವಿದರು ಮಟ್ಟು ಇವರ ಮಾಯೊದ ಮಹಾಶಕ್ತಿಲು ಎಂಬ ನಾಟಕದಲ್ಲಿ ನಟನೆಯನ್ನು ಮಾಡುತ್ತಿದ್ದಾಳೆ. ಇವಳ ಬಹುಮುಖ ಪ್ರತಿಭೆಯನ್ನು ಗುರುತಿಸಿಕೊಂಡು ಇದೀಗ ಇವಳ ಸಾಧನೆಯನ್ನು ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಬಾಲ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕರಾಟೆಯನ್ನು ಶ್ರೀಯುತ ರವಿ ಸಾಲಿಯನ್, ನೃತ್ಯವನ್ನು ಶ್ರೀಯುತ ವಸಂತ್ ನಾಯ್ಕ್ (ವಿ-ರಾಕ್ಸ್ ಡ್ಯಾನ್ಸ್ ಅಕಾಡೆಮಿ, ಬ್ರಹ್ಮಗಿರಿ) ಇವರಿಂದ ಕಲಿಯುತ್ತಾ ಇದ್ದಾಳೆ.

ಮಂಗಳೂರಿನ ಇನ್ವೆಂಜರ್ ಫೌಂಡೇಶನ್, ಕಟಪಾಡಿ ಪ್ರಥಮ್ ಮ್ಯಾಜಿಕ್ ವರ್ಲ್ಡ್ ಸಂಯುಕ್ತ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಸಹಯೋಗದಲ್ಲಿ ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ ನಡೆಯುವ ರಾಜ್ಯೋತ್ಸವ ಬಾಲ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಇವಳು ಸಂದೀಪ್ ಕುಮಾರ್ ಫಾರ್ಮಸಿಸ್ಟ್ ಆಫೀಸರ್ ಜಿಲ್ಲಾ ಆಸ್ಪತ್ರೆ ಉಡುಪಿ ಮತ್ತು ಅಶ್ವಿನಿ ,ದೈಹಿಕ ಶಿಕ್ಷಣ ಶಿಕ್ಷಕಿ ಸ.ಪ ಪೂರ್ವ ಕಾಲೇಜು ಮಲ್ಪೆ ಇವರ ಪುತ್ರಿ.

 
 
 
 
 
 
 
 
 
 
 

Leave a Reply