ಕೊಡವೂರು ಮೂಲದ ಗಿನ್ನಿಸ್ ದಾಖಲೆ ವಿದ್ಯಾರ್ಥಿನಿ ಎಸ್ಎಸ್ಎಲ್.ಸಿ ಯಲ್ಲಿ 4ನೇ ಸ್ಥಾನ

ಉಡುಪಿ-12, ಮೂಲತಃ ಕೊಡವೂರಿನ ರಾಯಸ ಕುಟುಂಬದ  ಗುರುಪ್ರಕಾಶ್ ರಾಯಸ ಮತ್ತು ಸರಿತ ಗುರುಪ್ರಕಾಶ್ ಇವರ ಪುತ್ರಿ ತುಳಸಿ . ಜಿ . ರಾಯಸ  SSLC ಪರೀಕ್ಷೆಯಲ್ಲಿ 622/625 (99.52%) ಅಂಕಗಳನ್ನು ಪಡೆದು ನಾಲ್ಕನೇ ಸ್ಥಾನ ಪಡೆದಿದ್ದಳೆ. ಬೆಂಗಳೂರಿನ ಶ್ರೀ ಕುಮಾರನ್ ಚಿಲ್ಡ್ರನ್ ಶಾಲೆಯ ವಿದ್ಯಾರ್ಥಿನಿಯಾದ ತುಳಸಿ “ಅತಿ ಹೆಚ್ಚು ಖಡ್ಗ ಧರಿತ ನೃತ್ಯ ಗಾರರು” ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಿನ್ನಿಸ್ ಧಾಖಲೆ ಪ್ರಶಸ್ತಿ  ಪಡೆದು, ಕರ್ನಾಟಕ ಸಂಗೀತ ಜೂನಿಯರ್ ಮತ್ತು ಭರತನಾಟ್ಯದಲ್ಲಿ ಜೂನಿಯರ್ ಮುಗಿಸಿದ್ದಾಳೆ.  ತೆಂಕು ತಿಟ್ಟಿನ ಚಂಡೆಯನ್ನು ಕೂಡ ಸುಲಲಿತವಾಗಿ ನುಡಿಸುತ್ತಾಳೆ.
ಬೆಂಗಳೂರಿನಲ್ಲಿ ನೆಲೆಸಿರುವ ರಮೇಶ್ ರಾಯಸ ಮತ್ತು ವಾರಿಜ ರಮೇಶ್ ಹಾಗೂ  ಎಲ್ಲೂರಿನ ಸಮೀಪದ ಮಲಂಗೊಳಿಯ ದಿ|| ಶ್ರೀಪತಿ ರಾವ್ ಹಾಗು ಸುಲೋಚನ ರಾವ್ (ಹುಬ್ಬಳ್ಳಿ) ಅವರ ಮೊಮ್ಮಗಳು.
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply