ಗಂಗಾಧರ್ ಕಿದಿಯೂರ್ ಇವರಿಗೆ ಒಲಿದ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಕರಾವಳಿಯ ಕೃಷಿ ಮನೆತನದಿಂದ ಬಂದಿರುವ ಗಂಗಾಧರ್ ಕಿದಿಯೂರ್ ಕಳೆದ ನಾಲ್ಕು ದಶಕಗಳಿಂದ ಸತತವಾಗಿ ತುಳು, ಕನ್ನಡ ರಂಗಭೂಮಿಯಲ್ಲಿ ಕಲಾಮಾತೆಯ ಸೇವೆಯನ್ನು ಮಾಡುತ್ತಾ ಬಂದಿರು ತ್ತಾರೆ. ರಂಗಸಾಹಿತಿಯಾಗಿ 26 ಕನ್ನಡ ಮತ್ತು ತುಳು ನಾಟಕಗಳನ್ನು ಬರೆದು ಮುದ್ರಿಸಿರುತ್ತಾರೆ.

ರಂಗನಿರ್ದೇಶಕನಾಗಿ, ನೂರಾರು ಕನ್ನಡ, ತುಳು ನಾಟಕಗಳನ್ನು ನಿರ್ದೇಶಿಸಿ ಗ್ರಾಮೀಣ ಪ್ರದೇಶದ ಕಲಾವಿದರನ್ನು ಬೆಳೆಸುವ ಪ್ರಯತ್ನ ನಡೆಸಿರುತ್ತಾರೆ. ಕರಾವಳಿಯಾದ್ಯಂತ, ಮಾತ್ರವಲ್ಲದೆ ದೇಶ ವಿದೇಶಗಳಲ್ಲೂ ನಾಟಕ ಪ್ರದರ್ಶನ ನಡೆಸಿರುತ್ತಾರೆ.

ಗಂಗಾಧರ್ ಅವರು ರಚಿಸಿರುವ ಪಿಂಗಾರದ ಬಾಲೆ: ಸಿರಿ: ಜನಪದ ತುಳು ನಾಟಕಕ್ಕೆ ಪ್ರತಿಷ್ಠಿತ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿ ಲಭಿಸಿರುತ್ತದೆ. ಮೂಲ ತುಳುಲಿಪಿಯಲ್ಲಿ ಕೂಡಾ ಮುದ್ರಣಗೊಂಡಿರುವ ಪ್ರಪ್ರಥಮ ನಾಟಕ ಕೃತಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಮೆನ್ಕುನ ಸಿರಿಸಿಂಗಾರ ಎಂಬ ತುಳು ನಾಟಕ ಸಂಪುಟವನ್ನೂ ಕೂಡಾ ಬರೆದು ಲೋಕಾರ್ಪಣೆ ಮಾಡಿರುತ್ತಾರೆ. ಸಾಮಾಜಿಕ ಹಿನ್ನಲೆಯ ಬದುಕೊಂಜಿ ಸಂಗಮ ನಾಟಕಕ್ಕೆ ಕಲ್ಪನಾ ಪ್ರಶಸ್ತಿ ಲಭಿಸಿರುತ್ತದೆ. ಪ್ರಸ್ತುತ ತುಳುನಾಡಿನ ಹೆಮ್ಮೆಯ ಸಂಘಟನೆಯಾದ ತುಳುಕೂಟ ಉಡುಪಿ (ರಿ.) ಸಂಸ್ಥೆಯಲ್ಲಿ ಸದಸ್ಯನಾಗಿ 36 ವರ್ಷ, ಕಾರ್ಯದರ್ಶಿಯಾಗಿ 10 ವರ್ಷ, ಪಣಿಯಾಡಿ ಕಾದಂಬರಿ ಪ್ರಶಸ್ತಿ ಸಂಚಾಲಕನಾಗಿ 20 ವರ್ಷ ಹಾಗೂ ಕಳೆದ 10ವರ್ಷಗಳಿಂದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ತುಳುನಾಡ ಬರವುದ ಬಿರ್ಸೆರ್, ಪ್ರಶಸ್ತಿ ಗೌರವ ಲಭಿಸಿರುತ್ತದೆ. ಅಖಿಲಭಾರತ ತುಳು ಒಕ್ಕೂಟದ ಜತೆ ಕಾರ್ಯದರ್ಶಿಯಾಗಿರುವ ನನಗೆ ಕಳೆದ ಸಾಲಿನ ಮಲಬಾರ್ ವಿಶ್ವರಂಗ ಪುರಸ್ಕಾರ, ಶ್ರಮಣಬೆಳಗೊಳದಲ್ಲಿ ನಡೆದ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ತುಳುವರತ್ನ ರಾಷ್ಟ್ರಮಟ್ಟದ ಬಿರುದು ದೊರೆತಿರುತ್ತದೆ.

ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿವೆ. ನಾಟಕ ಕಲಾವಿದರಿಗೆ ಅನುಕೂಲ ವಾಗುವಂತೆ ಮಧುಶ್ರೀ ಪ್ರಕಾಶನದ ಮೂಲಕ ಸಮಗ್ರ ನಾಟಕ ಸಂಪುಟವನ್ನೂ ಹೊರ ತಂದಿದ್ದು, ಕರಾವಳಿ ಕರ್ನಾಟಕದ ವಿದ್ವಾಂಸರು, ಸಾಹಿತಿಗಳು ಹಾಗೂ ಸಮಸ್ತ ಓದುಗರ ಪ್ರಶಂಸೆಗೆ ಪಾತ್ರ ಕ್ತವಾಗಿದೆ.

ನಿರಂತರವಾಗಿ ರಂಗಭೂಮಿ ಕ್ಷೇತ್ರದಲ್ಲಿ ಸೇವೆ ಮಾಡಬೇಕೆಂಬ ಇರಾದೆ ಹೊಂದಿರುವ ಇವರಿಗೆ ಈ ಸಾಲಿನಲ್ಲಿ ಉಡುಪಿ ಜಿಲ್ಲಾಡಳಿತದ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಉಡುಪಿ ಜಿಲ್ಲಾರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಿದೆ ಭವಿಷ್ಯದಲ್ಲಿ ಇನ್ನಷ್ಟು ಕಲಾಸೇವೆ ಮಾಡಲು ಪ್ರೋತ್ಸಾಹಿಸಿದಂತಾಗಿದೆ.

 
 
 
 
 
 
 
 
 
 
 

Leave a Reply