ಉಡುಪಿ : ಈ ಶತಮಾನದ ಯತಿಶ್ರೇಷ್ಠರಾದ, ಶ್ರೀವಿದ್ಯಾಮಾನ್ಯತೀರ್ಥ ಶ್ರೀಪಾದರ ಹೆಸರಿನಲ್ಲಿ ಅವರ ಕರಕಮಲ ಸಂಜಾತ ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ನೀಡುವ ಶ್ರೀ ವಿದ್ಯಾಮಾನ್ಯ ಯಕ್ಷ ಪ್ರಶಸ್ತಿಗೆ ತೆಂಕುತಿಟ್ಟಿನಲ್ಲಿ ಮೂರು ದಶಕಗಳ ಕಾಲ ಮುಖ್ಯವಾಗಿ ಕಟೀಲು ಮೇಳದಲ್ಲಿ ಪ್ರಧಾನ ಭಾಗವತರಾಗಿ, ಶ್ರೇಷ್ಠ ರಂಗ ನಿರ್ದೇಶಕರಾಗಿ ಸೇವೆ ಸಲ್ಲಿಸಿದ, ಕುರಿಯ ಮನೆತನದ ಹಿರಿಯ ಕಲಾವಿದರಾದ ಶ್ರೀ ಕುರಿಯ ಗಣಪತಿ ಶಾಸ್ತ್ರಿಗಳು ಆಯ್ಕೆಯಾಗಿದ್ದಾರೆ. ಪ್ರಶಸ್ತಿಯನ್ನು ಮೇ 11, 2022 ಬುಧವಾರ ಪೂರ್ವಾಹ್ನ 11.00 ಗಂಟೆಗೆ ಪಲಿಮಾರಿನಲ್ಲಿ ಜರಗುವ ಶ್ರೀ ವಿದ್ಯಾಮಾನ್ಯತೀರ್ಥರ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ಫಲಕದೊಂದಿಗೆ 50,000 ರೂಪಾಯಿ ನಗದು ಪುರಸ್ಕಾರಗಳನ್ನೊಳಗೊಂಡಿರುತ್ತದೆ ಎಂದು ಪಲಿಮಾರು ಮಠದ ದಿವಾನರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
KaravaliXpress.com - ವಿಶ್ವಾಸದ ನಡೆ
ಬದಲಾವಣೆ ಜಗದ ನಿಯಮ. ಅದಕ್ಕೆ ಮಾಧ್ಯಮ ಲೋಕವೂ ಹೊರತಲ್ಲ.
ಪತ್ರಿಕಾರಂಗದಲ್ಲಿ ಸುಮಾರು ಎರಡು ದಶಕಗಳ ಅನುಭವ, ಸಹೃದಯರ ಒಡನಾಟದ ಅನುಭವಾಮೃತದಿಂದ ಮೊಳಕೆಯೊಡೆದಿದೆ ಈ ವೆಬ್ ಸುದ್ದಿಜಾಲ.