ಡಾ| ರಂಜಿತ್ ಕುಮಾರ್ ಶೆಟ್ಟಿಯವರಿಗೆ ಗೌರವ ಪುರಸ್ಕಾರ

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ, ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿಸ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಆಶ್ರಯದಲ್ಲಿ

ಕನ್ನಡ ನಾಡು-ನುಡಿ , ಸಂಸ್ಕೃತಿ ಸಾಹಿತ್ಯ ಹಾಗೂ ವೈದ್ಯಕೀಯ ಸೇವೆಗಾಗಿ ವೈದ್ಯ ಡಾII ರಂಜಿತ್ ಕುಮಾರ್ ಶೆಟ್ಟಿಯವರಿಗೆ ಗೌರವ ಪುರಸ್ಕಾರ- 2023ಸಮಾಜದ ಸ್ವಾಸ್ಥ್ಯ ಕಾಪಾಡುವ ವೈದ್ಯರನ್ನು ಸಮಾಜ ದೇವರಿಗೆ ಹೋಲಿಕೆ ಮಾಡುತ್ತದೆ.

ನಮ್ಮ ಸಮಾಜ ಹಲವಾರು ವೈದ್ಯರು ತಮ್ಮ ಅಮೂಲ್ಯವಾದ ಸೇವೆಯ ಮೂಲಕ ಮನೆಮಾತಾಗಿದ್ದಾರೆ. ತಮ್ಮ ಕುಟುಂಬಕ್ಕೆ ಕೂಡ ಸರಿಯಾದ ಸಮಯ ನೀಡದೆ ರೋಗಿಗಳಲ್ಲಿ ತಮ್ಮ ಕುಟುಂಬ ಸದಸ್ಯರನ್ನು ಕಂಡು ತಮ್ಮ ಅಪೂವ೯ವಾದ ಸೇವೆ ಸಲ್ಲಿಸುತ್ತಿದ್ದಾರೆ.

ಈ ರೀತಿಯ ವೈದ್ಯರಲ್ಲಿ ಡಾ|| ರಂಜಿತ್ ಕುಮಾರ್ ಶೆಟ್ಟಿಯವರು ಕೂಡ ಒಬ್ಬರು.
1953 ರಲ್ಲಿ ಜನಿಸಿದ ಇವರು ಉಡುಪಿ ಜಿಲ್ಲೆಯ ಮೊದಲ ನಸಿ೯oಗ್ ಹೋo ವಿನಯ ನಸಿ೯oಗ್ ಹೋo ಸ್ಥಾಪಕರಾದ *ಡಾi ವೈ. ಸೀತರಾಮ ಶೆಟ್ಟಿ ಮತ್ತು ಮಾಲತಿ ಶೆಟ್ಟಿಯವರ ಪುತ್ರರಾಗಿದ್ದಾರೆ.

ತಮ್ಮ ಪ್ರಾರಂಭಿಕ ಶಿಕ್ಷಣವನ್ನು ಕುoದಾಪುರ ದಲ್ಲಿ ಪೂರೈಸಿ ತಾನು ಒಬ್ಬ ಉತ್ತಮ ವೈದ್ಯರಾಗಬೇಕೆಂಬ ಕನಸನ್ನು ಹೊತ್ತವರು. ಎಂ.ಬಿ.ಬಿ.ಎಸ್‌ ಪದವಿ ಮತ್ತು ಎಂ.ಡಿ ( ಒಬಿಜಿ) ಪದವಿಯನ್ನು *ಪ್ರತಿಷ್ಠಿತ ಕೆ.ಎಂ.ಸಿ ಮಣಿಪಾಲ* ದಲ್ಲಿ ಉತ್ತಮ ಅಂಕದೊಂದಿಗೆ ಪಡೆದಿದ್ದಾರೆ.

ಈ ಸಂದಭ೯ದಲ್ಲಿ ಒಬಿಜಿಯಲ್ಲಿ *ಮೊದಲ ಸ್ಥಾನ ಪಡೆದಿರುದಕ್ಕೆ ಶ್ರೀಮತಿ ಸುಬ್ಬಲಕ್ಮೀ ಪ್ರಶಸ್ತಿಯನ್ನು ತನ್ವದಾಗಿಸಿರುತ್ತಾರೆ.*

ವೈದ್ಯ ಶಿಕ್ಷಣದ ಬಳಿಕ ತಮ್ಮದೇ ಆದ ವಿನಯ ನಸಿ೯oಗ್‌ ಹೋo ಮೂಲಕ ಕಳೆದ *43 ವಷ೯ಗಳಿಂದ* ನಿರಂತರವಾಗಿ ವೈದ್ಯ ಸೇವೆ ನಡೆಸಿ ಕುಂದಾಪುರದ ಜನರ ಮನೆ ಮಾತಾಗಿದ್ದಾರೆ.

ಅವರ ಈ ಸೇವೆಯನ್ನು ಕಂಡು ವಿವಿಧ ಸಂಘ- ಸಂಸ್ಥೆಗಳು ಗುರುತಿಸಿ ಗೌರವಿಸಿವೆ. ಸಾಹಿತ್ಯ, ಕಲೆ ಮತ್ತು ಸಮಾಜ ಸೇವೆ : ಶ್ರೀಯುತರು ಅತ್ಯುತ್ತಮ ಬರಹಗಾರರಲ್ಲಿ ಒವ೯ರು. ತಮಗೆ ಸಿಗುವ ಬಿಡುವಿನ ವೇಳೆಯನ್ನು ವ್ಯಥ೯ ಮಾಡದೆ ಈ ಸಮಯದಲ್ಲಿ ತಾನು ತನ್ನ ಲೇಖನಿಯ ಮೂಲಕ ಸಮಾಜಕ್ಕೆ ಹೊಸದಾರಿ ನೀಡಬೇಕೆಂಬ ಮಹದಾಸೆಯಿoದ ಬರೆ ಯಲು ಪ್ರಾರಂಭಿಸಿದರು.

ಮೊದಲಿಗೆ ಸಣ್ಣ ಕಥಾ ಸಂಕಲನ ” *ವೈದ್ಯ ನೋವ೯ನ* *ಹೃದಯದಿಂದ* ” ಅದೇ ರೀತಿ ಅವರ ಬಹಳ ಪ್ರಸಿದ್ದವಾದ ಪುಸ್ತಕ ” *ಜಯoತಣ್ಣನಿಗಾಗಿ* , ” ಇದು 2ನೇ ಮುದ್ರಣ ಕಂಡಿದ್ದು, *ಇಂಗ್ಲಿಷ್ ಭಾಷೆಗೂ ಭಾಷಾಂತರಗೊಂಡಿದೆ.* ಈ ಕೃತಿ ಕನ್ನಡ ಸಾರಸ್ವತ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ ಎಂದರೆ ತಪ್ಪಾಗಲಾರದು.

ಅದೇ ರೀತಿ 20 ಕಥೆಗಳ ಸಂಗ್ರಹ ” *ನೆನಪಿನಾಳದಿ೦ದ* ” ಕೃತಿ ಕೂಡ ಓದುಗರ ಮನ ಸೆಳೆದಿದೆ.

ಪುಸ್ತಕ ಮಾತ್ರವಲ್ಲದೆ ನಾಡಿನ ವಿವಿಧ *ಪ್ರಸಿದ್ಧ ಪತ್ರಿಕೆಗಳಲ್ಲಿ* ಇವರ ಲೇಖನ , ಕಥೆಗಳು ಪ್ರಕಟಗೊಂಡಿರುವುಮ ಅಭಿನಂದನೀಯ.

ಕುಂದಾಪುರದ ಪ್ರತಿಷ್ಠಿತ ಭoಡಾರ್ಕಾಸ್೯ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾಗಿರುವ ಇವರು ಕಾಲೇಜಿನ ಅಭಿವೃದ್ಧಿಯಲ್ಲಿ ತನ್ನದೇ ಆದ ರೀತಿಯಲ್ಲಿ ಕಾಯ೯ ನಿವ೯ಹಿಸುತ್ತಿದ್ದಾರೆ.

ಕನಾ೯ಟಕ ಥಿಯೇಟರ್ಸ್ ಮಂಗಳೂರು ಇದರ ನಿದೇ೯ಶಕರಾಗಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ವೈದ್ಯರ ಸಂಘ ಸೇರಿದಂತೆ ವಿವಿಧ ಸಂಸ್ಥೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.

ಪತ್ನಿ ಕೆ.ಬೀನಾ ಶೆಟ್ಟಿ ಮುದ್ದಿನ ಮಗಳಾದ ಲಕ್ಮೀ ಶೆಟ್ಟಿ ಯವರು ಎಂಜಿನಿಯರ್* ಆಗಿದ್ದಾರೆ. ಹೀಗೆ ಹತ್ತು ಹಲವಾರು ಕ್ಷೇತ್ರದಲ್ಲಿ ಕೃಷಿ ಮಾಡಿರುವ ಶ್ರೀಯುತರು ಉತ್ತಮ ಸ್ನೇಹ ಜೀವಿ. ಒಳ್ಳೆಯ ಹಾಸ್ಯ ಭಾಷಣ ಕಾರರಾಗಿರುವ ಇವರು *ಕ್ಲಿನಿಕ್ ನಲ್ಲಿ ಹಾಸ್ಯ* ಇದರ ಕುರಿತು ಹಾಸ್ಯ ಭಾಷಣಗಳನ್ನು ನೀಡಿರುತ್ತಾರೆ.

ವೈದ್ಯಕೀಯ ಸೇವೆಯೊಂದಿಗೆ ಸಾಹಿತ್ಯ ಸೇವೆಯನ್ನು ಕೂಡ ಸಮಾಜಕ್ಕೆ ನೀಡು ತ್ತಿರುವುದು ಅಭಿನಂದನೀಯ.

ಅವರ ಈ ಸೇವೆ ಸದಾ ಹೀಗೆಯೇ
ಮುಂದುವರೆಯಲಿ ಎಂಬ ಆಶಯದೊಂದಿಗೆ
ಇವರ ಈ ಸೇವೆಗೆ ಜೂನ್ 30ರಂದು ಉಡುಪಿಯ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ  3 ಗಂಟೆಗೆ ನಡೆ ಯುವ ಸಮಾರಂಭದಲ್ಲಿ ಗೌರವ ಪುರಸ್ಕಾರ 2023 ನ್ನು ನೀಡಿ ಗೌರವಿಸುತ್ತಿದ್ದೇವೆ.

~ರಾಘವೇಂದ್ರ ಪ್ರಭು, ಕವಾ೯ಲು*

 
 
 
 
 
 
 
 
 
 
 

Leave a Reply