ಕು.ಆತ್ರೇಯೀ ಕೃಷ್ಣಾ ಅವರಿಗೆ ರಾಗ ಧನ ಪಲ್ಲವಿ ಪ್ರಶಸ್ತಿ

ಉಡುಪಿಯ ಪ್ರತಿಷ್ಠಿತ ಸಂಗೀತ ಸಂಸ್ಥೆ ರಾಗಧನ(ರಿ) ಕೊಡಮಾಡುವ ನಾಡಿನ ಹೆಸರಾಂತ
ಸಂಶೋಧಕಿ ಡಾ. ಸುಶೀಲಾ ಉಪಾಧ್ಯಾಯ ಸ್ಮರಣಾರ್ಥ ಅವರ ಪತಿ ಭಾಷಾತಜ್ಞ ದಿ.ಡಾ.ಯು.ಪಿ.
ಉಪಾಧ್ಯಾಯ ಅವರು ಪ್ರಾಯೋಜಿಸಿರುವ ಪ್ರತಿಷ್ಠಿತ ‘ರಾಗಧನ ಪಲ್ಲವಿ ಪ್ರಶಸ್ತಿ’ಗೆ ಈ ಬಾರಿ ಮಣಿಪಾಲದ
ಮಾಹೆಯ ಎಂ.ಎಸ್ಸಿ ವಿದ್ಯಾರ್ಥಿನಿ ಕಾರ್ಕಳದ ಕು. ಆತ್ರೇಯೀ ಕೃಷ್ಣಾ. ಕೆ. ಅವರು ಭಾಜನರಾಗಿದ್ದಾರೆ. ಆಯ್ಕೆ ಸಮಿತಿಯಲ್ಲಿ ಪ್ರೊ, ಅರವಿಂದ ಹೆಬ್ಬಾರ್, ವಿದುಷಿ ಸರೋಜ ಆಚಾರ್ಯ, ಡಾ.ಕಿರಣ್ ಹೆಬ್ಬಾರ್ ಹಾಗೂ ಸ್ಪರಿಗಮಭಾರತಿಯ ವಿದುಷಿ ಉಮಾ ಉದಯಶಂಕರ್ ಅವರಿದ್ದರು.

ಫೆಬ್ರವರಿ 4, ಶನಿವಾರದಂದು ಸಂಜೆ 5 ಗಂಟೆಗೆ ಮಣಿಪಾಲದ ಅಲೆವೂರು ರಸ್ತೆಯಲ್ಲಿರುವ ಮಣಿಪಾಲ ಡಾಟ್‌ನೆಟ್ ಸಭಾಂಗಣದಲ್ಲಿ ರಾಗಧನ ಸಂಸ್ಥೆಯ ಎರಡು ದಿನಗಳ 35ನೆಯ ಶ್ರೀ ಪುರಂದರದಾಸ ಹಾಗೂ ಸಂಗೀತ ತ್ರಿಮೂರ್ತಿ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮ ಉದ್ಘಾಟಕರಾಗಿ ಪಾಲ್ಗೊಳ್ಳಲಿದ್ದು, ಪುತ್ತೂರಿನ ಕಲೋಪಾಸನಾ ಸಂಸ್ಥೆಯ ಮುಖ್ಯಸ್ಥರಾದ ಡಾ. ಹರಿಕೃಷ್ಣ ಪಾಣಾಜೆ ಮುಖ್ಯ ಅತಿಥಿಗಳಾಗಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ರಾಗಧನ ಸಂಸ್ಥೆಯ ಅಧ್ಯಕ್ಷರಾದ ಡಾ. ಶ್ರೀಕಿರಣ್ ಹೆಬ್ಬಾರ್ ವಹಿಸಲಿದ್ದು, ಮುಖ್ಯ ಅಭ್ಯಾಗತರಾಗಿ ಶ್ರೀಮತಿ ಗಿರಿಜಮ್ಮ, ಕಲಾಪೋಷಕರು ಮಣಿಪಾಲ ಇವರು ಭಾಗವಹಿಸುತ್ತಾರೆ. ಸಂಜೆ ಆರು ಗಂಟೆಯಿಂದ ಕು. ಆತ್ರೇಯೀ ಕೃಷ್ಣಾ ಮತ್ತು ಬಳಗದವರಿಂದ ಸಂಗೀತ ಕಚೇರಿ ನಡೆಯಲಿದೆ.

 
 
 
 
 
 
 
 
 
 
 

Leave a Reply