ಸೆ.24, ಅಪ್ಪೆಮ್ಮೆ ತುಳು ನಾಟಕದ ಕೃತಿ ಬಿಡುಗಡೆ, ಮಕ್ಕಳ ತುಳು ಕವಿಗೋಷ್ಠಿ

ಉಡುಪಿ: ಯಶಸ್ ಪ್ರಕಾಶನ ಕಟಪಾಡಿ, ತುಳುಕೂಟ ಉಡುಪಿ(ರಿ.), ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಕಾಪು ವತಿಯಿಂದ ಪತ್ರಕರ್ತ ಪ್ರಕಾಶ ಸುವರ್ಣ ಕಟಪಾಡಿ ಅವರು ಬರೆದ ಅಪ್ಪೆಮ್ಮೆ ತುಳು ನಾಟಕದ ಕೃತಿ ಬಿಡುಗಡೆ ಮತ್ತು ಮಕ್ಕಳ ತುಳು ಕವಿಗೋಷ್ಠಿ ಕಾರ್ಯಕ್ರಮ ಸೆ.೨೪ರಂದು ಮಧ್ಯಾಹ್ನ ೩.೪೫ ಕ್ಕೆ ಉಡುಪಿ ಕಿದಿಯೂರು ಹೊಟೇಲಿನ ಪವನ್ ರೂಫ್‌ಟಾಪ್ ಹಾಲ್‌ನಲ್ಲಿ ನಡೆಯಲಿದೆ.
ಬ್ರಹ್ಮಾವರ ನ್ಯೂ ಕರ್ನಾಟಕ ಬಿಲ್ದರ್ಸ್  ಸಂಸ್ಥೆಯ ಮಾಲಕರಾದ ಚೇತನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸುವರು. ಅಖಿಲಭಾರತ ತುಳು ಒಕ್ಕೂಟದ ಅಧ್ಯಕ್ಷೆ ಎ.ಸಿ.ಭಂಡಾರಿ ಮಂಗಳೂರು ಅಧ್ಯಕ್ಷತೆ ವಹಿಸುವರು. ಸಮಾಜಸೇವಕರಾದ ಉಡುಪಿ ವಿಶ್ವನಾಥ ಶೆಣೈ ಮತ್ತು ಪ್ರಭಾವತಿ ದಂಪತಿಗಳು ಪುಸ್ತಕ ಬಿಡುಗಡೆ ಮಾಡುವರು. ಉಪ್ಪುಂದ ಸರಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ವಿ.ಕೆ.ಯಾದವ್ ಕೃತಿ ಪರಿಚಯ ಮಾಡುವರು.
ಉಡುಪಿ ತುಳುಕೂಟದ ಅಧ್ಯಕ್ಷ  ಬಿ.ಜಯಕರ್ ಶೆಟ್ಟಿ ಇಂದ್ರಾಳಿ, ಉಡುಪಿಯ ಉದ್ಯಮಿ ಮನೋಹರ್ ಶೆಟ್ಟಿ,  ಪಾಂಗಾಳಗುಡ್ಡೆ ಗರಡಿಮನೆ ಸುಧಾಕರ್ ಡಿ.ಅಮೀನ್, ಮತ್ಸ್ಯಯೋದ್ಯಮಿ ಹರೀಶ್ ಶ್ರೀಯಾನ್ ಮಲ್ಪೆ, ಸನತ್ ಸಾಲ್ಯಾನ್ ಮಲ್ಪೆ ಮುಖ್ಯಅತಿಥಿಗಳಾಗಿ ಭಾಗವಹಿಸುವರು.
ಇದೇ ವೇಳೆ ಸಮಾಜಸೇವಕರಾದ ಲೀಲಾಧರ್ ಶೆಟ್ಟಿ ಕರಂದಾಡಿ ಹಾಗೂ ಈಶ್ವರ್ ಮಲ್ಪೆ ಅವರನ್ನು ಸನ್ಮಾನಿಸಲಾಗುವುದು. ಮಧ್ಯಾಹ್ನ ೨.೩೦ಕ್ಕೆ ಉಡುಪಿ ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಜನಾರ್ದನ್  ಕೊಡವೂರು, ಮತ್ತು ಸಾಹಿತಿ ಪೂರ್ಣಿಮಾ ಜನಾರ್ದನ್ ಅಧ್ಯಕ್ಷತೆಯಲ್ಲಿ ಮಕ್ಕಳ ಕವಿಗೋಷ್ಠಿ ನಡೆಯಲಿದೆ.
ಕವಿಗೋಷ್ಠಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಾದ ಸುಶಾಂತ್ ಎಸ್.ಆಚಾರ್ಯ ಮುದರಂಗಡಿ, ಶಿವಾನಿ ಅಂಬಲಪಾಡಿ, ತೃಷ ಅದಮಾರು, ಸಂದರ್ಶಿನಿ ಕಾರ್ಕಳ, ಸಾನ್ವಿ ಪೆರ್ಡೂರು, ಕಾರ್ತಿಕ ಮುದ್ರಾಡಿ, ಶಾನ್ವಿ ಕಾರ್ಕಳ, ಸುಪ್ರಿಯ ಕಾರ್ಕಳ, ಪ್ರೇಕ್ಷಾ ಆಚಾರ್ಯ ನಕ್ರೆ, ನಂದಿನಿ ಅಲೆವೂರು, ಮಹಾಲಕ್ಷ್ಮೀ ಬನ್ನಂಜೆ, ಯಶಸ್ ಪಿ.ಸುವರ್ಣ ಕಟಪಾಡಿ, ಪೂರ್ವಿ ಎಸ್.ಕೋಟ್ಯಾನ್ ಉದ್ಯಾವರ, ಮಿಶಾ ಆರ್ ಕೋಟ್ಯಾನ್ ಪಡುಬಿದ್ರಿ, ಅಭಿಷೇಕ್ ಕುಂಜಾರುಗಿರಿ, ವೈಷ್ಣವಿ ವಿ.ದೇವಾಡಿಗ ಉಡುಪಿ ಭಾಗವಹಿಸುವರು.
ಇದೇ ವೇಳೆ ಪುತ್ತೂರು ಶ್ರೀ ಭಗವತಿ ಯಕ್ಷಕಲಾ ಬಳಗದ ಪ್ರಣಮ್ಯ ಉಪಾಧ್ಯ ಮತ್ತು ವೈಷ್ಣವಿ ಅವರಿಂದ ಯಕ್ಷ ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದು ಯಶಸ್ ಪ್ರಕಾಶನ ಸಂಸ್ಥೆಯ ಮುಖ್ಯಸ್ಥೆ ಪ್ರೀತಿ ಪ್ರಕಾಶ್ ಸುವರ್ಣ ಕಟಪಾಡಿ ತಿಳಿಸಿದ್ದಾರೆ.
 
 
 
 
 
 
 
 
 
 
 

Leave a Reply