ಕೋಟಿ ಗೀತಾ ಲೇಖನ ಯಜ್ಞ -.ಹರಿಹರಪುರ ಶ್ರೀ ಪ್ರಶಂಸೆ

ಉಡುಪಿ:ಭಾವಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಚತುರ್ಥಪರ್ಯಾಯದ ಬೃಹತ್ ಯೋಜನೆಯಾದಕೋಟಿಗೀತಾಲೇಖನ ಯಜ್ಞ ಒಂದು ಜಾಗತಿಕ ಮಟ್ಟದ ಧಾರ್ಮಿಕ ಆಂದೋಲನವಾಗಿದ್ದು ಪ್ರಸ್ತುತ ಸಮಾಜಕ್ಕೆ ಅಗತ್ಯವಿರುವ, ಆತ್ಮೋದ್ದಾರ ಹಾಗೂ ಲೋಕಕಲ್ಯಾಣಕ್ಕೆ ಕಾರಣವಾಗುವ ಈ ಗೀತಾಲೇಖನಯಜ್ಞ ಪುತ್ತಿಗೆ ಶ್ರೀಪಾದರ ಅಪೂರ್ವ, ಮೌಲ್ಯಯುತ ಮಹಾಸಂಕಲ್ಪ  ಎಂದು ಹರಿಹರಪುರದ ಶಾರದಾಲಕ್ಷ್ಮೀನೃಸಿಂಹಪೀಠದ ಶ್ರೀ ಶ್ರೀ ಸ್ವಯಂಪ್ರಕಾಶಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳು ಪ್ರಶಂಸೆ ಮಾಡಿದ್ದಾರೆ.

ಕೋಟಿಗೀತಾಲೇಖನದ ಪ್ರಚಾರ ಸಮಿತಿ ಪ್ರದ್ಯುಮ್ನ ಪ್ರಖಂಡದ ರಮೇಶ್ ಭಟ್ ಕೆ ಮತ್ತುತಂಡದವರು ಸಮರ್ಪಿಸಿದ ಗೀತಾಲೇಖನ ಹೊತ್ತಗೆಯನ್ನು ಸ್ವೀಕರಿಸಿದ ಸ್ವಾಮೀಜಿಯವರು ತಮ್ಮ ಶಿಷ್ಯವರ್ಗ ಹಾಗೂ ಭಕ್ತವೃಂದದವರಿಂದ ಬರೆಸುವುದಲ್ಲದೇ ತಾವೇ ಸ್ವತಃ ಬರೆಯುವುದಾಗಿ ತಿಳಿಸಿದರು.

ಈ ಕೋಟಿಗೀತಾ ಲೇಖನ ಯೋಜನೆ ಯಶಸ್ವಿಯಾಗಲೆಂದು ಹಾರೈಸಿದರು.

 
 
 
 
 
 
 

Leave a Reply