ಪಾಜಕ ಕ್ಷೇತ್ರದಲ್ಲಿ ಮಧ್ವನವಮಿ

ಆಚಾರ್ಯ ಮಧ್ವರ ಅವತಾರ ಭೂಮಿ ಪಾಜಕಕ್ಷೇತ್ರದಲ್ಲಿ ಮಧ್ವನವಮಿ ಪ್ರಯುಕ್ತ ಪಂಚಾಮೃತ ಅಭಿಷೇಕ, ವಾಯುಸ್ತುತಿ ಪುನಶ್ಚರಣೆ, ಋಕ್ ಸಂಹಿತಾ ಯಾಗದ ಪೂರ್ಣಾಹುತಿ, ವಿದ್ವಾಂಸರಿಂದ ಪ್ರವಚನ, ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮವು ಆಡಳಿತದಾರರಾದ ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ನಡೆಯಿತು.ಶ್ರೀ ವಾದಿರಾಜ ಯತಿಗಳಿಂದ ಪ್ರತಿಷ್ಠಿತ ಮಧ್ವಾಚಾರ್ಯರ ಪ್ರತಿಮೆಗೆ ಮಹಾಪೂಜೆಯನ್ನು ನೆರವೇರಿಸಿ, ಆಚಾರ್ಯ ಮಧ್ವರು ವೇದಗಳ ಬಗ್ಗೆ ಇದ್ದ ಸಂಶಯವನ್ನು ಪರಿಹರಿಸಿ ವೇದ ಪ್ರಾಮಾಣ್ಯವನ್ನು ತಿಳಿಸಿದವರು. ಭಗವಂತನಲ್ಲಿ ಭಕ್ತಿಯ ಅರಿವು ಬರಬೇಕಾದರೆ ತತ್ವಜ್ಞಾನವನ್ನು ತಿಳಿಯಬೇಕು.

ದೇವರು ಸರ್ವೋತ್ತಮ, ಗುಣ ಪರಿಪೂರ್ಣ ಎಂಬ ಸ್ವರೂಪ ಜ್ಞಾನವನ್ನು ತಿಳಿಸಿಕೊಟ್ಟು ಗೊಂದಲಗಳನ್ನು ನಿವಾರಿಸಿ ಜಗತ್ತಿಗೆ ತತ್ವಜ್ಞಾವನ್ನು ನೀಡಿದ ಜಗದ್ಗುರುಗಳಾದ ಮಧ್ವಾಚಾರ್ಯರು ಶ್ರೇಯಸ್ಸನ್ನುಂಟುಮಾಡಲಿ ಎಂದು ಕಾಣಿಯೂರು ಮಠಾಧೀಶ ರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.

 
 
 
 
 
 
 
 
 
 
 

Leave a Reply