ಶ್ರೀ ಕೃಷ್ಣಾಪುರ ಮಠ ಪರ್ಯಾಯ- 2022~ ಹೊರೆ ಕಾಣಿಕೆ ಪ್ರಥಮ ಸಭೆ

​ಪರ್ಯಾಯೋತ್ಸವ ಸಮಿತಿ ಅಧ್ಯಕ್ಷ  ಕೆ ಸೂರ್ಯ ನಾರಾಯಣ ಉಪಾಧ್ಯ ನೇತೃತ್ವದಲ್ಲಿ ಹೊರೆ ಕಾಣಿಕೆ​ಯ ​ ಪ್ರಥಮ ಸಭೆಯು ಸಂಚಾಲಕ  ಸುಪ್ರಸಾದ್ ಶೆಟ್ಟಿ ಬೈಕಾಡಿ ಹಾಗೂ ಪ್ರಮುಖರ ಉಪಸ್ಥಿತಿಯಲ್ಲಿ ಕೃಷ್ಣ ಸಭಾದಲ್ಲಿ ನೆರವೇರಿತು.


ಜನವರಿ 17,18 -2022 ರಂದು ನಡೆಯಲಿರುವ ​​ಶ್ರೀ ಶ್ರೀ ವಿದ್ಯಾಸಾಗರ ತೀರ್ಥರ ಚತುರ್ಥ ಪರ್ಯಾಯ ಮಹೋತ್ಸವ, ಇದರ ಹೊರೆಕಾಣಿಕೆ ಮೆರವಣಿಗೆಯು ತಾ 11.1.2022
ರಿಂದ 16.1.2022 ರವರೆಗೆ ನಡೆಯಲಿದ್ದು ಅದಕ್ಕೆ ಬೇಕಾದ ಪೂರ್ವ ಬಾವಿ ವ್ಯವಸ್ಥೆ ಬಗ್ಗೆ ಮಾತನಾಡಿದ ಸಂಚಾಲಕರು ವಿಜೃಂಭಣೆಯಿಂದ ಮಾಡುವ ಕುರಿತು ನಗರಸಭೆ ವ್ಯಾಪ್ತಿ, ಗ್ರಾಮ ಪಂಚಾಯತ್, ಧರ್ಮಸ್ಥಳ ಗ್ರಾಮಭಿವೃದ್ಧಿ ಸ್ವಸಹಾಯ ಸಂಘ, ಸ್ಥಳೀಯ ದೇವಸ್ಥಾನಗಳನ್ನು ಸಂಗ್ರಹ ಕೇಂದ್ರವಾಗಿಟ್ಟುಕೊಂಡು ಎಲ್ಲರನ್ನು ಕೂಡಿಕೊಂಡು ಉತ್ತಮ ರೀತಿಯಲ್ಲಿ ಮಾಡುವ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸಿದರು.

ಈ ಪ್ರಥಮ ಸಭೆಯಲ್ಲಿ ಶ್ರೀ ಹೇರಂಜೆ ಕೃಷ್ಣ ಭಟ್, ಶ್ರೀ ಶ್ರೀಶ ಆಚಾರ್, ಶ್ರೀ ರಾಮಚಂದ್ರ ಉಪಾಧ್ಯ, ಶ್ರೀ ರಾಘವೇಂದ್ರ ರಾವ್ ಹಾಗೂ ಸಮಿತಿಯ ಪ್ರಮುಖ ಪದಾಧಿಕಾರಿಗಳಲ್ಲದೆ, ಶ್ರೀ ಲಕ್ಷ್ಮೀನಾರಾಯಣ ರಾವ್ ಕೃಷ್ಣಾಪುರ, ಶ್ರೀ ವೆಂಕಟರಮಣ ಮುಚ್ಚಿoತಾಯ, ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್(ರಿ )ಪದಾಧಿಕಾರಿಗಳು, ದೈವಜ್ಞ ಯುವಕ ಮಂಡಲ, ಧರ್ಮಸ್ಥಳ ಸ್ವಸಹಾಯ ಸಂಸ್ಥೆಯ ಶ್ರೀ ರೋಹಿತ್ ಹಾಗೂ ಪ್ರಮುಖರು, ಶ್ರೀ ಅಯ್ಯಪ್ಪ ಸೇವಾ ಸಮಾಜದ ಜಿಲ್ಲಾಧ್ಯಕ್ಷ ಶ್ರೀಶ್ರೀ ಅಯ್ಯಪ್ಪ ಸೇವಾ ಸಮಾಜದ ಜಿಲ್ಲಾಧ್ಯಕ್ಷ ಶ್ರೀ ರಾಧಾಕೃಷ್ಣ ಮೆಂಡನ್,
 
ಗಾಣಿಗ ಸಮಾಜದ ನಗರ ಅಧ್ಯಕ್ಷ ಶ್ರೀ ಜಯರಾಮ್, ಭಂಡಾರಿ ಸಮಾಜದ ಬ್ರಹ್ಮಾವರ ಅಧ್ಯಕ್ಷ ಶ್ರೀ ಅರುಣ್ ಭಂಡಾರಿ, ಹಿಂದೂ ಜಾಗರಣ ವೇಧಿಕೆಯ ಮಹೇಶ್ ಬೈಲೂರ್, ಶ್ರೀ ಪ್ರಕಾಶ್ ಅಂದ್ರಾದೆ, ಶ್ರೀ ರಂಜಿತ್ ಶೆಟ್ಟಿ,ಶ್ರೀ ಹರೀಶ್ ಪೂಜಾರಿ (ರೈಲ್ವೆ )ಹಾಗು  ಇತರ ಪ್ರಮುಖರು ಉಪಸ್ಥಿತರಿದ್ದರು.

ಪರ್ಯಾಯೋತ್ಸವ ಸಮಿತಿಯ ಕಾರ್ಯದರ್ಶಿ ಶ್ರೀ ವಿಷ್ಣು ಪ್ರಸಾದ್ ಪಾಡಿಗಾರ್ ಸ್ವಾಗತಿಸಿ, ಸಾರ್ವಜನಿಕ ಸಂಪರ್ಕಅಧಿಕಾರಿ ಶ್ರೀ ಬಿ ವಿ ಲಕ್ಷ್ಮಿನಾರಾಯಣ ಧನ್ಯವಾದ ನೀಡಿದರು.
 
 
 
 
 
 
 
 
 
 
 

Leave a Reply