ಹಿಂದೂ ಸಂಘಟನೆ ಯುವಕರು ಹಾಗು ಅನ್ಯಕೋಮಿನ ಯುವಕ, ಯುವತಿಯರ ನಡುವೆ ಮಾತಿನ ಚಕಮಕಿ- ಐದು ಮಂದಿಯ ಬಂಧನ

ಮಂಗಳೂರು: ನಗರದ ಹೊರವಲಯದ ಸುರತ್ಕಲ್ ಟೋಲ್‌ಗೇಟ್ ಬಳಿ ಹಿಂದೂ ಸಂಘಟನೆ ಯುವಕರು ಹಾಗೂ ಅನ್ಯಕೋಮಿನ ಯುವಕ, ಯುವತಿಯರ ನಡುವೆ ಮಾತಿನ ಚಕಮಕಿ ಯಾಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ 5 ಜನರನ್ನು ಬಂಧಿಸಲಾಗಿದೆ. ಭಾನುವಾರ ಸಂಜೆ ನಡೆದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ‌ ಬಂದಿದೆ.

ಮಂಗಳೂರಿನ ಮೆಡಿಕಲ್ ಕಾಲೇಜೊಂದರ ಹಿಂದೂ-ಮುಸ್ಲಿಂ ಯುವಕ-ಯುವತಿಯರ ಒಟ್ಟು 6 ಜನ ಸ್ನೇಹಿತರು ವೀಕೆಂಡ್ ಎಂದು ಮಲ್ಪೆ ಬೀಚಿಗೆ ಹೋಗಿ ವಾಪಸ್ ಬರುವಾಗ ಮಂಗಳೂರಿನ ಸುರತ್ಕಲ್ ಟೋಲ್‌ಗೇಟ್ ಬಳಿ ಹಿಂದೂ ಸಂಘಟನೆ ಗುಂಪೊಂದು ಅನ್ಯಕೋಮಿನ ಯುವಕ, ಯುವತಿಯರ ಕಾರನ್ನು ನಿಲ್ಲಿಸಿ ಪ್ರಶ್ನಿಸಲು ಮುಂದಾಗಿದ್ದಾರೆ. 

ಯುವತಿಯರಿಗೆ ಮುಸ್ಲಿಂ ಯುವಕರ ಜೊತೆ ಏಕೆ ಸುತ್ತಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಹಿಂದೂ ಸಂಘಟನೆ ಯುವಕರು ಮತ್ತು ಮುಸ್ಲಿಂ ಯುವಕರ ನಡುವೆ ಜಗಳ ಶುರುವಾಗಿ ಪರಸ್ಪರ  ಹಲ್ಲೆ ಮಾಡಲು ಯತ್ನಿಸಿದ್ದಾರೆ. ಸ್ಥಳದಲ್ಲೇ ಇದ್ದ ಇನ್ಸ್ಪೆಕ್ಟರ್ ಶರೀಫ್ ಎದುರಲ್ಲೇ ನಡೆದ ಘಟನೆ ಇದಾಗಿದ್ದು ಜಗಳವನ್ನು ತಡೆದು ಗಲಾಟೆಯನ್ನು ನಿಯಂತ್ರಿಸಿದ್ದಾರೆ.
 
 
 
 
 
 
 
 
 
 
 

Leave a Reply