ಸಂಸ್ಕಾರಯುಕ್ತ ಶಿಕ್ಷಣದಿಂದ ಮಾತ್ರ ವಿದ್ಯಾರ್ಥಿಗಳ ಭವಿಷ್ಯ ಭದ್ರ ~ರೆಂಜಾಳ ಶ್ರೀ ವೆಂಕಟರಮಣ ಉಪಾಧ್ಯಾಯ

ಶ್ರೀ ಕೃಷ್ಣ ಮಧ್ವ ಸಂಸ್ಥಾನಮ್ ಉಡುಪಿ ಇದರ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಅಜೆಕಾರಿನ ಸುತ ಮುತ್ತ ಪರಿಸರದ ವಿವಿಧ ಶಾಲೆಗಳಲ್ಲಿ ಅಧ್ಯಾಪಕರಾಗಿ ಅಲ್ಲದೆ ಮುಖ್ಯೋಪಾಧ್ಯಾಯರಾಗಿ ಪ್ರಾಮಾಣಿಕರಾಗಿ ಸೇವೆ ಸಲ್ಲಿಸಿದ, ಶಿಸ್ತಿನ ಮಾಸ್ಟರ್ ಎಂದೇ ಖ್ಯಾತಿ ಪಡೆದಿರುವ ಹಿರಿಯ ಶಿಕ್ಷಕರಾದ,ಕೃಷಿ ತಜ್ಞ ಶ್ರೀ ವೆಂಕಟರಮಣ ಉಪಾಧ್ಯಾಯರು ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಶಶಿನಿ ವಿ ಉಪಾಧ್ಯಾಯರನ್ನು ಅಜೆಕಾರಿನ ಅವರ ಮನೆಯಲ್ಲೇ ಅಭಿನಂದನಾ ಪತ್ರ ಮೂಲಕ ಸನ್ಮಾನಿಸಿ ಗೌರವಿಸಲಾಯಿತು.

    ಅಭಿನಂದನೆಯನ್ನು ಸ್ವೀಕರಿಸಿದ ಆಚಾರ್ಯರು ಶಿಕ್ಷಕರ ದಿನ ಒಂದೇ ದಿನಕ್ಕೆ ಸೀಮಿತವಾಗದೆ , ಮೂಲಗುರುಗಳಿಂದ,ಹಿಡಿದು ತಮಗೆ ವಿದ್ಯೆ ಕಲಿಸಿದ ಎಲ್ಲಾ ಗುರುವರೇಣ್ಯರನ್ನು ನಿತ್ಯವೂ ಸ್ಮರಿಸಿ ಸಂಸ್ಕಾರಯುಕ್ತ ಶಿಸ್ತಿನ ಶಿಕ್ಷಣದಿಂದ ಮಾತ್ರ ವಿದ್ಯಾರ್ಥಿಗಳು ಮುಂದಿನ ಜೀವನವವನ್ನು ಸುಗಮವಾಗಿ ನಿರ್ವಹಿಸಬಲ್ಲರು ಎಂಬುದಾಗಿ ಗುರು ಸಂದೇಶ ನೀಡಿದರು. ಅವರ ಶಿಷ್ಯರಾದ ನಿಟ್ಟೆ ಇಂಜಿನೀಯರಿಂಗ್ ಕಾಲೇಜಿನ ಅಧ್ಯಾಪಕರಾದ ಶ್ರೀ ಶ್ರೀನಿವಾಸ ನೆಕ್ಕಾರು ರವರು ಗುರುಗಳ ವ್ಯಕ್ತಿತ್ವದ ಬಗ್ಗೆ ತಿಳಿಸಿದರು.

  ಸಂಸ್ಥಾನದ ಪೋಷಕರಾದ ಶ್ರೀ ಗೋಪಾಲಕೃಷ್ಣ ಭಟ್, ಶ್ರೀ ಹಯವದನ ಭಟ್, ಶ್ರೀಪ್ರಸಾದ್ ಉಪಾಧ್ಯಾಯ, ಶ್ರೀರವೀಂದ್ರ ಆಚಾರ್ಯ, ಶ್ರೀ ಸುರೇಶ್ ಕಾರಂತ್, ಶ್ರೀ ಚೈತನ್ಯ ಎಂ ಜೆ.,ಸಿ ದುರ್ಗಪ್ರಸಾದ್,ಶ್ರೀ ಗಣೇಶ ಓಕುಡೆ ಶ್ರೀ ವಿಷ್ಣುಮೂರ್ತಿ ಉಪಾಧ್ಯಾಯ ಹಾಗೂ ಶಿಷ್ಯರಾದ ಶ್ರೀ ಹರಿಕೃಷ್ಣ ಭಟ್, ಶ್ರೀಮತಿ ಸುಮನಾ ಭಟ್ ಉಪಸ್ಥಿತರಿದ್ದರು. ಸಂಸ್ಥಾನದ ಸಂಚಾಲಕರಾದ ಶ್ರೀ ರಮೇಶ್ ಭಟ್ ಕಡೆಕೊಪ್ಪಲ ಹಾಗೂ ಶ್ರೀ ಮಹಿತೋಷ್ ಆಚಾರ್ಯ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.

 
 
 
 
 
 
 
 
 
 
 

Leave a Reply