ಸ್ಟೆತೋಸ್ಕೋಪ್‌ ಹಿಡಿವ ಕೈ ಫೋಟೋ ಕ್ಲಿಕ್ಕಿಸಲೂ ಸೈ… ಪೂರ್ಣಿಮಾ ಜನಾರ್ದನ್ 

ವೈದ್ಯಕೀಯ ವೃತ್ತಿ ಅಂದರೆ ನಿತ್ಯ ಒತ್ತಡ ತುಂಬಿದ ಬದುಕು. ನಿರಂತರ ಹತ್ತು ಹಲವು ಜಂಜಾಟಗಳ ತವರು. ಛಾಯಾಗ್ರಹಣ ಎಂಬುದು ಒಂದಷ್ಟು ತಾಳ್ಮೆ, ಸಮಯ, ಕುತೂಹಲ ಆಸಕ್ತಿ ಬಯಸುವ ಕ್ಷೇತ್ರ. ಅಲ್ಲಿ ಅವಸರ ಸಲ್ಲ. ನಿಧಾನವೇ ಪ್ರಧಾನ.

ತನ್ನ ‌ವೃತ್ತಿ ಜೀವನದ ಬಿಡುವಿಲ್ಲದ ಸಮಯದಲ್ಲೂ ತನ್ನಿಷ್ಟದ ಪ್ರವೃತ್ತಿಯಾದ ಛಾಯಾಗ್ರಹಣ ಕಲೆಯನ್ನು ಕರಗತ ಮಾಡಿಕೊಂಡವರು ಉಡುಪಿಯ ಪ್ರತಿಷ್ಟಿತ ಗಾಂಧಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ವ್ಯಾಸರಾಜ್ ತಂತ್ರಿಯವರು.

ಛಾಯಾಗ್ರಹಣದೊಂದಿಗೆ ತನ್ನ ಇನ್ನೊಂದು ಪ್ರೀತಿಯ ಹವ್ಯಾಸವಾದ ಪ್ರವಾಸಿ ತಾಣಗಳ ಭೇಟಿಯ ಸಂದರ್ಭ ದಲ್ಲಿ ಕಾಣ ಸಿಗುವ ಅಪರೂಪ, ಅನನ್ಯ ದೃಶ್ಯಗಳನ್ನು ತನ್ನ ಕ್ಯಾಮರದಲ್ಲಿ ಸೆರೆ ಹಿಡಿದು ಅದರ ಅಂದವನ್ನು ಇನ್ನೊಂದಷ್ಟು ಜನರಿಗೆ ಹಂಚುವ ಸಂತಸ.

ಕೆಲವೊಮ್ಮೆ ತನ್ನ ದುಬಾರಿ ಕ್ಯಾಮಾರಕ್ಕೆ ಸರಿಸಾಟಿಯಾಗಿ ಮೊಬೈಲ್ ನಲ್ಲೆ ಹಲವಾರು ದೃಶ್ಯಗಳನ್ನು ಕ್ಲಿಕ್ಕಿಸಿ ಸಂಭ್ರಮಿಸುವವರು ಡಾ.ವ್ಯಾಸರಾಜ್ ತಂತ್ರಿಯವರು. ಪ್ರೇಕ್ಷಣೀಯ ಸ್ಥಳಗಳು, ಕಲ್ಲಿನ ಮರದ ಕೆತ್ತನೆಗಳು, ಪ್ರಕೃತಿಯ ರಸಮಯ ನೋಟ, ರುದ್ರ ರಮಣೀಯ ಶರಧಿ, ವರ್ಣಮಯ ಆಗಸ ಹೀಗೆ ಒಂದಷ್ಟು ಅವರ ಆಸಕ್ತಿಯ ಛಾಯಾಚಿತ್ರ ವಿಶೇಷಗಳು.

ಇದೀಗ ಅವರ ಕಲಾ ಪ್ರೇಮದೊಳಗೊಮ್ಮೆ ಇಣುಕಿ‌ ನೋಡೋಣ..

ಸುಂದರ ಛಾಯಾಗ್ರಹಣದ ಸವಿಯ ಸವಿಯೋಣ..

 
 
 
 
 
 
 
 
 
 
 

Leave a Reply