ಉಡುಪಿಯಲ್ಲಿ ಲೇಡಿ ಕಂಡಕ್ಟರ್ ದಾದಾಗಿರಿ! ವಿಡಿಯೋ ವೈರಲ್

ಲೇಡಿ ಕಂಡಕ್ಟರ್ ಒಬ್ಬರು ಇನ್ನೊಂದು ಬಸ್ಸಿನ ಮೇಲೇರಿ ಅದರ ಕಂಡಕ್ಟರ್ ಮೇಲೆ ಹಲ್ಲೆಗೈದು ದಾದಾಗಿರಿ ನಡೆಸಿದ ಘಟನೆ ನಡೆದಿದ್ದು ವಿಡಿಯೋ ವೈರಲ್ ಆಗುತ್ತಿದೆ. 

ಉಡುಪಿಯ ಸಂತೆಕಟ್ಟೆ ಬಸ್ ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದೆ. ಎಂದಿನಂತೆ ಖಾಸಗಿ ಬಸ್ ಗಳ ಟೈಮಿಂಗ್ ವಿಚಾರದಲ್ಲಿ ಗಲಾಟೆ ನಡೆದಿದೆ. ತನಗಿಂತ ಮೊದಲೇ ಬಂದು ಬಸ್ ನಿಲ್ಲಿಸಿದ್ದಕ್ಕಾಗಿ ಲೇಡಿ ಕಂಡಕ್ಟರ್ ರೇಖಾ ಎಂಬವರು ಬಸ್ ಕಂಡಕ್ಟರ್ ಮೇಲೆ ಏರಿ ಹೋಗಿದ್ದಾರೆ. ಆತನನ್ನು ತರಾಟೆಗೆ ತೆಗೆದುಕೊಂಡು ಜಾಡಿಸಿದ್ದಾರೆ. ಒಂದು ಹಂತದಲ್ಲಿ ಚಪ್ಪಲಿಯನ್ನೂ ಕೈಗೆತ್ತಿಕೊಂಡಿದ್ದು ತೀವ್ರ ವಾಗ್ವಾದ ನಡೆಸಿದ್ದಾರೆ. 

ಕೆಲ ಹೊತ್ತು ಲೇಡಿ ಕಂಡಕ್ಟರ್ ರೌದ್ರಾವತಾರ ಕಂಡು ಪ್ರಯಾಣಿಕರು ತಬ್ಬಿಬ್ಬಾಗಿದ್ದಾರೆ. ಕೊನೆಗೆ ಇಬ್ಬರೂ ಪರಸ್ಪರ ಹೊಡೆದಾಡಿಕೊಂಡಿದ್ದು ಬಳಿಕ ಮಹಿಳೆ ಬಸ್ ನಿಂದ ಇಳಿದು ಹೋಗಿದ್ದಾಳೆ. ಸದ್ಯ ಈ ಘಟನೆಯ ಬಸ್ಸಿನಲ್ಲಿದ್ದ ಸಿಸಿಟಿವಿ ಫೂಟೇಜ್ ವೈರಲ್ ಆಗುತ್ತಿದೆ.

 
 
 
 
 
 
 
 
 
 
 

Leave a Reply