ಸಾಹಿತ್ಯ ಸಿಂಚನ 7,ಕಾವ್ಯ ಕಮ್ಮಟ ಕಾರ್ಯಕ್ರಮ.

ಪಾಂಡುರಂಗ ರಮಣ ನಾಯಕ ಅಮೃತ ಭಾರತಿ ವಿದ್ಯಾಲಯ ಹೆಬ್ರಿ ,ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ತಾಲೂಕಿನ ಘಟಕ ಹೆಬ್ರಿ ಮತ್ತು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಜಂಟಿ ಆಶ್ರಯದಲ್ಲಿ ಸಾಹಿತ್ಯ ಸಿಂಚನ ೭ ಕಾವ್ಯ ಕಮ್ಮಟ ,ಕವನ ಬರೆಹ ತರಬೇತಿ ಕಾರ್ಯಾಗಾರ ಕವಿರಾಜಮಾರ್ಗ ನಡೆದಿದೆ. ಅಮೃತ ಭಾರತಿ ವಿದ್ಯಾಲಯದ ಅಟಲ್ ಟಿಂಕರಿಂಕ್ ಲ್ಯಾಬ್ ಸಭಾಂಗಣದಲ್ಲಿ ನಡೆಯಿತು.

ಸಾಹಿತ್ಯವ್ಯಕ್ತಿಯ ಜೀವನದಲ್ಲಿ ಸಂಸ್ಕಾರವನ್ನು ಸಂಸ್ಕೃತಿಯನ್ನು ಮೂಡಿಸುತ್ತದೆ.ಬರೆಯುವ ಕವನದ ವಸ್ತು ವಿನ ಭಾವನೆ ಉತ್ತಮವಾಗಿದ್ದಾಗ ಒಳ್ಳೆಯ ಕವಿತೆ ಮೂಡುವಂತೆ ವ್ಯಕ್ತಿತ್ವದಲ್ಲೂ ಪ್ರತಿಬಿಂಬಿತವಾಗುತ್ತದೆ ಎಂದು ಶ್ರೀ ಯೋಗೀಶ್ ಭಟ್ ಸದಸ್ಯರು ಅಮೃತ ಭಾರತಿ ಟ್ರಸ್ಟ್ ಕಾರ್ಯಾಗಾರ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಪಾಂಡುರಂಗ ಪೈ ಸಿದ್ಧಾಪುರ ಅಧ್ಯಕ್ಷರು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ,ಶ್ರೀ.ಶ್ರೀನಿವಾಸ ಭಂಡಾರಿ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ತಾಲೂಕು ಘಟಕ ಹೆಬ್ರಿ ಶ್ರೀಮತಿ ಅಪರ್ಣಾ ಆಚಾರ್ ಮುಖ್ಯೋಪಾಧ್ಯಾಯಿನಿ ಅಮೃತ ಭಾರತಿ ವಿದ್ಯಾಲಯ ಹೆಬ್ರಿ,ಶ್ರೀ ಮಹೇಶ ಹೈಕಾಡಿ ಕಾರ್ಯದರ್ಶಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಉಪಸ್ಥಿತರಿದ್ದರು.

ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ಡಾ.ಪ್ರವೀಣ ಕುಮಾರ ಎಸ್ ಕನ್ನಡ ಸಹಾಯಕ ಪ್ರಾಧ್ಯಾಪಕರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹೆಬ್ರಿ ಇವರು ವಿದ್ಯಾರ್ಥಿಗಳಿಗೆ ಕವನ ಬರೆಯುವಲ್ಲಿ ಅವಶ್ಯಕವಾಗಿ ಗಮನಿಸಬೇಕಾದ ಹಂತಗಳ ,ವಿಷಯಗಳ ಕುರಿತು ತರಬೇತಿ ನೀಡಿದರು. ಕುಮಾರಿ ಅಶ್ವಿನಿ ಕೆ ಕೊಂಜಾಡಿ ಯುವ ಕವಯಿತ್ರಿ ಉಪಸ್ಥಿತರಿದ್ದರು. ಕಾರ್ಯಾಗಾರದ ವೇದಿಕೆಯಲ್ಲಿ ಡಾ .ಪ್ರವೀಣ ಕುಮಾರ್ ಎಸ್ ಇವರನ್ನು ಸನ್ಮಾನಿಸ ಲಾಯಿತು.

ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹೆಬ್ರಿಯ ಪದಾಧಿಕಾರಿಗಳಾದ ಶ್ರೀ ಮಂಜುನಾಥ ಶಿವಪುರ ಗೌರವ ಕಾರ್ಯದರ್ಶಿ , ಶ್ರೀ ಪ್ರೀತೇಶ್ ಶೆಟ್ಟಿ ಸಂಘಟನ ಕಾರ್ಯದರ್ಶಿ, ಸದಸ್ಯರಾದ ಶ್ರೀಮತಿ ವಿದ್ಯಾ , ಶ್ರೀಮತಿ ಪುಷ್ಪವತಿ ಬಚ್ಚಪ್ಪು , ಶ್ರೀ. ಬಾಲಕೃಷ್ಣ ಹೆಬ್ಬಾರ್ ಕಾರ್ಯಾಗಾರಕ್ಕೆ ಆಗಮಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು.ಸಂಸ್ಥೆಯ ಸಂಸ್ಕೃತ ಗುರೂಜಿ ಶ್ರೀ ವೇದವ್ಯಾಸ ತಂತ್ರಿ ಉಪಸ್ಥಿತರಿದ್ದರು.

ಕಾರ್ಯಾಗಾರದ ಸಮಾರೋಪ ಸಮಾರಂಭ. : ಸಂಜೆ ಮೂರು ಗಂಟೆಗೆ ನಡೆದ ಕವಿರಾಜಮಾರ್ಗ ಕಾರ್ಯಾ ಗಾರದ ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಶ್ರೀ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಕಾರ್ಕಳ. ಡಾ . ಪ್ರವೀಣ ಕುಮಾರ್ ಎಸ್ ಸಂಪನ್ಮೂಲ ವ್ಯಕ್ತಿ, ಕುಮಾರಿ ಅಶ್ವಿನಿ ಕೆ ಕೊಂಜಾಡಿ ಯುವ ಕವಯಿತ್ರಿ , ಮಹೇಶ್ ಹೈಕಾಡಿ , ಕಾರ್ಯದರ್ಶಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಉಪಸ್ಥಿತರಿದ್ದರು. ವಿದ್ಯಾರ್ಥಿ ಗಳು ಕಾರ್ಯಾಗಾರದ ಅನುಭವದ ಅನಿಸಿಕೆ ಹಂಚಿಕೊಂಡರು,ಕಾರ್ಯಾಗಾರದಲ್ಲಿ ಭಾಗವಹಿಸಿದ 40ವಿದ್ಯಾರ್ಥಿಗಳಿಗೆ ಪರಿಷತ್ತಿನ ವತಿಯಿಂದ ಪುಸ್ತಕ ಸ್ಮರಣಿಕೆ,ಸಂಸ್ಥೆ ಮತ್ತು ವಿದ್ಯಾಭಾರತಿ ಕರ್ನಾಟಕ ವತಿಯಿಂದ ಪ್ರಮಾಣ ಪತ್ರ ನೀಡಲಾಯಿತು.

ಶ್ರೀ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಇವರು ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಮತ್ತು ಪುಸ್ತಕವನ್ನು ವಿತರಿಸಿ ವಿದ್ಯಾರ್ಥಿ ಗಳನ್ನು ಉದ್ದೇಶಿಸಿ ಮಾತನಾಡುವುದರೊಂದಿಗೆ ಮಂಕುತಿಮ್ಮನ ಕಗ್ಗದ ನಾಲ್ಕು ಚರಣವನ್ನು ರಾಗಬದ್ಧವಾಗಿ ಹಾಡಿದರು.ಕುಮಾರಿ ಸಾಧ್ವಿ 8ನೇ ತರಗತಿ ಸ್ವಾಗತಿಸಿದರು,ಕುಮಾರಿ ಭೂಮಿಕಾ ವಂದಿಸಿದರು, ಶ್ರೀ ಮಹೇಶ್ ಹೈಕಾಡಿ , ಕಾರ್ಯದರ್ಶಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ನಿರೂಪಿಸಿದರು.

 
 
 
 
 
 
 
 
 
 
 

Leave a Reply