ಲಿಂಗಾಯತ ಸಮುದಾಯಕ್ಕೆ ಅವಮಾನ, ಮಾಜಿ‌ ಸಿಎಂ‌ ಸಿದ್ದರಾಮಯ್ಯ ಹೇಳಿಕೆ ಖಂಡನೀಯ: ಶ್ರೀನಿಧಿ ಹೆಗ್ಡೆ

ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ಹಿಂದುಳಿದ ವರ್ಗ, ವೀರಶೈವ ಲಿಂಗಾಯತ ಸಮುದಾಯಗಳು ಬಿಜೆಪಿಗೆ ಕರ್ನಾಟಕದಲ್ಲಿ ನೀಡುತ್ತಿರುವ ಅಭೂತಪೂರ್ವ ಜನಬೆಂಬಲ ಮುಂದುವರೆಸಿರುವುದನ್ನು ಕಂಡು ದಿಗ್ಭ್ರಮೆ ಗೊಂಡಿರುವ ಮಾನ್ಯ ಮಾಜಿ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ ಅವರು ಲಿಂಗಾಯತ ಸಮುದಾಯದ ವಿರುದ್ಧ ಆಡಿರುವ ಮಾತುಗಳು ನಿಜಕ್ಕೂ ದುರದೃಷ್ಟಕರ ಹಾಗು ಖಂಡನೀಯ ಎಂದು ಬಿಜೆಪಿಯ ಜಿಲ್ಲಾ ಮಾಧ್ಯಮ ಸಂಚಾಲಕ್ ಶ್ರೀನಿಧಿ ಹೆಗ್ಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲಿಂಗಾಯತ ಸಿಎಂ ಈಗಾಗ್ಲೆ ಇದ್ದಾರಲ್ಲಾ, ಅವ್ರೇ, ಭ್ರಷ್ಟಾಚಾರ ಮಾಡಿ ರಾಜ್ಯ ಹಾಳು ಮಾಡಿರೋದು ಈ ರೀತಿ ಸಿದ್ದರಾಮಯ್ಯ ಅವರು ಹೇಳಿರುವುದು, ಯಾರು ಒಪ್ಪಿಕೊಳ್ಳಲು ಸಾಧ್ಯವಿಲ್ಲ.

ಹಿಂದುಳಿದ ವರ್ಗದ ಸಮುದಾಯವನ್ನು ಈ ಹಿಂದೆ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ನಿಂದಿಸುವ ಮೂಲಕ ತಮ್ಮ ಸಂಸದ ಸ್ಥಾನಕ್ಕೆ ಕುತ್ತು ತಂದು ಕೊಂಡಿದ್ದರು. ನೂಲಿನಂತೆ ಸೀರೆ ತಾಯಿಯಂತೆ ಮಗಳು ಎಂಬತ್ತೆ ತಮ್ಮ ಪಕ್ಷದ ನಿರ್ದೇಶನದಂತೆ ಲಿಂಗಾಯತ ಸಮುದಾಯದಕ್ಕೆ ನಿಂದಿಸುವ ಮೂಲಕ ತಮ್ಮ ನಿಜ ಬಣ್ಣವನ್ನು ಬಯಲು ಮಾಡಿದ್ದಾರೆ.

ಈ ಕೂಡಲೇ ಸಿದ್ದರಾಮಯ್ಯ ಅವರು ತಮ್ಮ ಹೇಳಿಕೆ ಹಿಂಪಡೆದು ಬಹಿರಂಗ ಕ್ಷಮೆ ಕೇಳಬೇಕು ಎಂದು ಆಗ್ರಹಿಸುತ್ತೇನೆ.

ಲಿಂಗಾಯಿತ ಸಮುದಾಯಕ್ಕೆ ನೀಡಿದ ಮೀಸಲಾತಿ ವಿರೋದಿಸಿದ ಕಾಂಗ್ರೆಸ್ಸ್ ಪಕ್ಷ, ಈ ಹಿಂದೆ ಎಸ್ ನಿಜಲಿಂಗಪ್ಪ ಅವರನ್ನು ಯಾವ ರೀತಿ ನಡೆಸಿಕೊಂಡಿದೆ ಹಾಗೂ ನಾಡು ಕಂಡ ಸರಳ ಸಜ್ಜನಿಕೆಯ ರಾಜಕಾರಣಿಗೆ ರಾಜೀವ್ ಗಾಂದಿ ವಿಮಾನ ನಿಲ್ದಾಣದಲ್ಲಿ ವಿರೇಂದ್ರ ಪಾಟೀಲ್ ಅವರಿಗೆ ಮಾಡಿದ ಅವಮಾನ ಕರ್ನಾಟಕದ ಅವಮಾನ ಮಾಡಿರುವುದನ್ನ ಕರ್ನಾಟಕದ ಜನ ಎಂದು ಮರೆಯಲು ಸಾಧ್ಯವಿಲ್ಲ.

 
 
 
 
 
 
 
 
 
 
 

Leave a Reply