Janardhan Kodavoor/ Team KaravaliXpress
24.6 C
Udupi
Sunday, September 25, 2022
Sathyanatha Stores Brahmavara

ಮತ್ತೆ ಎಡವಿದ ಸಿದ್ದರಾಮಯ್ಯ!

ಸಂಸದ ರಾಹುಲ್ ಗಾಂಧಿಯ ಬಳಿಕ ಭಾಷಣ ಮಾಡುವಲ್ಲಿ ಹೆಚ್ಚಿನ ಟ್ರೋಲ್ ಆಗುವವರು ಎಂದರೆ ಅದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಇವರು ಭಾಷಣ ಮಾಡುತ್ತಿರುವುದನ್ನೇ ಕೇಳುತ್ತಿರುವ ಟ್ರೋಲಿಗರಿಗೆ ಸದಾ ಆಹಾರ ಒದಗಿಸುತ್ತಿದ್ದಾರೆ ಈ ಇಬ್ಬರು. ಅದೇ ರೀತಿ ಪುನಃ ಈಗ ಸಿದ್ದರಾಮಯ್ಯನವರು ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ.

ಮೈಸೂರಿನಲ್ಲಿ ‘ಭಾರತ್ ಜೋಡೋ’ ಪೂರ್ವಭಾವಿ ಸಭೆ ಭಾಷಣ ವೇಳೆ ಸಿದ್ದರಾಮಯ್ಯ ಈ ಎಡವಟ್ಟು ಮಾಡಿಕೊಂಡಿದ್ದಾರೆ. ತಮ್ಮ ನಾಯಕ ರಾಹುಲ್ ಗಾಂಧಿಯವರ ಬದಲು ಪ್ರಧಾನಿ ಮೋದಿಯವರ ಜಪ ಮಾಡಿ, ಟ್ರೋಲಿಗೆ ಒಳಗಾಗಿದ್ದಾರೆ.
ತಮ್ಮದೇ ಧಾಟಿಯಲ್ಲಿ ಅವರು ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ‘ಬಿಜೆಪಿಯು ಪಿಎಸ್‌ಐ ಹುದ್ದೆಗಳ ಪರೀಕ್ಷೆಯಲ್ಲಿ ಯುವಕರಿಂದ 300 ಕೋಟಿ ಹಣ ಲೂಟಿ ಮಾಡಿದೆ. ಬಿಜೆಪಿಯವರು ಲಜ್ಜೆಗೆಟ್ಟವರು. ಸರ್ಕಾರದಲ್ಲಿ 40 ಪರ್ಸೆಂಟ್ ಕಮಿಷನ್ ಇದೆ’ ಎಂದೆಲ್ಲಾ ಆಕ್ರೋಶ ಹೊರಹಾಕುತ್ತಿದ್ದರು. ‘ಇಂಥ ಭ್ರಷ್ಟ ಸರ್ಕಾರ ನನ್ನ ರಾಜಕೀಯ ಜೀವನದಲ್ಲಿ ನೋಡಿಲ್ಲ. ಎಡಿಜಿಪಿ ಕಚೇರಿಯಲ್ಲಿ ಪಿಎಸ್‌ಐ ಪರೀಕ್ಷೆ ಉತ್ತರ ಬರೆಸಿದ್ದಾರೆ. ಖಾಲಿ ಪೇಪರ್ ಪಡೆದು ನಂತರ ಉತ್ತರವನ್ನ ಬರೆಯಲಾಗಿದೆ’ ಎಂದರು. ಇದೇ ವೇಳೆ ಮತಾಂತರ ನಿಷೇಧ ಕಾಯ್ದೆಯ ವಿರುದ್ಧವೂ ಕಿಡಿ ಕಾರಿದ ಅವರು, ‘ಧರ್ಮ ಅನುಸರಿಸಲು ಪ್ರತಿಯೊಬ್ಬರಿಗೂ
ಸ್ವಾತಂತ್ರ್ಯ ಇದೆ. ನಮಗೆಲ್ಲಾ ನಮ್ಮ ಧರ್ಮ ಆಚರಿಸಲು ಅವಕಾಶ ಇದೆ. ಎಲ್ಲರನ್ನೂ ಮನುಷ್ಯರಾಗಿ ನೋಡಬೇಕು, ಈ ಕಾಯ್ದೆ ಸರಿಯಿಲ್ಲ. ಇವೆಲ್ಲವೂ ಬಿಜೆಪಿಯ ಕುತಂತ್ರ’ ಎಂದು ಹೇಳಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!