ದೀರ್ಘಕಾಲೀನ ಗುಣವಾಗದ ಗಾಯಗಳಿಗೆ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ

ಮಣಿಪಾಲದ ಶಿವಳ್ಳಿ ಇಂಡಸ್ಟ್ರಿಯಲ್  ಏರಿಯಾದಲ್ಲಿರುವ ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇದೇ ದಿನಾಂಕ 17.04.2023 ರಿಂದ  22.04.2023  ರವರೆಗೆ ಪೂರ್ವಾಹ್ನ 9.00 ರಿಂದ ಅಪರಾಹ್ನ 4.00 ರವರೆಗೆ ದೀರ್ಘಕಾಲೀನ ಗುಣವಾಗದ ಗಾಯಗಳಿಗೆ  ತಪಾಸಣಾ ಮತ್ತು ಚಿಕಿತ್ಸಾ ಶಿಬಿರವನ್ನು  ಹಮ್ಮಿಕೊಳ್ಳಲಾಗಿದೆ.
ದಿನಾಂಕ  17.04.2023   ರಂದು ಮುನಿಯಾಲ್ ಆಯುರ್ವೇದ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಸತ್ಯನಾರಾಯಣ ಬಿ, ಕಾಯಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಶ್ರೀಪತಿ ಆಚಾರ್ಯ, ರೋಗನಿಧಾನ ವಿಭಾಗದ ಮುಖ್ಯಸ್ಥ ಡಾ.ರವಿಶಂಕರ್ ಶೆಣೈ, ಶಲ್ಯತಂತ್ರ ವಿಭಾಗದ ಡಾ.ಸುದೀಪ್, ಡಾ.ರಮೇಶ್, ಡಾ.ರಾಜ್ ಕಿರಣ್ ದೀಪೋಜ್ವಲನ ಮಾಡುವ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಿದರು.
ಸಂಸ್ಥೆಯ ಇತರ ವೈದ್ಯರು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಶಿಬಿರವು ಏಪ್ರಿಲ್ ೧೭ ರಿಂದ ೨೨ನೇ ತಾರೀಕಿನವರೆಗೆ ಬೆಳಿಗ್ಗೆ 9.00 ರಿಂದ ಅಪರಾಹ್ನ 4.00 ರವರೆಗೆ ನಡೆಯಲಿದ್ದು  ಮಧುಮೇಹಿಗಳಲ್ಲಿ ಪಾದದ ಮತ್ತು ಗಾಯಗಳ ಆರೈಕೆ, ವೆರಿಕೋಸ್ ವೈನ್‌ ನಿಂದ ಆಗುವ ಗಾಯಗಳು, ಸ್ಪರ್ಶನಾಶದಿಂದಾಗುವ ಗಾಯಗಳು ಇತ್ಯಾದಿ ದೀರ್ಘಕಾಲೀನ ಗುಣ ವಾಗದ ಗಾಯಗಳಿಗೆ ತಜ್ಞ ವೈದ್ಯರು ಆಯುರ್ವೇದ ರೀತ್ಯಾ ವಿಶೇಷ ಚಿಕಿತ್ಸೆಗಳನ್ನು   ಉಚಿತವಾಗಿ ನೀಡಲಿದ್ದಾರೆ.
ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಸ್ಥೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ. ಶಿಬಿರದ ಹೆಚ್ಚಿನ ಮಾಹಿತಿಗಾಗಿ 81234 03233ಸಂಪರ್ಕಿಸಿ.
 
 
 
 
 
 
 
 
 
 
 

Leave a Reply