Janardhan Kodavoor/ Team KaravaliXpress
31.6 C
Udupi
Wednesday, December 8, 2021
Sathyanatha Stores Brahmavara

ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರಿಂದ ಉತ್ತರಭಾರತದ ಪವಿತ್ರ ತೀರ್ಥ ಕ್ಷೇತ್ರ ಸಂಚಾರ

ಶ್ರೀ ಕೃಷ್ಣಾಪುರ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ತಮ್ಮ ಚತುರ್ಥ ಶ್ರೀ ಕೃಷ್ಣಪೂಜಾ ಪರ್ಯಾಯ ಪೂರ್ವಭಾವಿಯಾಗಿ ಉತ್ತರಭಾರತದ ಪವಿತ್ರ ತೀರ್ಥ ಕ್ಷೇತ್ರ ಸಂಚಾರದಲ್ಲಿ ಆಶ್ವಯುಜ ಷಷ್ಟೀ ತಿಥಿ ಇಂದು ಹರಿದ್ವಾರದಲ್ಲಿ ದಕ್ಷಪ್ರಜಾಪತಿ ಮಂದಿರ ಹರಿದ್ವಾರದ ಅಧಿದೇವತೆ ಮಾಯಾದೇವಿ ಮಂದಿರ, ಆಂಜನೇಯ ಮಂದಿರ , ಪಾರ್ವತೀದೇವಿಯು ಶಿವನನ್ನು ಪತಿಯಾಗಿ ಪಡೆಯಲು ಇಚ್ಛಿಸಿ 3000 ವರ್ಷ ತಪಸ್ಸಾಚರಿಸಿದ ಪವಿತ್ರ ಸ್ಥಳ ಬಿಲ್ವಕೇಶ್ಚರ ಮಹಾದೇವ ಮಂದಿರಗಳ ದರ್ಶನ ಪಡೆದರು.

ಬಳಿಕ ಶ್ರೀ ಪೇಜಾವರ ಮಠದ ಶಾಖಾ ಮಠ ಶ್ರೀ ಮಧ್ವಾಶ್ರಮದಲ್ಲಿ ಶ್ರೀ ಕೃಷ್ಣ – ಶ್ರೀ ಮಧ್ವಗುರುಗಳ ದರ್ಶನ ಪಡೆದು ಮಂಗಳಾರತಿ ಬೆಳಗಿದರು . ಮಧ್ವಾಶ್ರಮದ ವ್ಯವಸ್ಥಾಪಕ ಮನೋಜ್ ವ್ಯವಸ್ಥೆಯಲ್ಲಿ ಸಹಕರಿಸಿದರು .

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!