ಸಿಪಿಐ ಲಿಂಗರಾಜು ಹೃದಯಾಘಾತವೂ- ಆತ್ಮಹತ್ಯೆಯೋ

ಹಿರಿಯೂರು ತಾಲೂಕಿನ ಐಮಂಗಲ ಪೊಲೀಸ್ ಠಾಣೆ ಗ್ರಾಮಾಂತರ ಪೊಲೀಸ್ ಠಾಣೆ ಕರ್ತವ್ಯ ನಿರ್ವಹಿಸಿ ನಂತರ ಬಡ್ತಿ ಪಡೆದು ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಸಿಪಿಐ ಲಿಂಗರಾಜು (42 ವರ್ಷ) ಇಂದು ಬೆಳಿಗ್ಗೆ ಹೃದಯಪಟ್ಟಿದ್ದಾರೆ ಎನ್ನಲಾಗಿದೆ. 

 ಆದರೆ ಹೃದಯಘಾತ ಎಂದರೂ  ಸಹ ವೈಯಕ್ತಿಕ ಜೀವನದಲ್ಲಿ ಎಲ್ಲವೂ ಸರಿ ಇಲ್ಲದೆ ಬಹಳಷ್ಟು ನೋವು  ಅನುಭವಿ ಸುತ್ತಿದ್ದರು ಎಂದು ಹೇಳಲಾಗುತ್ತಿದೆ.  ಅವರ ಸಾವಿನ ಸುತ್ತ ಅನುಮಾನದ ಹುತ್ತ  ಸೃಷ್ಟಿಸಿದ್ದು ಸಾವಿನ ರಹಸ್ಯ ಇದೀಗ ಹೊರ ಬರಬೇಕಾಗಿದೆ

.  ಬೆಂಗಳೂರಿನಿಂದ ಚಿತ್ರದುರ್ಗ ನಗರಕ್ಕೆ ಬಂದು ನಗರದ ನವೀನ್ ರೆಸಿಡೆನ್ಸಿಯಲ್ಲಿ ಲಿಂಗರಾಜು ಅವರು ಲಾಡ್ಜ್ ಮಾಡಿಕೊಂಡು ತಂಗಿದ್ದರು ಎನ್ನಲಾಗಿದೆ.   ಇಂದು ಬೆಳಿಗ್ಗೆ ಎದೆ ನೋವು ಕಾಣಿಸಿಕೊಂಡಿತ್ತಂತೆ, ಹೋಟೆಲ್ಮ ನವರು ಮಹಿಳಾ ಠಾಣೆಗೆ ತಿಳಿಸಿದ್ದು,  ಅವರನ್ನು ಹತ್ತಿರದ ಬಸವೇಶ್ವರ ಆಸ್ಪತ್ರೆಗೆ ತಕ್ಷಣ ದಾಖಲಿಸಲಾಗಿದೆ.  ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. 

 ಹಿಂದೆ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಬಂಗಾರ ಕಳವು ಪ್ರಕರಣದಲ್ಲಿ ಲಂಚದ ಬೇಡಿಕೆ ಇಟ್ಟಿದ್ದರು ಎಂಬ ಆರೋಪಕ್ಕೆ ಅವರನ್ನು ಅಮಾನತು ಮಾಡಲಾಗಿತ್ತು.  ಈ ಪ್ರಕರಣ ರಿವೋಕ್  ಆಗಿದ್ದು ಅದಕ್ಕೆ ಬಿ ರಿಪೋರ್ಟ್ ಹಾಕಿಸಲು ಓಡಾಡುತ್ತಿದ್ದರು ಎಂದು ತಿಳಿದುಬಂದಿದೆ. 

 ಈ ಎಲ್ಲಾ ವಿಚಾರಗಳಿಂದ ಲಿಂಗರಾಜು ಮಾನಸಿಕವಾಗಿ ಕುಗ್ಗಿಹೋಗಿದ್ದರೂ ಎಂದು ಮೂಲಗಳಿಂದ ತಿಳಿದುಬಂದಿದೆ.  ಮತ್ತೊಂದು ಕಡೆ ಮೃತನ  ಕುಟುಂಬದ ಸದಸ್ಯರೊಬ್ಬರಿಗೆ ಅನಾರೋಗ್ಯ ಸಮಸ್ಯೆ ಇತ್ತು ಎನ್ನಲಾಗಿದ್ದು, ಚಿಕಿತ್ಸೆ ಕೊಡಿಸಲು ಸಾಕಷ್ಟು ಸಾಲ ಮಾಡಿದ್ದರು.  ಈ ಎಲ್ಲ ವಿಚಾರಗಳಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದರೂ ಎನ್ನಲಾಗಿದೆ.  ಹೆಚ್ಚಿನ ಮಾಹಿತಿ ಪೊಲೀಸ್ ತನಿಕೆಯಿಂದ ತಿಳಿದು ಬರಬೇಕಿದೆ 

 
 
 
 
 
 
 
 
 
 
 

Leave a Reply