ಸರಕಾರಿ ಶಾಲೆಯಲ್ಲಿ ಮಕ್ಕಳ ಆಹಾರದ ಆಯ್ಕೆಯ ಹಕ್ಕು ಕಸಿಯಬೇಡಿ- ಕೆ. ಜನಾರ್ದನ ಭಂಡಾರ್ಕರ್

ರಾಜ್ಯ ಮತ್ತು ಕೇಂದ್ರ ಸರಕಾರ ಹಲವು ವರ್ಷಗಳಿಂದ ಅಂಗನವಾಡಿಯ ಮೂಲಕ ಗರ್ಭಿಣಿ ಸ್ತ್ರೀಯರಿಗೆ ಗರ್ಭಧರಿಸಿದ 2-3 ತಿಂಗಳಿಂದ 6 ತಿಂಗಳ ಬಾಣಂತಿಯವರೆಗೆ, ಸರ್ಕಾರಿ ರಜಾದಿನ ಬಿಟ್ಟು ಉಳಿದ ದಿನಗಳಲ್ಲಿ ಪ್ರತಿದಿನ ಮೊಟ್ಟೆಯನ್ನು ವಿತರಿಸಿ, ಪೌಷ್ಟಿಕಾಂಶವನ್ನು ಗರ್ಭಿಣಿ ಸ್ತ್ರೀಯರಲ್ಲಿ ಕಾಪಾಡಲು ವ್ಯವಸ್ಥೆ ಮಾಡಿದೆ.

ಅಂಗನವಾಡಿಗೆ ಬರುವ ಮಕ್ಕಳಿಗೆ ಮಂಗಳವಾರ ಹಾಗೂ ಗುರುವಾರ ಮೊಟ್ಟೆಯನ್ನು ನೀಡಲಾಗುತ್ತಿದ್ದು ಕೋವಿಡ್ 19 ನಿಮಿತ್ತ ಅವರಿಗೆ ಸರಕಾರ ನಿಗದಿಪಡಿಸಿದ ಪ್ರಮಾಣದಲ್ಲಿ ಬೇಳೆಕಾಳುಗಳನ್ನು, ಅಕ್ಕಿ ನೆಲಗಡಲೆ, ತೊಗರಿಬೇಳೆ, ಚಿಕ್ಕಿಯನ್ನು ಮನೆಗೆ ಕೊಡಲಾಗುತ್ತದೆ. ಬಹುತೇಕ ಗರ್ಭಿಣಿಯರು ಹಾಗೂ ಮಕ್ಕಳು ಮೊಟ್ಟೆಯನ್ನು ಸೇವಿಸುತ್ತಿದ್ದು, ಗರ್ಭಿಣಿಯರಿಗೆ ಹಾಗೂ ಮಕ್ಕಳಿಗೆ ಮೊಟ್ಟೆ ಬೇಡವಾದರೆ ಮೊಟ್ಟೆಯ ಬದಲಾಗಿ ಬೇಳೆಕಾಳುಗಳನ್ನು ವಿತರಿಸಲಾಗುತ್ತಿದೆ.

ಉತ್ತರಾದಿಮಠದ ಮಕ್ಕಳು ಮೊಟ್ಟೆ ಬೇಡ ಎಂದು ಹೇಳಿದಾಗ ಅವರಿಗೆ ಬೇಳೆ ಕಾಳುಗಳನ್ನು ಮೊಟ್ಟೆಯ ಬದಲಿಯಾಗಿ ಹೆಚ್ಚುವರಿಯಾಗಿ ಪ್ರಮಾಣದಲ್ಲಿ  ಅಂಗನವಾಡಿಯಲ್ಲಿ ಈಗಲೂ ನೀಡುತ್ತಿದ್ದಾರೆ. ವೈದ್ಯರು ಕೂಡ ಮೊಟ್ಟೆಯನ್ನು ಪೌಷ್ಟಿಕಾಂಶ ಹೆಚ್ಚಿಸಲು ಗರ್ಭಿಣಿಯರಿಗೆ ಹಾಗೂ ಮಕ್ಕಳಿಗೆ ಕೊಡಲು ಹೇಳುತ್ತಾರೆ.

ಭಾರತ ದೇಶದಲ್ಲಿ ಸೇವಿಸುವ ಆಹಾರದ ಆಯ್ಕೆ ಅವರವರ ಇಚ್ಚಾ ಸ್ವಾತಂತ್ರ್ಯದ ಹಕ್ಕಾಗಿದ್ದು, ಆಹಾರದ ಆಯ್ಕೆಯನ್ನು ಮಾಡಲು ಶಕ್ತರಾಗಿರುತ್ತಾರೆ, ಆದರೆ ಇದೇ ವಿಧದ ಆಹಾರವನ್ನು ನಾಗರಿಕರು ಉಪಯೋಗಿಸಬೇಕೆಂದು ಫರ್ಮಾನನ್ನು ಹೊರಡಿಸುವುದು ಅಪಾಯಕರ ಬೆಳವಣಿಗೆ ಯಾಗಿದ್ದು, ಸರ್ಕಾರಿ ಶಾಲೆಗೆ ಬರುವ ಮಕ್ಕಳು ಹೆಚ್ಚಾಗಿ ಶೂದ್ರರು, ದಲಿತರು ಹಾಗೂ  ಶೋಷಿತ ಸಮುದಾಯಕ್ಕೆ  ಸೇರಿದವರಾಗಿರುತ್ತಾರೆ. ಅದರಲ್ಲೂ ಉತ್ತರ ಕರ್ನಾಟಕದಿಂದ ವಲಸೆ ಬಂದಿರುವ ಕಾರ್ಮಿಕರ ಮಕ್ಕಳಿಗೆ ಉಡುಪಿಯ ಸರಕಾರಿ ಶಾಲೆಗಳು ವರದಾನವಾಗಿದೆಯೆಂದರೆ ತಪ್ಪಿಲ್ಲ.

ಇದೆಲ್ಲ ವಿಚಾರವನ್ನು ನಾನು ಕಳೆದ 20 ವರ್ಷಗಳಿಂದ ಉಡುಪಿ ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದಲ್ಲಿ ಸದಸ್ಯನಾಗಿ, ಅಧ್ಯಕ್ಷನಾಗಿ, ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರದ ಜಿಲ್ಲಾಧ್ಯಕ್ಷನಾಗಿ, ಪಡಿವೆಲೋರಡ್ ಮಾತೃ ಸಂಸ್ಥೆಯ ಸಹಕಾರದಿಂದ ಎಲ್ಲ ಸರಕಾರಿ ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿನ ಮಕ್ಕಳ ಸ್ಥಿತಿಗತಿಯನ್ನು, ಶಾಲಾ ಮಕ್ಕಳಿಗೆ ಮತ್ತು ಕುಟುಂಬಕ್ಕೆ  ಸರಕಾರದಿಂದ ಸಿಗುವ ಸವಲತ್ತುಗಳಲ್ಲದೇ, ಸ್ಥಳೀಯ ದಾನಿಗಳಿಂದ ಕಲಿಕೋಪಕರಣಗಳನ್ನು ಕೊಡಮಾಡಲು ಪ್ರಯತ್ನಿಸಿದ್ದೇನೆ.

ಮೊಟ್ಟೆ ಬೇಕಿರುವವರಿಗೆ ಮೊಟ್ಟೆ, ಹಣ್ಣು- ಬೇಳೆ ಕಾಳು ಬೇಕಿರುವವರಿಗೆ ಅವರ ಆಯ್ಕೆಯ ಆಹಾರ ನೀಡಲಾಗುತ್ತಿದ್ದು ಆ ವಿಚಾರದಲ್ಲಿ ಈಗ ಯಾಕೆ ಸಮಸ್ಯೆ ಸೃಷ್ಟಿಸಲಾಗುತ್ತಿದೆ ಎಂದು ಸ್ವಾಮೀಜಿಯವರು ಉತ್ತರಿಸಲಿ. ಪ್ರಜ್ಞಾವಂತ ನಾಗರಿಕರು ಪ್ರಾರಂಭದಲ್ಲೆ ಈ ವಿಚಾರದ ಬಗ್ಗೆ ಚಿಂತಿಸದಿದ್ದರೆ ಮುಂದಿನ ದಿನಗಳಲ್ಲಿ ದೇಶದಲ್ಲಿ ಎಲ್ಲರೂ ಸರಕಾರ ಸೂಚಿಸಿದ ಆಹಾರ ಸೇವಿಸಬೇಕು ಮತ್ತು ಸಸ್ಯಹಾರಿಗಳಾಗಬೇಕು ಎಂದು ಶಾಸನವು ಆಗಬಹುದು ಎಚ್ಚರಿಕೆಯಿರಲಿ.

ಕೆ. ಜನಾರ್ದನ ಭಂಡಾರ್ಕರ್, ಮಾಜಿ ಅಧ್ಯಕ್ಷರು, ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರ, ಉಡುಪಿ. 
 
 
 
 
 
 
 
 
 
 
 

1 COMMENT

  1. ಆಹಾರ ಜೀವ ಚೈತನ್ಯಕ್ಕೆ ಅಗತ್ಯ.ಹುಟ್ಟಿನಿಂದ ಆಹಾರ ಪದ್ಧತಿಗೆ ಯಾವುದೇ ಜೀವ ಹೊಂದಿಕೊಳ್ಳುತ್ತದೆ.ಮನೆ ಸ್ವಾತಂತ್ರ್ಯದ ಮೂಲ ನೆಲೆ.ದೇಶದ ಮೈಕ್ರೋ ಯೂನಿಟ್.ಆದರೆ ಮನುಷ್ಯ ಸಾರ್ವಜನಿಕ ವ್ಯವಸ್ಥೆ ಪ್ರವೇಶಿಸಿದಾಗ ಸಮಾನತೆ,ಸಹೋದರತೆ ಇತ್ಯಾದಿ ಸಾಂವಿಧಾನಿಕ ನಿಯಮಗಳು ಸಹಜವಾಗಿ ಬರುತ್ತವೆ.ಇಲ್ಲಿ ಸಂವಿಧಾನ ಮತ್ತು ಸಮಾನತೆ ಬಯಸುವವರ ಹಲವು ಮಕ್ಕಳ ಮದ್ಯೆ ಇರುವ ಕೆಲವು ಮಕ್ಕಳ ಕಡೆಗಣಿಸಿ ಮೊಟ್ಟೆ ಕೊಡಿ ಎಂಬ ಒತ್ತಡದಲ್ಲಿ ಒಂದು ಜಾತಿ ಅಥವಾ ವರ್ಗವನ್ನು ಟಾರ್ಗೆಟ್ ಮಾಡುತ್ತಿವೆ ಅನಿಸುತ್ತದೆ.ಕೊಡಿ,ಮೊಟ್ಟೆ ಅತ್ಯಗತ್ಯ. ಕೊಳಿಗಿನ್ನ ಮನುಷ್ಯನಿಗೆ ಮೊಟ್ಟೆ ಬೇಕಿರಬಹುದು. ಆದರೆ ತಿನ್ನದ ಮಗುವಿನ ಮದ್ಯೆ ತಿನ್ನುವುದು ಸರಿಯೇ. ಮೊಟ್ಟೆ ಕೊಡುವುದೇ ಆದರೆ ತಿನ್ನುವುದು ಕುಟುಂಬದ ಮನೆಗೇ ಕೂಡಿ. ಅಪೌಷ್ಠಿಕತೆ ಮಗುವಿನ ಮನೆಯವರಿಗೆ ಇರುವುದಿಲ್ಲವೇ. ಕೊಡಿ ಮೊಟ್ಟೆಯನ್ನು ಅವರವರ ಮನೆಗೆ. ಇಲ್ಲಿ, ರಾಜಕೀಯ ಬೇಡ

Leave a Reply