ಯುಪಿಎಂಸಿ – ದಿಶಾ ಲೇಡಿಸ್ ಕ್ಲಬ್\ ಆಯುರ್ವೇದ ಜೀವನ ಕ್ರಮದಿಂದ ದೀರ್ಘಾಯುಷ್ಯ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ‘ದಿಶಾ’ ಮಹಿಳಾ ಘಟಕದ ವತಿಯಿಂದ ವಿದ್ಯಾರ್ಥಿನಿಯರಿಗೆ’ಆ್ಯನ್ ಆಯುರ್ವೇದಿಕ್ ಲೈಫ್ ಸ್ಟೈಲ್’ ಎಂಬ ವಿಚಾರವಾಗಿ ಉಪನ್ಯಾಸ ಕಾರ್ಯಕ್ರಮವು ನವೆಂಬರ್ 21 ರಂದು ನಡೆಯಿತು.

ಮಲ್ಪೆಯ ಧಾತ್ರಿ ಆಯುರ್ವೇದ ಪಂಚಕರ್ಮ ಸ್ಪೆಷಾಲಿಟಿ ಕ್ಲೀನಿಕ್ ನ ಡಾ. ಸುರಕ್ಷಾ ಪೂಜಾರಿ ಆಯುರ್ವೇದ ಜೀವನ ಕ್ರಮಗಳಾದ ಪಂಚಕರ್ಮ, ದೋಷ, ಬ್ರಾಹ್ಮೀ ಮುಹೂರ್ತ, ಪ್ರಾಣಾಯಾಮ, ಅಭ್ಯಂಗ, ಆಹಾರ ಕ್ರಮ ಮತ್ತು ರಾತ್ರಿ ಚರ್ಯ ದ ಕುರಿತಾಗಿ ಈ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.

ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ಅಧ್ಯಕ್ಷರಾಗಿದ್ದರು. ದಿಶಾ ಮಹಿಳಾ ಸಂಘದ ಅಧ್ಯಾಪಕ ಸಲಹೆ ಗಾರರಾದ ಶ್ರೀಮತಿ ಜಯಲಕ್ಷ್ಮಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಕಾವ್ಯ ಶೆಟ್ಟಿ ಸ್ವಾಗತಿಸಿದರು, ಸಿಂಚನಾ ಶೆಟ್ಟಿಗಾರ್ ವಂದಿಸಿದರು, ಪ್ರಣೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply