ಪಿಪಿಸಿಯಲ್ಲಿ ‘ಭಾಷೆ-ಬದುಕು-ಹಾಸ್ಯ’ ವಿಶೇಷ ಉಪನ್ಯಾಸ

ಉಡುಪಿ : ಇಂದಿನ ವಿದ್ಯಾರ್ಥಿಗಳಿಗೆ ಭಾಷೆಯ ಅರಿವು ಅಗತ್ಯ. ಶಿಕ್ಷಣ ಪಡೆದು, ಉದ್ಯೋಗಸ್ಥರಾದ ಮೇಲೂ ತಮ್ಮ ಊರು, ಶಾಲೆ, ಶಿಕ್ಷಕರನ್ನು ಮರೆಯದೇ ಗೌರವಿಸುವವರು ನಿಜವಾದ ವಿದ್ಯಾವಂತರು ಎಂದು ಕುಂದಗನ್ನಡದ ರಾಯಭಾರಿ ಎಂದೇ ಪರಿಚಿತರಾಗಿರುವ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮನು ಹಂದಾಡಿಯವರು ಹೇಳಿದರು.

ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿ ವೇದಿಕೆ ಹಾಗೂ ಕನ್ನಡ ವಿಭಾಗದ ಸಂಯೋಜನೆಯಲ್ಲಿ ಸಂಪನ್ನಗೊAಡ ‘ಭಾಷೆ-ಬದುಕು-ಹಾಸ್ಯ’ ವಿಷಯದ ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಇತ್ತೀಚೆಗಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಮೂಲಕ ಭಾಷೆಯ ಮೇಲೆ ಗಂಭೀರ ಪರಿಣಾಮ ಆಗುತ್ತಿದೆ. ಭಾಷೆಯೊಂದಿಗೆ ಸಂಸ್ಕೃತಿ, ಸಂಸ್ಕಾರಗಳೂ ಅಳಿಯುತ್ತಿವೆ. ಆಧುನಿಕ ಯುಗದಲ್ಲಿ ಭಾಷೆಯನ್ನು ಎಲ್ಲಿ, ಹೇಗೆ ಬಳಸಬೇಕು ಎನ್ನುವ ಪರಿಜ್ಞಾನ ಇಲ್ಲದಿರುವುದೇ ಭಾಷೆಯ ಅಳಿವಿನ ಮೂಲ ಕಾರಣವಾಗಿದೆ ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮು ಎಲ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಐಕ್ಯುಎಸಿ ಸಂಯೋಜಕರಾದ ಡಾ. ವಿನಯ್ ಕುಮಾರ್, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಮಂಜುನಾಥ ಕರಬ, ವಿದ್ಯಾರ್ಥಿ ವೇದಿಕೆಯ ಸಂಯೋಜಕರೂ, ಕನ್ನಡ ಉಪನ್ಯಾಸಕರೂ ಆಗಿರುವ ಶಿವಕುಮಾರ ಅಳಗೋಡು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅನುಷಾ ಸಿ.ಹೆಚ್ ನಿರೂಪಿಸಿದರು. ಶ್ರೀರಕ್ಷಾ ಹೆಗಡೆ ಪ್ರಾರ್ಥಿಸಿದರು. ಚೇತನಾ ಪೈ ಸ್ವಾಗತಿಸಿ, ಸಾತ್ವಿಕ್ ಭಟ್ ವಂದಿಸಿದರು.

 
 
 
 
 
 
 
 
 
 
 

Leave a Reply