ಸರಿಗಮ ಭಾರತಿಯಲ್ಲಿ ದಿನವಿಡೀ ವಿಜಯದಶಮಿ ಸಂಗೀತೋತ್ಸವ: ರಜತ ಸಂಭ್ರಮ -2023

ಪರ್ಕಳದ ಸರಿಗಮ ಭಾರತಿ ಸಂಗೀತ ವಿದ್ಯಾಲಯದಲ್ಲಿ ದಿ.24.10.2023ರಂದು ಬೆಳಿಗ್ಗೆ 8.30 ರಿಂದ ರಾತ್ರಿ 9.00ರವರೆಗೆ ವಿಜಯದಶಮಿ ಸಂಗೀತೋತ್ಸವ ನಡೆಯಲಿದೆ. ಬೆಳಿಗ್ಗೆ 9.30ಕ್ಕೆ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ, ರೊ.PHF.ಮಂಜುನಾಥ ಉಪಾಧ್ಯ ಅತಿಥಿಗಳಾಗಿ ಭಾಗವಹಿಸುವರು. 
ಈ ಸಂದರ್ಭದಲ್ಲಿ ಬಹುಮುಖ ಪ್ರತಿಭೆಯ ಪಾಡಿಗಾರು ಶ್ರೀ ಲಕ್ಷ್ಮೀನಾರಾಯಣ ಉಪಾಧ್ಯ ಅವರನ್ನು ಅಭಿನಂದಿಸಿ ಗೌರವಿಸಲಾಗುವುದು. ಬೆಳಿಗ್ಗೆ 8.30ರಿಂದ ಪಿಳ್ಳಾರಿ ಗೀತೆಗಳು, 9.00ಕ್ಕೆ ಹೊಸ ಸಂಗೀತ ಪಾಠ.
10.20ರಿಂದ ಕು.ನೀಹಾರಿಕ ಅವರ ಹಿಂದುಸ್ತಾನಿ ಗಾಯನ, ತಬಲಾದಲ್ಲಿ ಭಾರವಿ ದೇರಾಜೆ, ಹಾರ್ಮೋನಿಯಂ ಆದಿತ್ಯ ಭಟ್ ಪಾಣೆಮಂಗಳೂರು.
11.30 ರಿಂದ ‘ಕೃಷ್ಣ ಗಾನ ಸುಧಾ’ ಉಷಾ ಹೆಬ್ಬಾರ್ ಮತ್ತು ಶಿಷ್ಯರಿಂದ ಭಕ್ತಿ ಗೀತ. 12.30 ವೇದಘೋಷ, ಸರಸ್ವತಿ ಪೂಜೆ,
12.45ರಿಂದ ಸಂಗೀತ ಕೃತಿಗಳ ಪ್ರಸ್ತುತಿ: ರೋಶ್ನಿ ,ಕಶಿಕ, ಅಚಲ,ಮನಸ್ವಿನಿ, ಕ್ಷಿತಿಜ್ , ತೀಕ್ಷಣ್, ಸ್ವಸ್ತಿ ಎಂ.ಭಟ್, ಅನುಶ್ರೀ ಮಳಿ,ಮನ್ವಿ. ವಯೊಲಿನ್ : ಅನುಶ್ರೀ ಮಳಿ,ಮಹತೀ ಕೆ.ಕಾರ್ಕಳ, ವೈಭವ್ ಪೈ, ಮೃದಂಗ: ಪ್ರಣವ್,ವರ್ಚಸ್,ಶಾಶ್ವತ್ ಕೆ.ಭಟ್. 
3.20ರಿಂದ ಎಲ್ಲಾ ಕಲಾವಿದರಿಂದಭ ಪಂಚರತ್ನ ಗೋಷ್ಠಿ ಗಾಯನ,
ಸಂಜೆ 4.00ರಿಂದ ಕು.ಆತ್ರೇಯೀ ಕೃಷ್ಣಾ ಹಾಡುಗಾರಿಕೆ, ವಯೊಲಿನ್:ಪೃಥ್ವಿ ಭಾಸ್ಕರ್, ಮೃದಂಗ: ನಂದನ್ ಕಶ್ಯಪ್, ಮೋರ್ಸಿಂಗ್: ಲಿಖಿತ್ ಮೈಸೂರು.
6.50ರಿಂದ ‘ನಾಟ್ಯವಸಂತ’ ಕುಂದಾಪುರದ ಪ್ರವಿತಾ ಅಶೋಕ್ ಅವರ ಶಿಷ್ಯರಿಂದ ಭರತನಾಟ್ಯ,
8.10ರಿಂದ ಪುತ್ತೂರಿನ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ದೀಪಕ್ ಕುಮಾರ್ ಹಾಗೂ ಪ್ರೀತಿಕಲಾ ದೀಪಕ್ ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ ಎಂದು ನಿರ್ದೇಶಕಿ ಉಮಾಶಂಕರಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
 
 
 
 
 
 
 
 
 
 
 

Leave a Reply