ಹಿಂದೂ ಸಂಸ್ಕೃತಿಯ ಸಂಗೀತ ಹಾಗೂ ನೃತ್ಯ ವನ್ನು ಬೆಳೆಸಿ ಉಳಿಸಿದರೆ ಸನಾತನ ಧರ್ಮವು ಉಳಿದೀತು- ಪುತ್ತಿಗೆ ಶ್ರೀ

ಶ್ರೀ ಕೃಷ್ಣ ಮಠದ ಮಧ್ವ ಮಂಟಪದಲ್ಲಿ ಬೆಂಗಳೂರಿನ ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಕಲಾವಿದರ ಒಕ್ಕೂಟದ ವತಿಯಿಂದ ಶ್ರಿ ಕೃಷ್ಣ ಮಠದಲ್ಲಿ ನಡೆಸಲ್ಪಡುವ ಸರಣಿ ಸಾಂಸ್ಕೃತಿಕ ಕಾರ್ಯಕ್ರಮ ವನ್ನ ಉದ್ಘಾಟಿಸಿದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ನಮ್ಮ ಭಾರತೀಯ ಕಲಾ ಸಂಪತ್ತನ್ನು ರಕ್ಷಿಸಿ , ಅದನ್ನು ಕೂಡ ಶ್ರೀ ಕೃಷ್ಣನಿಗೆ ಅರ್ಪಿಸುವುದು ಕೂಡ ಭಗವಂತನ ಸೇವೆಯೇ ಎಂಬುದಾಗಿ ತಿಳಿಸಿ ಅನುಗ್ರಹಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಒಕ್ಕೂಟದ ಅಧ್ಯಕ್ಷರು ಶ್ರೀ ಸಾಯಿ ನಾರಾಯಣ ರವರು ಪ್ರಾಸ್ತಾವಿಕವಾಗಿ ಮಾತಾಡಿದರು.ಕಾರ್ಯಕ್ರಮದ ಸಂಚಾಲಕರಾದ ಶ್ರೀ ಮಠದ ಶ್ರೀ ರಮೇಶ್ ಭಟ್ ಸ್ವಾಗತಿಸಿ ಧನ್ಯವಾದವಿತ್ತರು ನಂತರ ವೀಪಂಚಿ ವಿದುಷಿ ಪವನ ಬಿ ಆಚಾರ್ಯರು ಮತ್ತು ತಂಡ ದ ಮೂಲಕ ಪಂಚ ವೀಣಾ ವಾದ್ಯ ನುಡಿಸಿದರು

 
 
 
 
 
 
 
 
 
 
 

Leave a Reply