“ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದಿಂದ ಸಾಮಾಜಿಕ ಸಂಘಕ್ಕೆ ಮನ್ನಣೆ”

ಉಪ್ಪೂರು : ಕಳೆದ ಹಲವಾರು ದಶಕಗಳಿಂದ ಉಪ್ಪೂರು – ಹಾವಂಜೆ ಗ್ರಾಮದ ರೈತ ಬಾಂಧವರಿಗೆ, ಬಡ ಕಾರ್ಮಿಕ ವರ್ಗದವರಿಗೆ, ಸ್ವ ಉದ್ಯೋಗಿಗಳಿಗೆ ಸಹಕಾರ, ಸಹಬಾಳ್ವೆ, ಸಹ ಜೀವನ ತತ್ವಗಳಿಂದಕೂಡಿದ ಆರ್ಥಿಕ ಸಹಕಾರ ನೀಡುತ್ತಾ ಜನಮನದ ಹೃದಯದಲ್ಲಿ ನಾಡಿಮಿಡಿತ ವಾಗಿರುವ ಸಂಸ್ಥೆ “ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘ(ರಿ.)”. ಸಂಸ್ಥೆಯ ಸಹಕಾರಿ ಸೇವೆ ಹಾಗೂ ಸಾಧನೆಗೆ ಹಲವರು ಜಿಲ್ಲಾ ಮಟ್ಟದ ಅಲ್ಲದೆ ರಾಜ್ಯ ಮಟ್ಟದ ಸಮ್ಮಾನ ಮನ್ನಣೆ ಪ್ರಶಸ್ತಿಗಳು ದೊರಕಿದ್ದು ನಮ್ಮ ಗ್ರಾಮಕ್ಕೆ ಹೆಮ್ಮೆ ಎಂದು ಉಪ್ಪೂರು ಕೊಳಲಗಿರಿಯ ಯುವ ವಿಚಾರ ವೇದಿಕೆ (ರಿ.) ತಿಳಿಸಿದೆ.

ಅಂತೆಯೇ ಸಹಕಾರಿ ಸಂಘದ ಈ ವರ್ಷದ ವಾರ್ಷಿಕ ಮಹಾ ಸಭೆಯು ಬಹಳ ವಿಶೇಷವಾಗಿ ಗುರುತಿಸಿಕೊಂಡಿದ್ದು ನಮ್ಮ ಊರಿನ ಯುವಜನರಿಗೆ ಯುವ ವಿಚಾರ ವೇದಿಕೆಗೆ ಹೆಮ್ಮೆಯ ವಿಷಯ. ಕೃಷಿ ಕಾಯಕ ಕ್ರಮೇಣವಾಗಿ ನಿದಾನವಾಗಿ ತನ್ನ ತನ ಕಳೆದುಕೊಂಡು ಕೃಷಿ ಭೂಮಿಗಳೆಲ್ಲ ಹಡಿಲು ಭೂಮಿಗಳಾಗಿ ಮಾರ್ಪಾಡುಗೊಳ್ಳುತ್ತಿರುವ ಸಂದರ್ಭದಲ್ಲಿ ಯುವ ವಿಚಾರ ವೇದಿಕೆಯ ಯುವ ಜನರು ಕಳೆದ ಕೆಲವು ವರ್ಷಗಳಿಂದ ಹಡಿಲು ಭೂಮಿ ಕೃಷಿ ಕಾಯಕ ನಡೆಸುತ್ತಾ ಬಂದಿದ್ದು, ಮುಂದೆ ಯುವ ಜನರು, ಯುವಕ ಸಂಘ ಸಂಸ್ಥೆಗಳು ಪ್ರೇರಣೆಗೊಂಡು ತಾವು ಕೃಷಿ ಕಾಯಕ ನಡೆಸಲು ಮುಂದೆ ಬರಲಿ ಎನ್ನುವ ಉದ್ದೇಶವಿಟ್ಟುಕೊಂಡಿದ್ದೇವು ನಾವು ಎಂದಿದ್ದಾರೆ.

ಅನಿರೀಕ್ಷಿತವಾಗಿ ನಮ್ಮ ಯುವ ವಿಚಾರ ವೇದಿಕೆಯ ಕೃಷಿ ಕಾಯಕಕ್ಕೆ ಇನ್ನೂ ಪ್ರೇರಣೆಯಾಗಲಿ ಎನ್ನುವಂತೆ “ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘ” ದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಇಂದು ತಮ್ಮ ವಾರ್ಷಿಕ ಮಹಾಸಭೆಯಲ್ಲಿ ನಮ್ಮ ಯುವ ವಿಚಾರ ವೇದಿಕೆಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯವರನ್ನು ಗುರುತಿಸಿ ಗೌರವಿಸಿ ಸಭಾ ವೇದಿಕೆಯಲ್ಲಿ ಸಮ್ಮಾನಿಸಿರುವುದು ವೇದಿಕೆಯ ಸರ್ವ ಸದಸ್ಯರಿಗೆ ತುಂಬಾ ಹೆಮ್ಮೆ , ಗೌರವ, ಸಂತೋಷ, ಸಂತೃಪ್ತಿಗೆ ಕಾರಣವಾದ ಕ್ಷಣ ನಿಜಕ್ಕೂ ಮರೆಯಲಾಗದು. ನಮ್ಮ ವೇದಿಕೆಯ ಕೃಷಿ ಕಾಯಕಕ್ಕೆ ಗುರುತಿಸಿ ಗೌರವಿಸಿದ ಉ.ವ್ಯ.ಸೇ. ಸ. ಸಂಘದ ಅಧ್ಯಕ್ಷರು, ಸರ್ವ ಸದಸ್ಯರು , ವ್ಯವಸ್ಥಾಪಕರು, ಹಾಗೂ ಸರ್ವ ಸಿಬ್ಬಂದಿಗಳಿಗೆ ವೇದಿಕೆಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಅಭಾರಿಗಳಾಗಿದ್ದೇವೆ ಎನ್ನುತ್ತಾ ತಮಗೆ ವೇದಿಕೆಯ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ ಎಂದರು.

ಭವಿಷ್ಯದಲ್ಲಿ ಈ ವಿಚಾರಗಳಿಂದ ಪ್ರೇರಿತರಾಗಿ ಊರಿನ ಇತರ ಸಂಘ ಸಂಸ್ಥೆಗಳು ಕೃಷಿ ಕಾಯಕದಲ್ಲಿ ತೊಡಗಿಸಿಕೊಳ್ಳುವಂತೆ ಆಗಲಿ, ಉಪ್ಪೂರು ಒಂದು ಮಾದರಿ ಕೃಷಿ ಗ್ರಾಮವಾಗಿ ಮೂಡಲಿ ಎನ್ನುವ ಸದಾಶಯ ನಮ್ಮದು ಎಂದು ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply