ರೋಟರಿ ಉಡುಪಿ ರಾಯಲ್ ಪದಪ್ರದಾನ ಸಮಾರಂಭ

 ಅಂತಾರಾಷ್ಟ್ರೀಯ ರೋಟರಿ ಕ್ಲಬ್ ಗಳಿಗೆ ಸೇವಾ ಯೋಜನೆಗಳನ್ನು ಸ್ರಷ್ಟಿ ಮಾಡುವ ಅವಶ್ಯಕತೆ ಇರುವುದಿಲ್ಲ, ಕಾಲ ಕಾಲಕ್ಕೆ ಜಗತ್ತಿನಲ್ಲಿ ನಡೆಯುವ ಪ್ರತಿಕೂಲ ವಿದ್ಯಮಾನಗಳು ಸೇವೆಯ ಅವಕಾಶವನ್ನು ಸ್ವಯಂ ನಿರ್ಮಾಣ ಗೊಳಿಸುತ್ತದೆ. ರೋಟರಿ ಸದಸ್ಯರು ಅದಕ್ಕೆ ದೇಶ ಕಾಯುವ ಯೋಧರಂತೆ ಸದಾ ಸನ್ನದ್ಧರಾಗ ಬೇಕು ಎಂದು 3182 ರೋಟರಿ ಜಿಲ್ಲೆಯ ಮಾಜಿ ಗವರ್ನರ್  ಡಾ. ಭರತೇಶ್ ಅದಿರಾಜ್ ಕರೆ ನೀಡಿದರು. 
ಅವರು ಶುಕ್ರವಾರ ರೋಟರಿ ಕ್ಲಬ್ ಉಡುಪಿ ರಾಯಲ್ ಆಶ್ರಯದಲ್ಲಿ ಹಮ್ಮಿ ಕೊಂಡ 2021-22 ರ ಸಾಲಿನ ನೂತನ ಅಧ್ಯಕ್ಷ ತೇಜೇಶ್ವರ್ ರಾವ್ ಮತ್ತವರ ಕಾರ್ಯಕಾರಿ  ತಂಡದ ಪದಗ್ರಹಣ ಸಮಾರಂಭದಲ್ಲಿ ಪದ ಪ್ರಧಾನಾದಿಕಾರಿಯಾಗಿ ಭಾಗವಹಿಸಿ ಮಾತನಾಡಿದರು. 
ಸಮಾರಂಭದಲ್ಲಿ ಇತ್ತೀಚಿಗೆ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳಿಯ ನಿರ್ದೇಶಕರಾಗಿ ಆಯ್ಕೆಯಾದ ಬಡಗುಬೆಟ್ಟು ಕೋ ಆಪರೇಟಿವ್ ಸೊಸೈಟಿಯ ಮಹಾಪ್ರಬಂಧಕ ಜಯಕರ್ ಶೆಟ್ಟಿ ಇಂದ್ರಾಳಿ, ಕರೋನಾ ಯೋಧರಾದ ಪ್ರಶಾಂತ್ ಸನಿಲ್ ಸಗ್ರಿ, ಮುರಳೀಧರ್, ರಕ್ತದ ಆಪತ್ಬಾಂಧವ  ಸತೀಶ್ ಸಾಲಿಯಾನ್ ರವರನ್ನು ಸನ್ಮಾನಿಸಲಾಯಿತು.
 ಶಾಲೆಗಳಿಗೆ ಸ್ಯಾನಿಟೈಸರ್ ಉಪಕರಣ ಮತ್ತು ಆಕ್ಸಿಮೀಟರ್ ಗಳನ್ನು ವಿತರಿಸಲಾಯಿತು. ಸಹಾಯಕ ಗವರ್ನರ್  ಡಾ.ಸುರೇಶ್ ಶೆಣೈ, ವಾರ್ತಾ ಸಂಚಿಕೆ ಬಿಡುಗಡೆ ಗೊಳಿಸಿದರು. ವಲಯ ಸೇನಾನಿ ಉಮೇಶ್ ರಾವ್ ಮತ್ತಿತರರು ಉಪಸ್ಥಿತರಿದ್ದರು.  ಲಕ್ಷ್ಮಿ ಕಿನ್ನಿಮುಲ್ಕಿಯವರು ಗತಸಾಲಿನ ವರದಿಯನ್ನು ವಾಚಿಸಿದರು. 
ನಿರ್ಗಮನ ಅಧ್ಯಕ್ಷ ಮಂಜುನಾಥ್ ಮಣಿಪಾಲ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ಮಂಗಳ ಚಂದ್ರಕಾಂತ್ ವಂದಿಸಿ, ಸ್ಥಾಪಕ ಅಧ್ಯಕ್ಷ ರತ್ನಾಕರ್ ಇಂದ್ರಾಳಿ ನಿರೂಪಿಸಿದರು.
 
 
 
 
 
 
 
 
 
 
 

Leave a Reply