ಉಡುಪಿಗೆ ರೋಟರಿ ಪುಣೆ ಮಹಿಳಾ ರಾಲಿ

ಪುಣೆಯ 30 ರೋಟರಿಕ್ಲಬ್ ಗಳಿಂದ 26 ಕಾರುಗಳಲ್ಲಿ ಸುಮಾರು 100 ರೋಟರಿ ಸದಸ್ಯರು ವಿವಿದ ವಿಷಯಗಳಾದ ಮಹಿಳಾ ಸಬಲೀಕರಣ, ಅಂಗಾಂಗ ದಾನ, ಮಾದಕದ್ರವ್ಯ ಮುಕ್ತ ಸಮಾಜ ಮತ್ತು ಪ್ಲಾಸ್ಟಿಕ್ ನಿಷೇಧ ಮುಂತಾದವುಗಳ ಬಗ್ಗೆ ಜನ ಜಾಗೃತಿ ಗಾಗಿ ಪುಣೆಯಿಂದ ಸುಮಾರು 2100 ಕಿ.ಮಿ.ಯನ್ನು 5ದಿನದಲ್ಲಿ ಕ್ರಮಿಸುತ್ತಾ ರೋಟರಿಯ 7 ಜಿಲ್ಲೆಗಳಲ್ಲಿ ಈ ಅಭಿಯಾನವನ್ನು ಮುನ್ನಡೆಸಲಿದ್ದಾರೆ.

ರೋಟರಿ ಜಿಲ್ಲಾ ರಾಜ್ಯಪಾಲರು, ಮಾಜಿ ರಾಜ್ಯಪಾಲರು ಮತ್ತು ವಿವಿದ ಕ್ಲಬ್ ಗಳ ಅದ್ಯಕ್ಷ ಮತ್ತು ಸದಸ್ಯರು ಮುಖ್ಯವಾಗಿ ಮಹಿಳೆಯರೇ ಈ ರಾಲಿಯಲ್ಲಿ ಬಾಗವಹಿಸುತ್ತಿದ್ದಾರೆ. ವಲಯ 4ರ ಕ್ಲಬ್ ಗಳಾದ ರೋಟರಿ ಕ್ಲಬ್ ಐಸಿರಿ ಪರ್ಕಳ, ಮಣಿಪಾಲ, ಕಲ್ಯಾಣಪುರ ಮತ್ತು ರೋಟರಿ ಉಡುಪಿಯು ಜಿಲ್ಲಾ ಗವರ್ನರ್ ರೋ.ಡಾ.ಜಯಗೌರಿಯವರ ನೇತೃತ್ವದಲ್ಲಿ ದಲ್ಲಿ ಮಣಿಪಾಲದ ರೋಟರಿ ಹಾಲ್ ನಲ್ಲಿ ​ದಿನಾಂಕ 01.12.2022, ಬೆಳಿಗ್ಗೆ ಗಂಟೆ 8.30ಕ್ಕೆ ಮಾಜಿ ಜಿಲ್ಲಾರೋಟರಿ ಗವರ್ನರ್ ಗಳಾದ ಡಾ.ಭರತೇಶ್ ಅಧಿರಾಜ್,

ರೋ.ರಾಜಾರಾಮ ಭಟ್, ಜಿಲ್ಲಾ ತರಬೇತುದಾರ ರೋ.ಅಭಿನಂದನಶೆಟ್ಟಿ, ಸಹಾಯಕ ಗವರ್ನರ್ ರೋ.ರಾಮಚಂದ್ರ ಉಪಾಧ್ಯಾಯ, ಜಿಲ್ಲಾ ಕಾರ್ಯದರ್ಶಿಗಳಾದ, ರೋ.ಅಮಿತ್ ಅರವಿಂದ ಮತ್ತು ರೋ. ಪ್ರಶಾಂತ ಹೆಗ್ಡೆ ಸೇರಿದಂತೆ ವಿವಿದ ಕ್ಲಬ್‌ಗಳ ಅಧ್ಯಕ್ಷರುಗಳಾದ ರೇಣು ಜಯರಾಂ, ಚಾರ್ಲೋಟ್ ಲೀವಿಸ್, ಪ್ರಭಾಕರ ಶೆಟ್ಟಿ, ಸುಬ್ರಹ್ಮಣ್ಯ ಕಾರಂತ ಮತ್ತು ಇತರ ಸದಸ್ಯರು ಅವರನ್ನು ಸ್ವಾಗತಿಸಲಿದ್ದಾರೆ ಎಂದು ರೋಟರಿ ಪ್ರಕಟಣೆ ತಿಳಿಸಿದೆ.

 
 
 
 
 
 
 
 
 
 
 

Leave a Reply