ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ವತಿಯಿಂದ ಮನೆ ಹಸ್ತಾಂತರ

ಹೂಡೆ: ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ವತಿಯಿಂದ ‘ಸೂರಿಲ್ಲದವರಿಗೆ ಸೂರು’ ಒದಗಿಸುವ ಕಾರ್ಯಕ್ರಮದಡಿಯಲ್ಲಿ ದಾನಿಗಳ ಸಹಾಯದಿಂದ ಅರ್ಥಿಕವಾಗಿ ಹಿಂದುಳಿದ ಎರಡು ಕುಟುಂಬಗಳಿಗೆ ಮನೆ ಹಸ್ತಾಂತರ ಮಾಡಲಾಯಿತು. 

ಮನೆ ಮಾಲಿಕ ಅನ್ವರ್ ಸಾದೀಕ್ ಮತ್ತು ದೇವದಾಸ ಖಾರ್ವಿಯವರಿಗೆ ಮನೆಯ ಕೀಲಿಕೈ ನೀಡುವ ಮುಖಾಂತರ ಮನೆ ಹಸ್ತಾಂತರಿಸಲಾಯಿತು.ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ಘಟಕದ ಅಧ್ಯಕ್ಷ ನಿಸಾರ್ ಉಪ್ಪಿನಕೋಟೆ, ಅನ್ವರ್ ಸಾದೀಕ್ ಅವರಿಗೆ ಕೀಲಿಕೈ ಕೊಟ್ಟು ಶುಭ ಹಾರೈಸಿದರು. ದೇವದಾಸ ಖಾರ್ವಿಗೆ ಪ್ರೊ‌. ಅಬ್ದುಲ್ ಅಝೀಜ್ ಕೀಲಿಗೈ ಹಸ್ತಾಂತರಿಸಿದರು. 

ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ಘಟಕದ ಅಧ್ಯಕ್ಷ ಅಬ್ದುಲ್ ಕಾದೀರ್ ಮೊಯ್ದಿನ್,ತೋನ್ಸೆ ಪಂಚಾಯತ್ ಅಧ್ಯಕ್ಷೆ ಲತಾ, ಗ್ರಾ.ಪಂ ಸದಸ್ಯರಾದ ಇದ್ರಿಸ್ ಹೂಡೆ,ಅರುಣಾ ಫರ್ನಾಂಡೀಸ್, ಯಶೋದಾ ಡಾ.ಫಹೀಮ್, ಜಮೀಲಾ, ಮಮ್ತಾಝ್,ಕುಸುಮ, ವಿಜಯ್, ಮಾಜಿ ಪಂಚಾಯತ್ ಅಧ್ಯಕ್ಷೆ ಫೌಝಿಯಾ ಸಾದೀಕ್, ಮಾಜಿ ಪಂಚಾಯತ್ ಸದಸ್ಯ ಉಸ್ತಾದ್ ಸಾದೀಕ್ ಮುಂತಾದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply