ಪ್ರೊ. ಎಂ. ಎಲ್. ಸಾಮಗರಿಗೆ ಚಿಟ್ಟಾಣಿ ಪ್ರಶಸ್ತಿ ಹಾಗೂ ಶ್ರೀಮತಿ ಬಿ. ಕೆ. ಸುಮತಿ ರಾವ್ ರಿಗೆ ಟಿ. ವಿ. ರಾವ್ ಪ್ರಶಸ್ತಿ

ಉಡುಪಿಯ ಚಿಟ್ಟಾಣಿ ಅಭಿಮಾನಿ ಬಳಗ ಚಿಟ್ಟಾಣಿ ಸಂಸ್ಮರಣ ಯಕ್ಷಗಾನ ಸಪ್ತಾಹ ಸಂದರ್ಭದಲ್ಲಿ ಪದ್ಮಶ್ರೀ ರಾಮಚಂದ್ರ ಹೆಗಡೆ ಪ್ರಶಸ್ತಿ ಮತ್ತು ಟಿ.ವಿ. ರಾವ್ ಪ್ರಶಸ್ತಿಯನ್ನು ನೀಡುತ್ತಿದ್ದು ಈ ವರ್ಷದ ಚಿಟ್ಟಾಣಿ ಪ್ರಶಸ್ತಿಗೆ ಹಿರಿಯ ಹವ್ಯಾಸಿ ಕಲಾವಿದ ಪ್ರೊ. ಎಂ. ಎಲ್. ಸಾಮಗ ಮತ್ತು ಟಿ.ವಿ. ರಾವ್ ಪ್ರಶಸ್ತಿಗೆ ಹವ್ಯಾಸಿ ಕಲಾವಿದೆ ಶ್ರೀಮತಿ ಬಿ. ಕೆ. ಸುಮತಿ ರಾವ್ ಆಯ್ಕೆಯಾಗಿದ್ದಾರೆ. ನವಂಬರ್ ೫ರಿಂದ ನವಂಬರ್ ೧೧ರ ವರೆಗೆ ಸಪ್ತಾಹ ನಡೆಯಲಿದ್ದು, ನವಂಬರ್ ೧೧ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಅಭಿಮಾನಿ ಬಳಗದ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ಕಾರ್ಯದರ್ಶಿ ಎಮ್. ಗೋಪಿಕೃಷ್ಣ ರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 
 
 
 
 
 
 
 
 
 
 

Leave a Reply