ಪದವಿ ಪರೀಕ್ಷೆ: ಪಿಪಿಸಿಗೆ ಎರಡು ರ‍್ಯಾಂಕ್

ಉಡುಪಿ : ಮಂಗಳೂರು ವಿಶ್ವವಿದ್ಯಾನಿಲಯವು ೨೦೨೧- ೨೨ ನೇ ಸಾಲಿನಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜು ಎರಡುರ‍್ಯಾಂಕುಗಳನ್ನು ಪಡೆದುಕೊಂಡಿದೆ.

ಬಿ.ಬಿ.ಎ. ಪದವಿಯಲ್ಲಿ ಕು. ವರ್ಷಿತಾ ರಮೇಶ ಸುವರ್ಣ ಪ್ರಥಮ ರ‍್ಯಾಂಕ್ ಪಡೆದಿರುತ್ತಾರೆ. ಇವರು ಕನ್ನರ್ಪಾಡಿಯ ರಮೇಶ ಸುವರ್ಣ ಹಾಗೂ ಸುಮತಿ ಆರ್ ಸುವರ್ಣ ಇವರ ಪುತ್ರಿ. ಹಾಗೂ ಕು. ವಿನುತ ಕಾಮತ್ ಒಂಭತ್ತನೇ ರ‍್ಯಾಂಕ್ ಪಡೆದಿರುತ್ತಾರೆ. ಇವರು ಮಲ್ಪೆಯ ಗುರುದತ್ತ ಕಾಮತ್ ಮತ್ತು ಯೋಗಿನಿ ಕಾಮತ್ ಇವರ ಪುತ್ರಿ.

ರ‍್ಯಾಂಕ್ ಪಡೆದ ಪ್ರತಿಭಾವಂತ ವಿದ್ಯಾರ್ಥಿನಿಯರನ್ನು ಕಾಲೇಜಿನ ಆಡಳಿತ ಮಂಡಳಿ,
ಪ್ರಾoಶುಪಾಲರು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿವೃಂದ ಅಭಿನಂದಿಸಿರುತ್ತಾರೆ.

 

 
 
 
 
 
 
 
 
 
 
 

Leave a Reply