ಸ್ಟ್ರಿಂಗ್ ಆರ್ಟ್( ನೂಲು ಕಲೆ )ನಲ್ಲಿ ಉಡುಪಿಯ ಹುಡುಗ ಗಗನ್ ಜೆ ಸುವರ್ಣರ ಸಾಧನೆ :

 ಮೂಲತಃ ಉಡುಪಿ ಕೊಡವೂರಿನ ಜ್ಞಾನೇಂದ್ರ ಸುವರ್ಣ ಹಾಗೂ ವಾಣಿ ದಂಪತಿಗಳ ಪುತ್ರರಾದ ಗಗನ್ ಜೆ ಸುವರ್ಣರವರು ಸ್ಟ್ರಿಂಗ್ ಆರ್ಟ್( ನೂಲು ಕಲೆಯಲ್ಲಿ) ವಿಶಿಷ್ಟ ಸಾಧನೆ ಮಾಡಿದ್ದಾರೆ .

ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಅಭ್ಯಸಿಸುತ್ತಿರುವ ಇವರು ಸುಮಾರು 200 ಸಣ್ಣ ಕಬ್ಬಿಣದ ಮೊಳೆಗಳನ್ನು ಹಾಗೂ 2,500 ನೂಲಿನ ಉಂಡೆಗಳನ್ನು ಉಪಯೋಗಿಸಿ ಕಾಂತಾರ ಸಿನಿಮಾದ ಪುಟ್ಟ ಪ್ರತಿ ಕೃತಿಯನ್ನು ರಚಿಸಿದ್ದಾರೆ.

70 ಸೆಂಟಿಮೀಟರ್ & 61 ಸೆಂಟಿಮೀಟರ್ ಉದ್ದದ ಈ ಪ್ರತಿ ಕೃತಿಯು ಅತಿ ಚಿಕ್ಕ ಸ್ಟ್ರಿಂಗ್ ಆರ್ಟ್ ಪ್ರತಿ ಕೃತಿ ಎಂದು ಪರಿಗಣಿಸಲ್ಪಟ್ಟಿದ್ದು ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಗುರುತಿಸಲ್ಪಟ್ಟಿದೆ.

ಸ್ಟ್ರಿಂಗ್ ಆರ್ಟ್ ನಲ್ಲಿ ಸಾಧನೆ ಮಾಡಿದ ಉಡುಪಿಯ ಹುಡುಗ ಗಗನ್ ಜೆ ಸುವರ್ಣ ರವರಿಗೆ ಅಭಿನಂದನೆಗಳು.

 
 
 
 
 
 
 
 
 
 
 

Leave a Reply