ಸೆಪ್ಟೆಂಬರ್ 19 ಗಣೇಶ ಚತುರ್ಥಿ ರಜೆ ನೀಡಲು ಸರಕಾರಕ್ಕೆ ಶಾಸಕ ಯಶ್ ಪಾಲ್ ಸುವರ್ಣ ಆಗ್ರಹ.

ಕರಾವಳಿ ಜಿಲ್ಲೆಗಳಲ್ಲಿ ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ 19 ರಂದು ಸಾರ್ವಜನಿಕರು, ವಿವಿಧ ಸಮಿತಿಗಳು ಗಣೇಶೋತ್ಸ ವವನ್ನು ಶ್ರದ್ಧಾಭಕ್ತಿಯಿಂದ ಆಚರಿಸುತ್ತಿದ್ದು, ಸರಕಾರ ಸೆಪ್ಟೆಂಬರ್ 18 ಕ್ಕೆ ರಜೆಯನ್ನು ನೀಡಿದ್ದು ಇದರಿಂದ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿದೆ.

ಸರ್ಕಾರ ಈ ಬಗ್ಗೆ ಪುನರ್ ಪರಿಶೀಲನೆ ನಡೆಸಿ ಶಾಲಾ ಕಾಲೇಜು ಸಹಿತ ಸರ್ಕಾರಿ ಕಚೇರಿಗಳಿಗೆ ಸೆಪ್ಟೆಂಬರ್ 19 ರಂದೇ ರಜೆ ನೀಡಿ ಗಣೇಶ ಚತುರ್ಥಿಯನ್ನು ಸಂಭ್ರಮದಿಂದ ಆಚರಿಸಲು ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

Leave a Reply