ತೆಂಕನಿಡಿಯೂರು : ಪ್ರೊ. ಕಬ್ಬಡಿ – ಅರ್ಥನಾರಿಶ್ವರ ತಂಡ ಚಾಂಪಿಯನ್

ಉಡುಪಿ : ತೆಂಕನಿಡಿಯೂರು ಸ್ಪೋರ್ಟ್ಸ್ ಕ್ಲಬ್ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇವರ ಆಶ್ರಯದಲ್ಲಿ ನಡೆದ ಪ್ರೊ. ಕಬ್ಬಡಿ ಚಾಂಪಿಯನ್ ಶಿಫ್ ಪಂದ್ಯಾವಳಿಯಲ್ಲಿ ಮುಟ್ಲುಪಾಡಿಯ ಅರ್ಥನಾರೀಶ್ವರ ತಂಡವು ಚಾಂಪಿಯನ್ ಶಿಫ್‌ಗಳಿಸಿದೆ. ತಂಡವು ಮೂಡಬಿದ್ರೆಯ ಆಳ್ವಾಸ್ ತಂಡವನ್ನು ಮಣಿಸಿತು. ಆಳ್ವಾಸ್ ತಂಡವು ರನ್ರ‍್ಸ್ ಪ್ರಶಸ್ತಿ ಗಳಿಸಿತು. ಉಜಿರೆ ಎಸ್.ಡಿ.ಎಂ. ಕಾಲೇಜು ತಂಡವು ತೃತೀಯ ಸ್ಥಾನಗಳಿಸಿತು. ತತ್ವಮಸಿ ಬಿಗಾಂಬಲ ತಂಡವು ಚತುರ್ಥ ಸ್ಥಾನ ಪಡೆಯಿತು. ಆಳ್ವಾಸ್‌ನ ವಿಶ್ವನಾಥ್ ಅತ್ಯುತ್ತಮ ರೈಡರ್. ಅರ್ಥನಾರೀಶ್ವರ ತಂಡದ ಪ್ರೀತಮ್ ಅತ್ಯುತ್ತಮ ಡಿಪೆಂಡರ್, ಎಸ್.ಡಿ.ಎಂ.ನ ಶಶಾಂಕ್ ಸರ್ವಾಂಗೀಣ ಆಟಗಾರ ಪ್ರಶಸ್ತಿ ಗಳಿಸಿದರು. ಒಟ್ಟು ಹದಿನಾರು ತಂಡಗಳು ಭಾಗವಹಿಸಿದ್ದವು.

ಶಾಸಕ ರಘುಪತಿ ಭಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ತೆಂಕನಿಡಿಯೂರು ವಿದ್ಯಾಸಂಸ್ಥೆಗಳನ್ನು ಕ್ರೀಡೆಯಲ್ಲಿ ಇನ್ನಷ್ಟು ಸಬಲೀಕರಣಗೊಳಿಸಲು ಕ್ರಮಕೈಗೊಳ್ಳಲಾಗುವುದಾಗಿ ಹೇಳಿದರು. ಪ್ರಾಂಶುಪಾಲ ಡಾ. ಗಣನಾಥ ಎಕ್ಕಾರು ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಹರಿಯಪ್ಪ ಕೋಟ್ಯಾನ್ ಶಿಕ್ಷಣ ತಜ್ಞ ದಯಾನಂದ ಶೆಟ್ಟಿ ಕೊಜಕುಳಿ, ಪ್ರಾಂಶುಪಾಲ ವಿಶ್ವನಾಥ ಕರಬ ಅತಿಥಿಗಳಾಗಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ತೆಂಕನಿಡಿಯೂರು ಸ್ಪೋರ್ಟ್ಸ್ ಕ್ಲಬ್‌ವತಿಯಿಂದ ನಿವೃತ್ತ ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಎಸ್. ಹೆಗ್ಡೆ, ಪ್ರಾಂಶುಪಾಲ ಡಾ. ಗಣನಾಥ ಶೆಟ್ಟಿ ಎಕ್ಕಾರು, ಕಾಲೇಜಿ ಸಿಬ್ಬಂದಿ ಯು. ಶೇಖ್ ಸಾಬ್ಜಾನ್ ಸಾಹೇಬ್, ಪೊಲೀಸ್ ಇನ್ಸ್ಫೆಕ್ಟರ್ ಪ್ರಮೋದ್ ಕುಮಾರ್, ಕಾತ್ಯಾಯಿನಿ ಆಳ್ವ ಇವರನ್ನು ಸನ್ಮಾನಿಸಲಾಯಿತು. ಪ್ರಸ್ತಾವನೆಯೊಂದಿಗೆ ದೈಹಿಕ ಶಿಕ್ಷಣ ನಿರ್ದೇಶಕರ ಡಾ. ರಾಮಚಂದ್ರ ಪಾಟ್ಕರ್ ಸ್ವಾಗತಿಸಿದರು. ಕನ್ನಡ ಉಪನ್ಯಾಸಕಿ ರತ್ನಮಾಲಾ ವಂದಿಸಿದರೆ, ತೇಜಸ್ ಬಂಗೇರ ಕಾರ್ಯಕ್ರಮ ನಿರ್ವಹಿಸಿದರು.

 
 
 
 
 
 
 
 
 
 
 

Leave a Reply