ಮಧ್ವಾಚಾರ್ಯರು ಹಾಕಿಕೊಟ್ಟ ಸಂಪ್ರದಾಯವನ್ನು ನ್ಯಾಯಪೀಠ ಎತ್ತಿ ಹಿಡಿದಿದೆ~ ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು

ಉಡುಪಿ: ಶೀರೂರು ಮಠದ ಉತ್ತರಾಧಿಕಾರಿ ನೇಮಕ ವಿಚಾರದಲ್ಲಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯದ ಕ್ರಮ ಸ್ವಾಗತಾರ್ಹ ಎಂದಿರುವ ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ಇದು ನ್ಯಾಯಕ್ಕೆ ಸಂದ ಜಯ ಎಂದು ವಿಶ್ಲೇಷಿಸಿದ್ದಾರೆ.

ದ್ವಂದ್ವ ಮಠಾಧೀಶರ ನೆಲೆಯಲ್ಲಿ ನಾವು ಶೀರೂರು ಮಠದ ಆಡಳಿತವನ್ನು ಸುಮಾರು ಎರಡು ಮುಕ್ಕಾಲು ವರ್ಷಗಳ ಕಾಲ ವಹಿಸಿ. ಕಳೆದ ಮೇ ತಿಂಗಳಿನಲ್ಲಿ ಶೀರೂರು ಮೂಲಮಠದಲ್ಲಿ ಓರ್ವ ಯೋಗ್ಯ ವಟುವಿಗೆ ಶ್ರೀ ವೇದವರ್ಧನತೀರ್ಥ ಎಂಬ ನಾಮಾಂಕಿತದಿಂದ ಸನ್ಯಾಸ ದೀಕ್ಷೆ ನೀಡಿ ಅವರನ್ನು ಶೀರೂರು ಮಠಕ್ಕೆ ಪೀಠಾಧಿಪತಿಯನ್ನಾಗಿ ನೇಮಿಸಿದ್ದೆವು.

ಆ ಕಾರ್ಯವನ್ನು ಪ್ರಶ್ನಿಸಿ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ದಾಖಲಿಸಲ್ಪಟ್ಟ ರಿಟ್ ಅರ್ಜಿಯನ್ನು ನ್ಯಾಯಾಲಯ, ಸುಧೀರ್ಘವಾಗಿ ವಿಮರ್ಶಿಸಿ ತಿರಸ್ಕರಿಸಿರುವುದು ನ್ಯಾಯಕ್ಕೆ ಸಂದ ಜಯ ಎಂದವರು ತಿಳಿಸಿದ್ದಾರೆ. ಸುಮಾರು 800 ವರ್ಷಗಳಿಂದ ನಡೆದುಬಂದ ನಮ್ಮ ಮೂಲ ಗುರುಗಳಾದ ಶ್ರೀ ಮಧ್ವಾಚಾರ್ಯರು ಹಾಕಿಕೊಟ್ಟ ಸಂಪ್ರದಾಯವನ್ನು ನ್ಯಾಯಪೀಠ ಎತ್ತಿಹಿಡಿದಿ ರುವುದು ನಮಗೆ ಅತೀವ ಸಂತೋಷವಾಗಿದೆ.

ನಾವು ಈ ಹಿಂದೆಯೇ ಹೇಳಿದಂತೆ ಎಲ್ಲಾ ಸಂದರ್ಭಗಳಲ್ಲಿಯೂ ನಮ್ಮ ಕಾರ್ಯಚಟುವಟಿಕೆಗಳ ಪಾರದರ್ಶಕತೆಗೆ ನಾವು ಆರಾಧಿಸುತ್ತಿರುವ ಶ್ರೀಕೃಷ್ಣ ಮುಖ್ಯಪ್ರಾಣ ಹಾಗೂ ನಮ್ಮ ಮಠದ ಪಟ್ಟದ ದೇವರಾದ ಶ್ರೀ ಭೂವರಾಹ ಹಯಗ್ರೀವ ದೇವರು ಮತ್ತು ವಾದಿರಾಜರು ಭೂತರಾಜರೇ ಸಿ.ಸಿ. ಕ್ಯಾಮೆರಾದಂತಿದ್ದಾರೆ ಎಂದು ಸೋದೆ ಶ್ರೀಪಾದರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

 
 
 
 
 
 
 
 
 
 
 

Leave a Reply