ಸತ್ಯ ಹಾಗೂ ನಿಷ್ಠೆಗೆ ಸಂದ ಗೆಲುವು~ ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು

ಉಡುಪಿ: ಶೀರೂರು ಮಠದ ಪೀಠಾಧಿಪತಿಗಳ ಆಯ್ಕೆ ವಿಚಾರದಲ್ಲಿ ಉಚ್ಛ ನ್ಯಾಯಾಲಯ ನೀಡಿರುವ ತೀರ್ಪು ನ್ಯಾಯ ಸಮ್ಮತವಾದುದು ಎಂದು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಪ್ರತಿಕ್ರಿಯಿಸಿದ್ದಾರೆ.
ನಮಗೆ ಅತ್ಯಂತ ಆತ್ಮೀಯರಾದ ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ದ್ವಂದ್ವ ಮಠದ ನೆಲೆಯಲ್ಲಿ ತಮಗೆ ಅನಿರೀಕ್ಷಿತವಾಗಿ ಒದಗಿಬಂದ ಶೀರೂರು ಮಠದ ಆಡಳಿತವನ್ನು ಸುಮಾರು ಎರಡು ಮುಕ್ಕಾಲು ವರ್ಷಗಳ ಕಾಲ ಬಹಳ ಅಚ್ಚುಕಟ್ಟಾಗಿ, ಪಾರದರ್ಶಕತೆಯಿಂದ ನಿರ್ವಹಿಸಿದ್ದಲ್ಲದೇ ಶೀರೂರು ಮಠಕ್ಕೆ ಒಬ್ಬ ಯೋಗ್ಯ ವಟುವನ್ನು ಉತ್ತರಾಧಿಕಾರಿಯನ್ನಾಗಿ ಆರಿಸಿ, ಅವರಿಗೆ ಸನ್ಯಾಸಾಶ್ರಮ ದೀಕ್ಷೆ ನೀಡಿ ಶ್ರೀ ವೇದವರ್ಧನತೀರ್ಥರು ಎಂಬ ಆಶ್ರಮ ನಾಮ ವನ್ನಿತ್ತರು.

ಈ ವಿಚಾರ ಕುರಿತು ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ದಾಖಲಾದ ರಿಟ್ ಅರ್ಜಿಯ ತೀರ್ಪನ್ನು ನ್ಯಾಯಾಲಯ ಹೊರಡಿಸಿರುವುದು ಸ್ವಾಗತಾರ್ಹ.  ಈ ತೀರ್ಪಿನಿಂದಾಗಿ ನಮ್ಮ ಮನಸ್ಸಿಗೆ ಬಹಳ ಸಂತೋಷವಾಗಿದ್ದು. ಇದು ಸತ್ಯ ಹಾಗೂ ನಿಷ್ಠೆಗೆ ಸಂದ ಗೆಲುವಾಗಿದೆ ಎಂದು ಕಾಣಿಯೂರು ಶ್ರೀಗಳು ತಿಳಿಸಿದ್ದಾರೆ

 
 
 
 
 
 
 
 
 
 
 

Leave a Reply