Janardhan Kodavoor/ Team KaravaliXpress
21.6 C
Udupi
Thursday, December 8, 2022
Sathyanatha Stores Brahmavara

ಮಣಿಪಾಲದಲ್ಲಿ ವಿಭಾಜಕ ಬೇಲಿ ಹತ್ತಿದ ಕಾರ್ 

ನಿನ್ನೆ ರಾತ್ರಿ ಮಣಿಪಾಲ ಪೊಲೀಸ್ ಠಾಣೆ ಹತ್ತಿರ ಏಕಮುಖ ರಸ್ತೆಯಲ್ಲಿ (ವಿರುದ್ಧ ದಿಕ್ಕಿಂದ ಬಂದಂತೆಇದೆ) ರಸ್ತೆ ವಿಭಾಜಕಕ್ಕೆ ಹೊಡೆದು ವಿಭಾಜಕ ಬೇಲಿಯಲ್ಲಿ ಸಿಲುಕಿರುವ ಕಾರು.

ಉಡುಪಿ~ ಮಣಿಪಾಲದಲ್ಲಿ ರಾಂಗ್ ಸೈಡಿನಿಂದ ಗಾಡಿ ಓಡಿಸುವವರ ಸಂಖ್ಯೆ ಜಾಸ್ತಿಯಾಗಿದೆ. ಶಾರದಾ ಕಲ್ಯಾಣಮಂಟಪ ಜಂಕ್ಷನ್, ಎಂಜಿಎಂ, ಕೊಂಕಣ ರೈಲ್ವೆ, ಇಂದ್ರಾಳಿ, ಪಶುಪತಿಕೃಪಾ ಜಂಕ್ಷನ್ ಗಳಲ್ಲಿ ಕಾರ್, ರಿಕ್ಷಾ, ಹೆವಿ ವೆಹಿಕಲ್ಸ್  ನವರು ವಿರುದ್ಧ ದಿಕ್ಕಿನಲ್ಲಿ ಬರುವವರ ಸಂಖ್ಯೆ ದಿನೇ ದಿನೇ  ಜಾಸ್ತಿಯಾಗಿದೆ ಹೆಚ್ಚಾಗಿದೆ. ಹಲವಾರು ಅಪಘಾತಗಳು  ಈಗಾಗಲೇ ಆಗಿದೆ. ಪೊಲೀಸ್ ನವರು ಒಂದು ದಿನ ಇದ್ದರೆ ಮತ್ತೆ ಒಂದು ವಾರ ಆ ಬದಿ ಮುಖ ಮಾಡೋಲ್ಲ. 

ಸಾರ್ವಜನಿಕರ ಜೀವದಲ್ಲಿ ಚೆಲ್ಲಾಟ ಆಡುವ  ಈ ರಾಂಗ್ ಸೈಡಿನಿಂದ ಗಾಡಿ ಓಡಿಸುವವರ ಬಗ್ಗೆ ಪೊಲೀಸ್ ಇಲಾಖೆ ಎಚ್ಚರಗೊಳ್ಳದಿದ್ದಲ್ಲಿ ಮುಂದಾಗುವ ಅನಾಹುತಕ್ಕೆ ಪೊಲೀಸರೇ ಹೊಣೆಗಾರರಾಗುತ್ತಾರೆ  ಎಂದು ಸ್ಥಳೀಯರು ಮಾತನಾಡಿ ಕೊಳ್ಳುತ್ತಿದ್ದಾರೆ.   

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!